Advertisement

Science:ಅಂತರತಾರಾ ಒಳನೋಟ-ಸೌರ ಮಾರುತಗಳ ರಹಸ್ಯ ಅನಾವರಣಗೊಳಿಸಲಿದೆ Aditya Lನ ಸ್ವಿಸ್ ಉಪಕರಣ

10:43 AM Dec 03, 2023 | Team Udayavani |

ಆದಿತ್ಯ ಎಲ್1 ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾಗಿದ್ದು, ಸೂರ್ಯ ಮತ್ತು ಅದರ ವಿವಿಧ ಚಟುವಟಿಕೆಗಳನ್ನು ಗಮನಿಸಲು ಮೀಸಲಾಗಿದೆ. ಇದನ್ನು ಸೆಪ್ಟೆಂಬರ್ 2, 2023ರಂದು ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು. ಈ ಉಪಗ್ರಹ 1,475 ಕೆಜಿ ತೂಕ ಹೊಂದಿದ್ದು, ಸೂರ್ಯನ ವಾತಾವರಣ, ಸೌರ ಮಾರುತಗಳು, ಸೂರ್ಯನ ಕಾಂತಕ್ಷೇತ್ರ ಹಾಗೂ ಬಾಹ್ಯಾಕಾಶ ಹವಾಮಾನವನ್ನು ಅಧ್ಯಯನ ನಡೆಸಲು ಏಳು ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.

Advertisement

ಈ ಉಪಗ್ರಹ ಪ್ರಸ್ತುತ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್-1) ಬಿಂದುವಿನೆಡೆಗೆ ಚಲಿಸುತ್ತಿದ್ದು, ಇಲ್ಲಿ ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣಾ ಬಲ ಒಂದಕ್ಕೊಂದು ಸಮವಾಗಿರುತ್ತದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಉಪಗ್ರಹ ಹಲವು ಕಕ್ಷೆ ಎತ್ತರಿಸುವ ಪ್ರಕ್ರಿಯೆಗಳ ಬಳಿಕ, ಎಲ್1 ಬಿಂದುವಿನ ಸುತ್ತಲಿನ ತನ್ನ ಉದ್ದೇಶಿತ ಕಕ್ಷೆಯನ್ನು ಜನವರಿ 7, 2024ರಂದು ತಲುಪಲಿದೆ.

ಆದಿತ್ಯ ಎಲ್1 ಉಪಗ್ರಹ ಏಳು ಉಪಕರಣಗಳು ಅಥವಾ ಪೇಲೋಡ್‌ಗಳನ್ನು ಹೊಂದಿದ್ದು, ಸದಾ ಬದಲಾಗುವ ಮತ್ತು ಊಹಿಸಲಸಾಧ್ಯವಾದ ಗುಣಗಳನ್ನು ಹೊಂದಿರುವ ಸೂರ್ಯನ ವಿವಿಧ ಆಯಾಮಗಳನ್ನು ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ. ಈ ಏಳು ಉಪಕರಣಗಳ ಪೈಕಿ, ನಾಲ್ಕು ಉಪಕರಣಗಳು ನೇರವಾಗಿ ಸೂರ್ಯನನ್ನು ಅಧ್ಯಯನ ನಡೆಸಲು ಉದ್ದೇಶಿಸಿದ್ದರೆ, ಉಳಿದ ಮೂರು ಉಪಕರಣಗಳು ವಿವಿಧ ಗ್ರಹಗಳ ನಡುವಿನ ಅವಕಾಶದಲ್ಲಿ ಸೂರ್ಯನ ಪರಿಣಾಮ ಹೊಂದಿರುವ ಬಾಹ್ಯಾಕಾಶ ವಾತಾವರಣವನ್ನು ಅಧ್ಯಯನ ನಡೆಸಲಿವೆ. ಆದಿತ್ಯ ಎಲ್1 ಯೋಜನೆಯ ಈ ಏಳು ಪೇಲೋಡ್‌ಗಳನ್ನು ನಿರ್ಮಿಸಲು ಭಾರತದಾದ್ಯಂತ ವಿವಿಧ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಕೈಜೋಡಿಸಿವೆ.

• ವಿಇಎಲ್‌ಸಿ ಉಪಕರಣವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ ನಲ್ಲಿ ನಿರ್ಮಿಸಲಾಗಿದೆ.

• ಎಸ್‌ಯುಐಟಿ ಉಪಕರಣವನ್ನು ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆ್ಯಸ್ಟ್ರಾನಮಿ ಆ್ಯಂಡ್ ಆ್ಯಸ್ಟ್ರೋಫಿಸಿಕ್ಸ್ ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

Advertisement

• ಆ್ಯಸ್ಪೆಕ್ಸ್ (ASPEX) ಉಪಕರಣ ಅಹ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ನಿರ್ಮಾಣಗೊಂಡಿದೆ.

• ಪಾಪಾ ಪೇಲೋಡ್ (PAPA) ತಿರುವನಂತಪುರಂನ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್‌ನ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿಯಲ್ಲಿ ನಿರ್ಮಿಸಲಾಗಿದೆ.

• SoLEXS ಹಾಗೂ HEL1OS ಪೇಲೋಡ್‌ಗಳನ್ನು ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

• ಇನ್ನು ಮ್ಯಾಗ್ನೆಟೋಮೀಟರ್ ಪೇಲೋಡ್ ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಇಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ನಲ್ಲಿ ತಯಾರಾಗಿದೆ.

ನವೆಂಬರ್ 7ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯ HEL1OS ಉಪಕರಣ ಒಂದು ಸೌರ ಜ್ವಾಲೆಯ ಆರಂಭಿಕ ಹಂತವನ್ನು ಗುರುತಿಸಿದೆ ಎಂದು ಘೋಷಿಸಿತು. ಈ ಸೌರ ಜ್ವಾಲೆಯಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆ ಹೊಂದಿತ್ತು. ಆದಿತ್ಯ ಎಲ್1 ಉಡಾವಣೆಗೊಂಡ ಎರಡು ತಿಂಗಳ ಒಳಗಾಗಿ, ಅಂದರೆ ಅಕ್ಟೋಬರ್ 29ರಂದು ಈ ಬೆಳವಣಿಗೆಯನ್ನು ಗಮನಿಸಲಾಗಿದೆ.

ಶನಿವಾರ (ಡಿಸೆಂಬರ್ 2) ಇಸ್ರೋ ತನ್ನ ಹೇಳಿಕೆಯಲ್ಲಿ ಆದಿತ್ಯ ಎಲ್1 ಒಯ್ದಿರುವ ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ಆ್ಯಸ್ಪೆಕ್ಸ್ – ASPEX) ಪೇಲೋಡ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಬಾಹ್ಯಾಕಾಶ ವಾತಾವರಣದ ಮೇಲೆ ಸೌರ ಮಾರುತದ ಪ್ರಭಾವದ ಕುರಿತು ನಮ್ಮ ಜ್ಞಾನ ಹೆಚ್ಚಿಸುವಂತಹ ಮಾಹಿತಿಗಳನ್ನು ಒದಗಿಸಲಿದೆ ಎಂದಿದೆ.

ಆ್ಯಸ್ಪೆಕ್ಸ್ ಪೇಲೋಡ್ ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್ (ಸ್ವಿಸ್ – SWIS) ಮತ್ತು ಸುಪ್ರಾ ಥರ್ಮಲ್ ಆ್ಯಂಡ್ ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (ಸ್ಟೆಪ್ಸ್ – STEPS) ಎಂಬ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಈಗ ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಸುಗಮವಾಗಿ ಕಾರ್ಯಾಚರಿಸುತ್ತಿದೆ.

ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್

ಸ್ವಿಸ್ ಪೇಲೋಡನ್ನು ನವೆಂಬರ್ 2ರಂದು ಚಾಲ್ತಿಗೊಳಿಸಲಾಗಿದ್ದು, ಅಂದಿನಿಂದಲೂ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ಈ ಉಪಕರಣ ವಿವಿಧ ಸೌರ ಮಾರುತಗಳ ಅಯಾನ್‌ಗಳು ಮತ್ತು ಐಸೋಟೋಪ್‌ಗಳನ್ನು ಅಳೆಯಲು ಬಳಕೆಯಾಗುತ್ತದೆ. ಇನ್ನೊಂದೆಡೆ, ಸ್ಟೆಪ್ಸ್ ಉಪಕರಣ ಸೌರ ಚಟುವಟಿಕೆಗಳಿಂದ ಉತ್ಪತ್ತಿಯಾಗುವ, ವೇಗವಾಗಿ ಚಲಿಸುವ ಚಾರ್ಜ್ ಹೊಂದಿರುವ ಕಣಗಳ ಮಾಹಿತಿಗಳನ್ನು ಕಲೆಹಾಕುತ್ತದೆ. ಈ ಎರಡು ಉಪಕರಣಗಳು ಸೌರ ಮಾರುತಗಳು, ಸೌರ ವಾತಾವರಣಗಳ ನಿಗೂಢತೆಗಳನ್ನು ಭೇದಿಸಿ, ನಮ್ಮ ಸೌರಮಂಡಲದ ಆರಂಭ ಮತ್ತು ಅಭಿವೃದ್ಧಿಯ ಹಿಂದಿನ ರಹಸ್ಯಗಳನ್ನು ತಿಳಿಯಲು ನೆರವಾಗುತ್ತವೆ.

ಸ್ವಿಸ್ ಒಂದು ಅಸಾಧಾರಣ ಉಪಕರಣವಾಗಿದ್ದು, ಸೂರ್ಯನಿಂದ ಹೊರಬರುವ, ಸೌರ ಮಾರುತ ಅಯಾನ್‌ಗಳು ಎಂದು ಕರೆಯಲಾಗುವ, ಅತ್ಯಂತ ಸಣ್ಣ ಗಾತ್ರದ ಕಣಗಳನ್ನೂ ಅಳೆಯಲು ನೆರವಾಗುತ್ತದೆ. ಇವು ಪ್ರೋಟಾನ್ ಮತ್ತು ಆಲ್ಫಾ ಕಣಗಳು ಸೇರಿದಂತೆ ವಿವಿಧ ರೀತಿಯ ಅಯಾನ್‌ಗಳನ್ನು ಒಳಗೊಂಡಿರುತ್ತವೆ. ಸ್ವಿಸ್ ಉಪಕರಣದ ಎರಡು ಘಟಕಗಳನ್ನು ವಿವಿಧ ದೃಷ್ಟಿಕೋನಗಳಿಂದ ವೀಕ್ಷಿಸಲು ಅನುಕೂಲಕರವಾಗಿರುವಂತೆ ಕಾರ್ಯತಂತ್ರದ ದೃಷ್ಟಿಯಿಂದ ಅಳವಡಿಸಲಾಗಿದ್ದು, ಸ್ವಿಸ್ ಸೌರ ಮಾರುತ ಅಯಾನ್‌ಗಳ (ಸೋಲಾರ್ ವಿಂಡ್ ಅಯಾನ್ಸ್) ವರ್ತನೆ ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ಮಹತ್ತರ ಮಾಹಿತಿಗಳನ್ನು ಒದಗಿಸುತ್ತದೆ.

ಸ್ವಿಸ್ ಸೌರ ಮಾರುತದ ಅಯಾನ್‌ಗಳನ್ನು ವಿವಿಧ ದಿಕ್ಕುಗಳಿಂದ ಗಮನಿಸುವುದರಿಂದ, ಅದು ಝ ಅಯಾನ್‌ಗಳನ್ನು ಅತ್ಯಂತ ನಿಖರವಾಗಿ ಅಳೆಯಬಲ್ಲದು. ಇದು ಸೌರ ಮಾರುತದ ಅಯಾನ್ ಭೂಮಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಹಳೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸಹಾಯಕವಾಗಿದೆ. ಸ್ವಿಸ್ ಉಪಕರಣ ಪ್ರೋಟಾನ್‌ಗಳ ಸಂಖ್ಯೆಗೆ ಹೋಲಿಸಿದರೆ, ಆಲ್ಫಾ ಕಣಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸುತ್ತದೆ. ಈ ಬದಲಾವಣೆಗಳು ಸೂರ್ಯನಿಂದ ಹೊರಬರುವ ಬಿಸಿಯ ಉಂಡೆಗಳು ಯಾವಾಗ ಭೂಮಿಯೆಡೆಗೆ ಚಲಿಸುತ್ತವೆ ಎಂದು ಸಂಶೋಧಕರಿಗೆ ತಿಳಿಸುತ್ತವೆ. ಈ ಉಂಡೆಗಳನ್ನು ಇಂಟರ್‌ಪ್ಲಾನೆಟರಿ ಕೊರೋನಲ್ ಮಾಸ್ ಇಜೆಕ್ಷನ್‌ಗಳು (ಐಸಿಎಂಇ) ಎಂದು ಕರೆಯಲಾಗುತ್ತದೆ. ಇವುಗಳು ಬಾಹ್ಯಾಕಾಶ ವಾತಾವರಣದ ತೊಂದರೆಗಳನ್ನು ಉಂಟುಮಾಡುತ್ತವೆ ಎಂದು ಇಸ್ರೋ ವಿವರಿಸಿದೆ.

ಆ್ಯಸ್ಪೆಕ್ಸ್ ಸೌರ ಮಾರುತದ ಅಧ್ಯಯನ ನಡೆಸಲು ಉತ್ತಮ ಉಪಕರಣವಾಗಿದೆ. ಸೌರ ಮಾರುತ ಎನ್ನುವುದು ಸೂರ್ಯನಿಂದ ಹೊರಬರುವ ವಸ್ತುಗಳ ಹರಿವನ್ನು ಸೂಚಿಸುತ್ತದೆ. ಸೌರ ಮಾರುತಗಳು ಭೂಮಿ ಮತ್ತು ಇತರ ಗ್ರಹಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಜಗತ್ತಿನಾದ್ಯಂತ ಇರುವ ವಿಜ್ಞಾನಿಗಳು ಸೌರ ಮಾರುತಗಳ ಗುಣ ಸ್ವಭಾವಗಳು ಮತ್ತು ರಹಸ್ಯಗಳ ಕುರಿತು ಆ್ಯಸ್ಪೆಕ್ಸ್ ಏನು ತಿಳಿಸಲಿದೆ ಎಂದು ತಿಳಿಯುವ ಕುತೂಹಲ ಹೊಂದಿದ್ದಾರೆ. ಆ್ಯಸ್ಪೆಕ್ಸ್ ಸೂರ್ಯ ಮತ್ತು ಅದರ ಪ್ರಭಾವವನ್ನು ಇನ್ನೂ ಉತ್ತಮವಾಗಿ ತಿಳಿಯಲು ಅವಶ್ಯಕವಾದ ಹೊಸ ಮಾಹಿತಿಗಳನ್ನು ಒದಗಿಸಲು ಸಿದ್ಧವಾಗಿದೆ.ಅಂತರತಾರಾ ಒಳನೋಟ: ಸೌರ ಮಾರುತಗಳ ರಹಸ್ಯ ಅನಾವರಣಗೊಳಿಸಲಿದೆ ಆದಿತ್ಯ ಎಲ್1ನ ಸ್ವಿಸ್ ಉಪಕರಣ

ಆದಿತ್ಯ ಎಲ್1 ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾಗಿದ್ದು, ಸೂರ್ಯ ಮತ್ತು ಅದರ ವಿವಿಧ ಚಟುವಟಿಕೆಗಳನ್ನು ಗಮನಿಸಲು ಮೀಸಲಾಗಿದೆ. ಇದನ್ನು ಸೆಪ್ಟೆಂಬರ್ 2, 2023ರಂದು ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು. ಈ ಉಪಗ್ರಹ 1,475 ಕೆಜಿ ತೂಕ ಹೊಂದಿದ್ದು, ಸೂರ್ಯನ ವಾತಾವರಣ, ಸೌರ ಮಾರುತಗಳು, ಸೂರ್ಯನ ಕಾಂತಕ್ಷೇತ್ರ, ಹಾಗೂ ಬಾಹ್ಯಾಕಾಶ ಹವಾಮಾನವನ್ನು ಅಧ್ಯಯನ ನಡೆಸಲು ಏಳು ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.

ಈ ಉಪಗ್ರಹ ಪ್ರಸ್ತುತ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್-1) ಬಿಂದುವಿನೆಡೆಗೆ ಚಲಿಸುತ್ತಿದ್ದು, ಇಲ್ಲಿ ಭೂಮಿ ಮತ್ತು ಸೂರ್ಯರ ಗುರುತ್ವಾಕರ್ಷಣಾ ಬಲ ಒಂದಕ್ಕೊಂದು ಸಮವಾಗಿರುತ್ತದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಉಪಗ್ರಹ ಹಲವು ಕಕ್ಷೆ ಎತ್ತರಿಸುವ ಪ್ರಕ್ರಿಯೆಗಳ ಬಳಿಕ, ಎಲ್1 ಬಿಂದುವಿನ ಸುತ್ತಲಿನ ತನ್ನ ಉದ್ದೇಶಿತ ಕಕ್ಷೆಯನ್ನು ಜನವರಿ 7, 2024ರಂದು ತಲುಪಲಿದೆ.

ಆದಿತ್ಯ ಎಲ್1 ಉಪಗ್ರಹ ಏಳು ಉಪಕರಣಗಳು ಅಥವಾ ಪೇಲೋಡ್‌ಗಳನ್ನು ಹೊಂದಿದ್ದು, ಸದಾ ಬದಲಾಗುವ ಮತ್ತು ಊಹಿಸಲಸಾಧ್ಯವಾದ ಗುಣಗಳನ್ನು ಹೊಂದಿರುವ ಸೂರ್ಯನ ವಿವಿಧ ಆಯಾಮಗಳನ್ನು ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ. ಈ ಏಳು ಉಪಕರಣಗಳ ಪೈಕಿ, ನಾಲ್ಕು ಉಪಕರಣಗಳು ನೇರವಾಗಿ ಸೂರ್ಯನನ್ನು ಅಧ್ಯಯನ ನಡೆಸಲು ಉದ್ದೇಶಿಸಿದ್ದರೆ, ಉಳಿದ ಮೂರು ಉಪಕರಣಗಳು ವಿವಿಧ ಗ್ರಹಗಳ ನಡುವಿನ ಅವಕಾಶದಲ್ಲಿ ಸೂರ್ಯನ ಪರಿಣಾಮ ಹೊಂದಿರುವ ಬಾಹ್ಯಾಕಾಶ ವಾತಾವರಣವನ್ನು ಅಧ್ಯಯನ ನಡೆಸಲಿವೆ. ಆದಿತ್ಯ ಎಲ್1 ಯೋಜನೆಯ ಈ ಏಳು ಪೇಲೋಡ್‌ಗಳನ್ನು ನಿರ್ಮಿಸಲು ಭಾರತದಾದ್ಯಂತ ವಿವಿಧ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಕೈಜೋಡಿಸಿವೆ.

• ವಿಇಎಲ್‌ಸಿ ಉಪಕರಣವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ ನಲ್ಲಿ ನಿರ್ಮಿಸಲಾಗಿದೆ.

• ಎಸ್‌ಯುಐಟಿ ಉಪಕರಣವನ್ನು ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆ್ಯಸ್ಟ್ರಾನಮಿ ಆ್ಯಂಡ್ ಆ್ಯಸ್ಟ್ರೋಫಿಸಿಕ್ಸ್ ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

• ಆ್ಯಸ್ಪೆಕ್ಸ್ (ASPEX) ಉಪಕರಣ ಅಹ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ನಿರ್ಮಾಣಗೊಂಡಿದೆ.

• ಪಾಪಾ ಪೇಲೋಡ್ (PAPA) ತಿರುವನಂತಪುರಂನ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್‌ನ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿಯಲ್ಲಿ ನಿರ್ಮಿಸಲಾಗಿದೆ.

• SoLEXS ಹಾಗೂ HEL1OS ಪೇಲೋಡ್‌ಗಳನ್ನು ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

• ಇನ್ನು ಮ್ಯಾಗ್ನೆಟೋಮೀಟರ್ ಪೇಲೋಡ್ ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಇಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ನಲ್ಲಿ ತಯಾರಾಗಿದೆ.

ನವೆಂಬರ್ 7ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯ HEL1OS ಉಪಕರಣ ಒಂದು ಸೌರ ಜ್ವಾಲೆಯ ಆರಂಭಿಕ ಹಂತವನ್ನು ಗುರುತಿಸಿದೆ ಎಂದು ಘೋಷಿಸಿತು. ಈ ಸೌರ ಜ್ವಾಲೆಯಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆ ಹೊಂದಿತ್ತು. ಆದಿತ್ಯ ಎಲ್1 ಉಡಾವಣೆಗೊಂಡ ಎರಡು ತಿಂಗಳ ಒಳಗಾಗಿ, ಅಂದರೆ ಅಕ್ಟೋಬರ್ 29ರಂದು ಈ ಬೆಳವಣಿಗೆಯನ್ನು ಗಮನಿಸಲಾಗಿದೆ.

ಶನಿವಾರ (ಡಿಸೆಂಬರ್ 2) ಇಸ್ರೋ ತನ್ನ ಹೇಳಿಕೆಯಲ್ಲಿ ಆದಿತ್ಯ ಎಲ್1 ಒಯ್ದಿರುವ ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ಆ್ಯಸ್ಪೆಕ್ಸ್ – ASPEX) ಪೇಲೋಡ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಬಾಹ್ಯಾಕಾಶ ವಾತಾವರಣದ ಮೇಲೆ ಸೌರ ಮಾರುತದ ಪ್ರಭಾವದ ಕುರಿತು ನಮ್ಮ ಜ್ಞಾನ ಹೆಚ್ಚಿಸುವಂತಹ ಮಾಹಿತಿಗಳನ್ನು ಒದಗಿಸಲಿದೆ ಎಂದಿದೆ.

ಆ್ಯಸ್ಪೆಕ್ಸ್ ಪೇಲೋಡ್ ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್ (ಸ್ವಿಸ್ – SWIS) ಮತ್ತು ಸುಪ್ರಾ ಥರ್ಮಲ್ ಆ್ಯಂಡ್ ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (ಸ್ಟೆಪ್ಸ್ – STEPS) ಎಂಬ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಈಗ ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಸುಗಮವಾಗಿ ಕಾರ್ಯಾಚರಿಸುತ್ತಿದೆ.

ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್

ಸ್ವಿಸ್ ಪೇಲೋಡನ್ನು ನವೆಂಬರ್ 2ರಂದು ಚಾಲ್ತಿಗೊಳಿಸಲಾಗಿದ್ದು, ಅಂದಿನಿಂದಲೂ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ಈ ಉಪಕರಣ ವಿವಿಧ ಸೌರ ಮಾರುತಗಳ ಅಯಾನ್‌ಗಳು ಮತ್ತು ಐಸೋಟೋಪ್‌ಗಳನ್ನು ಅಳೆಯಲು ಬಳಕೆಯಾಗುತ್ತದೆ. ಇನ್ನೊಂದೆಡೆ, ಸ್ಟೆಪ್ಸ್ ಉಪಕರಣ ಸೌರ ಚಟುವಟಿಕೆಗಳಿಂದ ಉತ್ಪತ್ತಿಯಾಗುವ, ವೇಗವಾಗಿ ಚಲಿಸುವ ಚಾರ್ಜ್ ಹೊಂದಿರುವ ಕಣಗಳ ಮಾಹಿತಿಗಳನ್ನು ಕಲೆಹಾಕುತ್ತದೆ. ಈ ಎರಡು ಉಪಕರಣಗಳು ಸೌರ ಮಾರುತಗಳು, ಸೌರ ವಾತಾವರಣಗಳ ನಿಗೂಢತೆಗಳನ್ನು ಭೇದಿಸಿ, ನಮ್ಮ ಸೌರಮಂಡಲದ ಆರಂಭ ಮತ್ತು ಅಭಿವೃದ್ಧಿಯ ಹಿಂದಿನ ರಹಸ್ಯಗಳನ್ನು ತಿಳಿಯಲು ನೆರವಾಗುತ್ತವೆ.

ಸ್ವಿಸ್ ಒಂದು ಅಸಾಧಾರಣ ಉಪಕರಣವಾಗಿದ್ದು, ಸೂರ್ಯನಿಂದ ಹೊರಬರುವ, ಸೌರ ಮಾರುತ ಅಯಾನ್‌ಗಳು ಎಂದು ಕರೆಯಲಾಗುವ, ಅತ್ಯಂತ ಸಣ್ಣ ಗಾತ್ರದ ಕಣಗಳನ್ನೂ ಅಳೆಯಲು ನೆರವಾಗುತ್ತದೆ. ಇವು ಪ್ರೋಟಾನ್ ಮತ್ತು ಆಲ್ಫಾ ಕಣಗಳು ಸೇರಿದಂತೆ ವಿವಿಧ ರೀತಿಯ ಅಯಾನ್‌ಗಳನ್ನು ಒಳಗೊಂಡಿರುತ್ತವೆ. ಸ್ವಿಸ್ ಉಪಕರಣದ ಎರಡು ಘಟಕಗಳನ್ನು ವಿವಿಧ ದೃಷ್ಟಿಕೋನಗಳಿಂದ ವೀಕ್ಷಿಸಲು ಅನುಕೂಲಕರವಾಗಿರುವಂತೆ ಕಾರ್ಯತಂತ್ರದ ದೃಷ್ಟಿಯಿಂದ ಅಳವಡಿಸಲಾಗಿದ್ದು, ಸ್ವಿಸ್ ಸೌರ ಮಾರುತ ಅಯಾನ್‌ಗಳ (ಸೋಲಾರ್ ವಿಂಡ್ ಅಯಾನ್ಸ್) ವರ್ತನೆ ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ಮಹತ್ತರ ಮಾಹಿತಿಗಳನ್ನು ಒದಗಿಸುತ್ತದೆ.

ಸ್ವಿಸ್ ಸೌರ ಮಾರುತದ ಅಯಾನ್‌ಗಳನ್ನು ವಿವಿಧ ದಿಕ್ಕುಗಳಿಂದ ಗಮನಿಸುವುದರಿಂದ, ಅದು ಝ ಅಯಾನ್‌ಗಳನ್ನು ಅತ್ಯಂತ ನಿಖರವಾಗಿ ಅಳೆಯಬಲ್ಲದು. ಇದು ಸೌರ ಮಾರುತದ ಅಯಾನ್ ಭೂಮಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಹಳೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸಹಾಯಕವಾಗಿದೆ. ಸ್ವಿಸ್ ಉಪಕರಣ ಪ್ರೋಟಾನ್‌ಗಳ ಸಂಖ್ಯೆಗೆ ಹೋಲಿಸಿದರೆ, ಆಲ್ಫಾ ಕಣಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸುತ್ತದೆ. ಈ ಬದಲಾವಣೆಗಳು ಸೂರ್ಯನಿಂದ ಹೊರಬರುವ ಬಿಸಿಯ ಉಂಡೆಗಳು ಯಾವಾಗ ಭೂಮಿಯೆಡೆಗೆ ಚಲಿಸುತ್ತವೆ ಎಂದು ಸಂಶೋಧಕರಿಗೆ ತಿಳಿಸುತ್ತವೆ. ಈ ಉಂಡೆಗಳನ್ನು ಇಂಟರ್‌ಪ್ಲಾನೆಟರಿ ಕೊರೋನಲ್ ಮಾಸ್ ಇಜೆಕ್ಷನ್‌ಗಳು (ಐಸಿಎಂಇ) ಎಂದು ಕರೆಯಲಾಗುತ್ತದೆ. ಇವುಗಳು ಬಾಹ್ಯಾಕಾಶ ವಾತಾವರಣದ ತೊಂದರೆಗಳನ್ನು ಉಂಟುಮಾಡುತ್ತವೆ ಎಂದು ಇಸ್ರೋ ವಿವರಿಸಿದೆ.

ಆ್ಯಸ್ಪೆಕ್ಸ್ ಸೌರ ಮಾರುತದ ಅಧ್ಯಯನ ನಡೆಸಲು ಉತ್ತಮ ಉಪಕರಣವಾಗಿದೆ. ಸೌರ ಮಾರುತ ಎನ್ನುವುದು ಸೂರ್ಯನಿಂದ ಹೊರಬರುವ ವಸ್ತುಗಳ ಹರಿವನ್ನು ಸೂಚಿಸುತ್ತದೆ. ಸೌರ ಮಾರುತಗಳು ಭೂಮಿ ಮತ್ತು ಇತರ ಗ್ರಹಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಜಗತ್ತಿನಾದ್ಯಂತ ಇರುವ ವಿಜ್ಞಾನಿಗಳು ಸೌರ ಮಾರುತಗಳ ಗುಣ ಸ್ವಭಾವಗಳು ಮತ್ತು ರಹಸ್ಯಗಳ ಕುರಿತು ಆ್ಯಸ್ಪೆಕ್ಸ್ ಏನು ತಿಳಿಸಲಿದೆ ಎಂದು ತಿಳಿಯುವ ಕುತೂಹಲ ಹೊಂದಿದ್ದಾರೆ. ಆ್ಯಸ್ಪೆಕ್ಸ್ ಸೂರ್ಯ ಮತ್ತು ಅದರ ಪ್ರಭಾವವನ್ನು ಇನ್ನೂ ಉತ್ತಮವಾಗಿ ತಿಳಿಯಲು ಅವಶ್ಯಕವಾದ ಹೊಸ ಮಾಹಿತಿಗಳನ್ನು ಒದಗಿಸಲು ಸಿದ್ಧವಾಗಿದೆ.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next