Advertisement

ಶಿರ್ವ ಸಂತ ಮೇರಿ ಕಾಲೇಜು:ಅಂತರಾಷ್ಟ್ರೀಯ ಯೋಗ ದಿನಾಚರಣೆ

11:57 AM Jun 21, 2021 | Team Udayavani |

ಶಿರ್ವ: ಇಲ್ಲಿನ ಸಂತ ಮೇರಿ ಕಾಲೇಜಿನ ಎನ್‌ಸಿಸಿ ಘಟಕ,ಆಯುಷ್‌ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಆಯುಷ್‌ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಬಿ ವಿತ್‌ಯೋಗ,ಬಿ ಏಟ್‌ ಹೋಂ ಘೋಷವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಿಂದ ಯೋಗ ಮಾಡುವ ಮೂಲಕ ಜೂ. 21ರಂದು ಆಚರಿಸಲಾಯಿತು.

Advertisement

ಶಿರ್ವಸಂತ ಮೇರಿ ಮಹಾವಿದ್ಯಾಲಯದ ಎನ್‌ಸಿಸಿ ಘಟಕದ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್‌ ಕೆ. ಪ್ರವೀಣ್‌ ಕುಮಾರ್‌ ಸಾಂಕೇತಿಕವಾಗಿ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್‌ ಐವನ್‌ ಮೋನಿಸ್‌ ಶುಭ ಹಾರೈಸಿದರು.

ಕಾಲೇಜು ಹಮ್ಮಿಕೊಂಡಿರುವ ಯೋಗ ಫ್ರಮ್‌ ಹೋಂ ಕಾರ್ಯಕ್ರಮದಲ್ಲಿ ಉಡುಪಿ,ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ,ಉತ್ತರ ಕನ್ನಡ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

21 ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ,ಉಡುಪಿ ಘಟಕದ ಆಡಳಿತಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಪಮಿಂìದರ್‌ ಸಿಂಗ್‌,ಕಾಲೇಜಿನ ಎನ್‌ಸಿಸಿಅಧಿಕಾರಿಗಳು, ಘಟಕದ ಸಹ ಸಂಯೋಜಕಿ ಯಶೋದಾ, ಸೀನಿಯರ್‌ ಕ್ಯಾಡೆಟ್‌ ಅಂಡರ್‌ ಆಫೀಸರ್‌ ರಾಮದಾಸ್‌,ಜೂನಿಯರ್‌ ಅಂಡರ್‌ ಆಫೀಸರ್‌ ಪ್ರವಿತಾ ಮತ್ತು ರಿಯಾನ್‌ ರಿ ಅಲ್ಫೋನ್ಸೋ , ಕಾಲೇಜಿನ ಅಧ್ಯಾಪಕ-ಅಧ್ಯಾಪಕೇತರ ಸಿಬಂದಿ ಹಾಗೂ ಕ್ಯಾಡೆಟ್‌ ಗಳು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next