Advertisement

ಮಹಾಲಿಂಗಪುರ ಪೊಲೀಸರಿಂದ ಅಂತಾರಾಜ್ಯ ಬಂಗಾರ ಕಳ್ಳನ ಬಂಧನ

09:59 PM Aug 26, 2023 | Team Udayavani |

ಮಹಾಲಿಂಗಪುರ : ಕಳೆದ ಮೂರು ತಿಂಗಳಿನಿಂದ ಮಹಾಲಿಂಗಪುರ ಭಾಗದಲ್ಲಿ ಬಂಗಾರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಜನತೆಯು ಆತಂಕದಲ್ಲಿ ದಿನಗಳೆಯುವಂತಾಗಿತ್ತು. ಶನಿವಾರ ಮಹಾಲಿಂಗಪುರ ಪೊಲೀಸರು ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದ್ದರಿಂದ ಜನತೆಯು ಅಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Advertisement

ಸಿಕಂದರ ಶೇರ ಅಲಿ ಇರಾನಿ(37) ಕೋಜಾ ಕಾಲನಿ ಸಾಂಗಲಿ ಬಂಧಿತ ಅಂತರಾಜ್ಯ ಕಳ್ಳ. ಇತನು ಮೂಲತ: ಧಾರವಾಡದ ಜನ್ನತ ನಗರ ನಿವಾಸಿ, ಹಾಲಿ ಮಹಾರಾಷ್ಟ್ರ ರಾಜ್ಯದ ಸಾಂಗಲಿ ನಿವಾಸಿಯಾಗಿದ್ದು, ಇದೇ ಅಗಷ್ಟ 4ರಂದು ಪಟ್ಟಣದ ಮಹಾಲಿಂಗಪ್ಪ ಮಹಾದೇವಪ್ಪ ಲೋಹಾರ ಅವರ ಬಂಗಾರ ಅಂಗಡಿಯಲ್ಲಿ ಅದುಬೇಕು ಇದುಬೇಕು ಎಂದು ಮಾಲಕನ ಗಮನ ಬೇರೆಕಡೆ ಸೆಳೆದು 84 ಸಾವಿರ ಬೆಲೆಯ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋದ ಕುರಿತು ಪ್ರಕರಣ ದಾಖಲಾಗಿತ್ತು.

ಜಮಖಂಡಿ ಡಿವೈಎಸ್‌ಪಿ ಶಾಂತವೀರ, ಬನಹಟ್ಟಿ ಸಿಪಿಆಯ್ ಸಂಜು ಬಳಗಾರ ಮಾರ್ಗದರ್ಶನದಲ್ಲಿ ತನಿಖೆ ಪ್ರಾರಂಭಿಸಿದ ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ ಬೀಳಗಿ ಅವರು ತಮ್ಮ ಪೊಲೀಸ್ ಸಿಬ್ಬಂದಿ ಎಎಸ್‌ಆಯ್ ಎಲ್.ಬಿ.ದುದ್ದಣಗಿ, ಸಿಪಿಸಿಗಳಾದ ಎಸ್.ಡಿ.ಬಾರಿಗಿಡದ, ಬಿ.ಪಿ.ಹಡಪದ, ಐ.ಎಂ.ಫಣಿಬಂಧ, ಬಿ.ಜಿ.ದೇಸಾಯಿ, ಎಂ.ಎಸ್.ಕಣಶೆಟ್ಟಿ ಅವರನ್ನು ಒಳಗೊಂಡ ತಂಡವು ಮಹಾಲಿಂಗಪುರ ಪಟ್ಟಣದ ಮಾರ್ಕೇಟ ಸರ್ಕಲ್ ಹತ್ತಿರ ಮತ್ತೇ ಕಳ್ಳತನ ಮಾಡಲು ಬಂದ ವೇಳೆ ಅಂತಾರಾಜ್ಯ ಕಳ್ಳ ಸಿಕಂದರ ಶೇರಅಲಿ ಇರಾನಿಯನ್ನು ಬಂಧಿಸಿ 84 ಸಾವಿರ ಮೌಲ್ಯದ ಬಂಗಾರ ಆಭರಣಗಳು ಹಾಗೂ 60 ಸಾವಿರ ಬೆಲೆಯ ಟಿವ್ಹಿಎಸ್ ಮೋಟಾರ್ ಸೈಕಲ್ ವಶಪಡಿಸಿಕೊಂಡು ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾಲಿಂಗಪುರ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಅಭಿನಂದನೆ ಸಲ್ಲಿಸಿ ಸೂಕ್ತ ಬಹುಮಾನ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next