Advertisement

ನೆಟ್‌ ಇಲ್ಲದೆ ಫ‌ಲಿತಾಂಶ ನೋಡಲು ಕಾಶ್ಮೀರ ವಿದ್ಯಾರ್ಥಿಗಳ ಪರದಾಟ

10:07 AM Jan 10, 2020 | Hari Prasad |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 10ನೇ ತರಗತಿ ಫ‌ಲಿತಾಂಶ ಗುರುವಾರ ಪ್ರಕಟವಾಗಿದೆ. ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್‌ನೆಟ್‌ ಸಂಪರ್ಕದ ಮೇಲೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹರಸಾಹಸ ಪಟ್ಟು, ಇತರ ರಾಜ್ಯಗಳಲ್ಲಿರುವ ತಮ್ಮ ಬಂಧುಗಳಿಗೆ ಫೋನ್‌ ಮಾಡಿ, ನೋಂದಣಿ ಸಂಖ್ಯೆ ತಿಳಿಸಿ ಫ‌ಲಿತಾಂಶ ಪಡೆದುಕೊಂಡಿದ್ದಾರೆ.

Advertisement

ಇಂಟರ್‌ನೆಟ್‌ ಸಂಪರ್ಕ ರದ್ದು ಮಾಡಿರುವಾಗ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಪ್ರಕಟಿಸಲಾಗಿದೆ ಎಂದು ಶಿಕ್ಷಣ ಮಂಡಳಿ ಪ್ರಕಟಿಸಿದರೆ, ಅದನ್ನು ವೀಕ್ಷಿಸುವುದಾದರೂ ಹೇಗೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಈ ಸಮಸ್ಯೆ ಬಗ್ಗೆ ಟ್ವೀಟ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next