Advertisement

ಮಾತಿನ ಮತ, ಸಂದರ್ಶನ

01:29 PM Apr 01, 2018 | Team Udayavani |

ಕೋಮುವಾದಿಗಳ ಹಿಮ್ಮೆಟ್ಟಿಸಲು ಸ್ಪರ್ಧೆ

Advertisement

ಕಳೆದ ವರ್ಷ ಎಲ್ಲಿ ನಿಮಗೆ ಹಿನ್ನಡೆಯಾಗಿತ್ತು?
ಕಳೆದ ಚುನಾವಣೆ ಎಸ್‌ಡಿಪಿಐ ಪಕ್ಷಕ್ಕೆ ಪ್ರಥಮ ಚುನಾವಣೆ. ಹೀಗಾಗಿ ಅಲ್ಲಿ ಹಿನ್ನಡೆಯ ಪ್ರಶ್ನೆಯಿಲ್ಲ. ನಮಗೆ ರಾಜಕೀಯ ಹೊಸ ಅನುಭವ ಆದ ಕಾರಣ ನಾವು ಎಷ್ಟೇ ಮತ ಪಡೆದರೂ ಅದು ನಮ್ಮ ಪ್ಲಸ್‌ ಪಾಯಿಂಟ್‌. ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಈ ಬಾರಿಯೂ ಪಕ್ಷ ಸ್ಪರ್ಧಿಸಲಿದೆ.

ಈ ಬಾರಿ ಸ್ಪರ್ಧೆ ಮಾಡುವ ಆಲೋಚನೆ ಇದೆಯೇ?
ಮಂಗಳೂರಿನ ಮೂರು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡುವ ಕುರಿತು ಇನ್ನಷ್ಟೇ ತೀರ್ಮಾನವಾಗಬೇಕಿದೆ. ಪಕ್ಷ ಸ್ಪರ್ಧಿಸಬೇಕು ಎಂದು ಸೂಚಿಸಿದರೆ ಖಂಡಿತವಾಗಿಯೂ ಅಭ್ಯರ್ಥಿಯಾಗುತ್ತೇನೆ. ಅನ್ಯರಿಗೆ ಅವಕಾಶ ನೀಡಿದರೆ ಅವರ ಪರವಾಗಿ ಕೆಲಸ ಮಾಡಲಿದ್ದೇನೆ. ಒಟ್ಟಿನಲ್ಲಿ ಈ ಬಾರಿ ನಾವು ಬಲಿಷ್ಠವಾಗಿದ್ದು, ಹೆಚ್ಚಿನ ಮತ ಗಳಿಸಲಿದ್ದೇವೆ.

ನಿಮ್ಮ ಪಕ್ಷ ಈ ಬಾರಿ ಯಾವ ಭರವಸೆಯೊಂದಿಗೆ ಸ್ಪರ್ಧೆ ಮಾಡಲಿದೆ?
ಹಸಿವುಮುಕ್ತ, ಭಯಮುಕ್ತ ಸಮಾಜ ನಿರ್ಮಾಣವೇ ನಮ್ಮ ಪಕ್ಷದ ಪ್ರಮುಖ ಉದ್ದೇಶ. ಸಮಾನತೆ, ಸಾಮಾಜಿಕ ನ್ಯಾಯ, ಕಾನೂನು ಸೂಕ್ತ ಸುವ್ಯವಸ್ಥೆ ಕಾಪಾಡುವ ಕುರಿತು ಎಸ್‌ಡಿಪಿಐ ಜನರಿಗೆ ಭರವಸೆ ನೀಡಲಿದೆ.

ನಿಮ್ಮ ಪಕ್ಷ ಮತ ವಿಭಜನೆ ಮಾಡುತ್ತದೆ ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಇಂತಹ ಸುಳ್ಳು ಆರೋಪಗಳ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸಕಾರಾತ್ಮಕ ರಾಜಕೀಯವೇ ನಮ್ಮ ಮೂಲ ಉದ್ದೇಶವಾಗಿದ್ದು, ಚುನಾವಣೆಯನ್ನು ಎದುರಿಸಲು ನಮ್ಮ ಪಕ್ಷ ಪೂರ್ಣ ರೀತಿಯಲ್ಲಿ ಸನ್ನದ್ಧವಾಗಿದೆ. ಜಾತ್ಯತೀತ ವ್ಯವಸ್ಥೆಯ ಮೇಲೆ ಪ್ರೀತಿ ಹೊಂದಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.

Advertisement

ಈ ಬಾರಿ ಯಾವ ರೀತಿ ಸಿದ್ಧತೆ ನಡೆಸಿದ್ದೀರಿ?
ಮೂರು-ನಾಲ್ಕು ತಿಂಗಳ ಹಿಂದಿನಿಂದಲೇ ನಾವು ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆ. ಕಾರ್ಯಕರ್ತರನ್ನು ಒಟ್ಟು ಸೇರಿಸುವುದು, ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಯ ಕೆಲಸ ಮಾಡಿದ್ದೇವೆ. ಪ್ರಸ್ತುತ ಬಂಟ್ವಾಳದಲ್ಲಿ ಅಭ್ಯರ್ಥಿ ಅಂತಿಮಗೊಂಡಿದ್ದು, ಪ್ರಚಾರ ಕಾರ್ಯವೂ ಆರಂಭಗೊಂಡಿದೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next