Advertisement

ಲೇಡಿಹಿಲ್‌ ವೃತ್ತದಿಂದ ಕೆನರಾ ಪ್ರೌಢಶಾಲೆ: ರಸ್ತೆಯಲ್ಲಿ ಸಾವಿರದ ಇನ್ನೂರು ಮಂದಿಯಿಂದ ಯೋಗ

10:26 PM Jun 21, 2019 | mahesh |

ಲಾಲ್‌ಬಾಗ್‌: ಎಸ್‌ಪಿವೈಎಸ್‌ಎಸ್‌ ಹಾಗೂ ಪತಂಜಲಿ ಯೋಗ ಪೀಠ ಹರಿದ್ವಾರ ಇವುಗಳ ನೇತೃತ್ವದಲ್ಲಿ ವಿವಿಧ ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಯೋಗ ಜಾಗೃತಿ ಕಾರ್ಯಕ್ರಮವು ಮಂಗಳಾ ಕ್ರೀಡಾಂಗಣ ಮುಂಭಾಗದ ಲೇಡಿಹಿಲ್‌ ವೃತ್ತದಿಂದ ಕೆನರಾ ಪ್ರೌಢಶಾಲೆವರೆಗಿನ ರಸ್ತೆಯಲ್ಲಿ ನಡೆಯಿತು. 1,200ಕ್ಕಿಂತಲೂ ಹೆಚ್ಚು ಯೋಗ ಬಂಧುಗಳು, ಸಾರ್ವಜನಿಕರು ಭಾಗವಹಿಸಿದರು.

Advertisement

ಮುಂಜಾನೆ 5ರಿಂದ 6.30ರ ವರೆಗೆ ಕಾರ್ಯಕ್ರಮ ಜರಗಿತು. ಭಜನೆ, ಅಗ್ನಿಹೋತ್ರ, ಅಮೃತವಚನ, ಪಂಚಾಂಗ ಪಠನದೊಂದಿಗೆ ಆರಂಭವಾಗಿ ಯೋಗಾಸನ, ಪ್ರಾಣಾಯಾಮ, ಸಂಕಲ್ಪದೊಂದಿಗೆ ನೆರವೇರಿತು. ಕೇಂದ್ರ ಸರಕಾರದ ಆಯುಷ್‌ ಇಲಾಖೆಯ ಪಠ್ಯಕ್ರಮದಂತೆ ಜಿಲ್ಲಾ ಶಿಕ್ಷಣ ಪ್ರಮುಖರಾದ ಆರ್‌.ಜಿ. ಬಿರಾದಾರ್‌ ಆಸನಗಳನ್ನು ಹೇಳಿಕೊಟ್ಟರು. ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಡಾ| ಜ್ಞಾನೇಶ್ವರ ನಾಯಕ್‌ ಪ್ರಾಣಾಯಾಮದೊಂದಿಗೆ ಸಂಕಲ್ಪವನ್ನು ನಡೆಸಿಕೊಟ್ಟರು.

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಸಿನೆಮಾ ನಟ ರೂಪೇಶ್‌ ಶೆಟ್ಟಿ , ನಟಿ ತನುಜಾ ಪವಾರ್‌ ಯೋಗ ಜ್ಯೋತಿಯನ್ನು ಬೆಳಗಿಸಿದರು. ಲೇಡಿ ಹಿಲ್‌ ಪೊಂಪೈ ಮಾತಾ ಚರ್ಚ್‌ನ ಧರ್ಮ ಗುರು ಸ್ಟಾನಿ ಪಿರೇರಾ, ಡಿಸಿಪಿ ಹನುಮಂತರಾಯ, ಜಿಲ್ಲಾ ಸಂಚಾಲಕ ಗೋಕುಲನಾಥ್‌ ಶೆಣೈ, ಪ್ರಾಂತ ಸೇವಾ ಪ್ರಮುಖ ಶಿವಾನಂದ ರೈ, ನೇತ್ರಾವತಿ ವಲಯ ಸಂಚಾಲಕ ಹರೀಶ್‌ ಕೋಟ್ಯಾನ್‌, ಕಾರ್ಯಕ್ರಮ ಸಂಚಾಲಕ ಅಶೋಕ್‌ ಜೈನ್‌ ಉಪಸ್ಥಿತರಿದ್ದರು. ಜಗದೀಶ್‌ ಶೆಟ್ಟಿ ವಂದಿಸಿದರು. ಸಮಿತಿಯ ದಯಾನಂದ ಕಟೀಲು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next