ಅಡುಗೆ ಮಾಡುವುದರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಎತ್ತಿದ ಕೈ. ಅಲ್ಲಿ ಶೀಘ್ರವೇ ಸಂಸತ್ ಚುನಾವಣೆ ನಡೆಯುವದರಿಂದ ಅವರೀಗ ಪ್ರಚಾರದಲ್ಲಿ ಬ್ಯುಸಿ.
ಇದರ ನಡುವೆಯೇ ಅವರು ಮನೆಯಲ್ಲಿ ಬೆಂಡೆಕಾಯಿ ಕರಿ, ಚಿಕನ್ ಕೂರ್ಮ, ಹುಣಸೆ ಹಣ್ಣು ಮತ್ತು ಬದನೆಕಾಯಿ ಜತೆಯಾಗಿ ಹಾಕಿ ಸಿದ್ಧಪಡಿಸಿದ ಅಡುಗೆಯನ್ನು ಅವರು ಸಿದ್ಧಪಡಿಸಿದ್ದಾರೆ.
ಜತೆಗೆ ಅದನ್ನು ಫೇಸ್‌ಬುಕ್‌ನಲ್ಲಿ “ಸ್ಟ್ರಾಂಗ್ ಕರಿ, ಸ್ಟ್ರಾಂಗ್ ಇಕಾನಮಿ, ಸ್ಟ್ರಾಂಗರ್ ಪ್ಯೂಚರ್’ ಎಂಬ ಶೀರ್ಷಿಕೆಯ ಜತೆಗೆ ಸಿದ್ಧಪಡಿಸಿದ ಅಡುಗೆಯ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.
ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ಬೆಂಗಳೂರಿಗೆ ಬಂತು 700 ಕೆ.ಜಿ. ತೂಕದ ಖಡ್ಗ
ಅದನ್ನು ನೋಡಿದ ಒಬ್ಬರು ನಿಜಕ್ಕೂ ಬೇಯಿಸಿದ ಚಿಕನ್ ರುಚಿಯಾಗಿದೆಯೇ ಎಂದು ಪ್ರಶ್ನಿಸಿದ್ದಕ್ಕೆ ಆಸೀಸ್ ಪ್ರಧಾನಿ “ಸರಿಯಾಗಿಯೇ ಇದೆ’ ಎಂಬ ಉತ್ತರವನ್ನೂ ಕೊಟ್ಟಿದ್ದಾರೆ.