Advertisement

ಅಂತರ್ಜಾತಿ ವಿವಾಹ; ದಂಪತಿ ಕೊಲೆ

10:10 AM Nov 07, 2019 | Team Udayavani |

ಗಜೇಂದ್ರಗಡ(ಗದಗ): ಅಂತರ್ಜಾತಿ ವಿವಾಹವಾಗಿದ್ದ ದಂಪತಿಯನ್ನು ಭೀಕರವಾಗಿ ಹತ್ಯೆಮಾಡಿರುವ ಘಟನೆ ಬುಧವಾರ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

Advertisement

ಕೊಲೆಯಾದವರನ್ನು ರಮೇಶ್ ಮಾದಾರ್(೨೯), ಗಂಗಮ್ಮ(೨೩) ಎಂದು ಗುರುತಿಸಲಾಗಿದೆ. ಮೃತಳ ಸಹೋದರರಾದ ಶಿವಪ್ಪ, ರವಿ, ರಮೇಶ ರಾಥೋಡ್ ಎಂಬುವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಎಸ್ಪಿ ಶ್ರೀನಾಥ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next