Advertisement

ಅನುಮಾನಕ್ಕೆ ಎಡೆಮಾಡಿಕೊಟ್ಟ ಶಿಕ್ಷಕ ಹುದ್ದೆ ಸಂದರ್ಶನ

03:32 PM Jan 18, 2021 | Team Udayavani |

ಕುಷ್ಟಗಿ: ತುಮಕೂರು ಜಿಲ್ಲೆಯ ಶಿರಾ ಶಿಕ್ಷಣ ಸಂಸ್ಥೆಯ, ರಾಯಚೂರು ಜಿಲ್ಲೆಯ ಸಿಂಧನೂರಿನ ಹಿರೇಬೇಗೇರಿ ಪ್ರೌಢಶಾಲೆಯೊಂದಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಸಂದರ್ಶನ ಏರ್ಪಡಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆರಂಭಿಕ
ಗೊಂದಲದಿಂದಾಗಿ ನೂರಕ್ಕೂ ಅಧಿಕ ಸಂದರ್ಶನಾರ್ಥಿಗಳಿಗೆ ನಿರಾಸೆಯಾದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಿರೇಬೇಗೇರಿ ಧ್ರುವ ಸಾರ್ವಜನಿಕ ವಿದ್ಯಾ ಸಂಸ್ಥೆ ಮಾಗೋಡ ಸಂಸ್ಥೆಯ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹಿರೇಬೇಗೇರಿ ಧ್ರುವ ಗ್ರಾಮಾಂತರ ಪ್ರೌಢಶಾಲೆಗೆ ಶಿಕ್ಷಕ ಹುದ್ದೆ ಅರ್ಜಿ
ಆಹ್ವಾನಿಸಲಾಗಿತ್ತು. ಈ ಅನುದಾನಿತ ಪ್ರೌಢಶಾಲೆಯ 8 ಹುದ್ದೆಗಳಿಗೆ ಸಂದರ್ಶನ ನಡೆಯುವ ಸ್ಥಳ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಎಂದು ಉಲ್ಲೇಖೀಸಿ ಸಂದರ್ಶನದ ಜಾಹೀರಾತನ್ನು ಪತ್ರಿಕೆಯೊಂದರಲ್ಲಿ
ಪ್ರಕಟಿಸಲಾಗಿತ್ತು. ಆದರೆ ಸಂದರ್ಶನ ಸ್ತಳ ಕುಷ್ಟಗಿ ಪಟ್ಟಣದ ಸಂಗೋಳ್ಳಿ ರಾಯಣ್ಣ ಪ್ರೌಢಶಾಲೆಗೆ ಏಕಾಏಕಿ ಬದಲಾವಣೆಯಾಗಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.

ಈ ಜಾಹೀರಾತು ನಂಬಿ ರಾಜ್ಯದ ತುಮಕೂರು, ದಾವಣಗೆರೆ ಕೊಪ್ಪಳ, ರಾಯಚೂರು ಜಿಲ್ಲೆಗಳ ಶಿಕ್ಷಕ ಆಕಾಂಕ್ಷಿಗಳು ರವಿವಾರ ಸಂದರ್ಶನಕ್ಕೆ ಆಗಮಿಸಿದ್ದರು. ಈ ಸಂದರ್ಶನಕ್ಕೆ ಸ್ಥಳೀಯ ಬಿಇಒ ಹಾಗೂ ಕೊಪ್ಪಳ ಜಿಲ್ಲೆಯ ಡಿಡಿಪಿಐ ಅನುಮತಿ ಇಲ್ಲ ಎನ್ನುವ ಆರೋಪ ವ್ಯಕ್ತವಾಯಿತು. ಅಲ್ಲದೇ ಸಿಂಧನೂರು ತಾಲೂಕಿನ ಹಿರೇಬೇಗೇರಿ ಗ್ರಾಮದಲ್ಲಿನ ಧ್ರುವ ಪ್ರೌಢಶಾಲೆ ಸಂದರ್ಶನದ ಸ್ಥಳ ಬದಲಾವಣೆ ಸಂದರ್ಶನಾರ್ಥಿಗಳ ಪ್ರಶ್ನೆಗಳಿಗೆ ಸಂದರ್ಶಕರು ಕಕ್ಕಾಬಿಕ್ಕಿಯಾದರು. ಅವರ ಜೊತೆಯಲ್ಲಿದ್ದ
ಸಹವರ್ತಿಗಳು ಗೊಂದಲವೇಳುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು.

ಇದನ್ನೂ ಓದಿ:ಮಾವಿನ ಬೆಳೆಗೆ ಅಕಾಲಿಕ ಮಳೆ ಕರಿನೆರಳು : ಭರ್ಜರಿ ಇಳುವರಿ ಕನಸು ಈಗ ನುಚ್ಚುನೂರು

ಸಂದರ್ಶನಾರ್ಥಿಗಳು ಸಂದರ್ಶನ ಬಹಿಷ್ಕರಿಸಿ, ಪಾವತಿಸಿದ 1 ಸಾವಿರ ರೂ. ಡಿಡಿ ವಾಪಸ್‌ ನೀಡಬೇಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ತಿಮ್ಮಣ್ಣ ನಾಯಕ್‌ ಮಧ್ಯ ಪ್ರವೇಶಿಸಿ, ಇಲ್ಲಿ ಗದ್ದಲ ಮಾಡದಿರಿ ಕೂಡಲೇ ಸಂದರ್ಶನಾರ್ಥಿಗಳ ಡಿಡಿ ಹಣ ವಾಪಸ್‌ ನೀಡಬೇಕೆಂದು ಸೂಚಿಸಿದರಲ್ಲದೇ, ಸಂದರ್ಶನ ಆಯೋಜಿಸಿದ ಸಂಸ್ಥೆಯ ಮೇಲೆ ಅನುಮಾನವಿದ್ದರೆ ದೂರು ಸಲ್ಲಿಸಿ. ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

Advertisement

ಸಿಂಧನೂರು ತಾಲೂಕಿನ ಅನುದಾನಿತ ಶಾಲೆಯೊಂದರ ಶಿಕ್ಷಕರ ನೇಮಕಾತಿಗೆ ನೇರ ಸಂದರ್ಶನಕ್ಕೆ ನಮ್ಮ ಸಂಸ್ಥೆಯ (ಸಂಗೊಳ್ಳಿ ರಾಯಣ್ಣ) ಕೊಠಡಿ ಕೇಳಿದ್ದರು. ಸಿಂಧನೂರಿನ ಅನುದಾನಿತ ಶಾಲೆಯ ಅಧ್ಯಕ್ಷರು ಕುಷ್ಟಗಿ ಪಟ್ಟಣದವರಾಗಿದ್ದರಿಂದ ಸಂದರ್ಶನಕ್ಕೆ ಬಳಸಿಕೊಳ್ಳಲು ಕೊಠಡಿ ನೀಡಿದ್ದೆ. ಸದರಿ ಶಾಲೆ ಅಧಿಕೃತವೋ, ಅನಧಿಕೃತವೋ ಮಾಹಿತಿ ಇಲ್ಲ.

– ಸುಂದರ್‌ ಚೌಡಕಿ, ಸಂಗೋಳ್ಳಿ ರಾಯಣ್ಣ ಶಿಕ್ಷಣ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next