Advertisement

ಭಾರತದ ಯೋಗ ವಿಶ್ವ ಸಂಸ್ಕೃತಿಯಾಗಿ ಮುನ್ನೆಲೆಗೆ ಬಂದಿದೆ: ವೇದವ್ಯಾಸ ಕಾಮತ್‌

10:21 PM Jun 21, 2019 | mahesh |

ಪುರಭವನ: ಭಾರತದ ಯೋಗವು ಪ್ರಸ್ತುತ ವಿಶ್ವದ ಸಂಸ್ಕೃತಿ ಯಾಗಿ ಆಚರಣೆಯಾಗುವ ಮೂಲಕ ಮುನ್ನೆಲೆಗೆ ಬಂದಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಅಭಿಪ್ರಾಯಪಟ್ಟರು.

Advertisement

ದ.ಕ. ಜಿಲ್ಲಾಡಳಿತ, ಜಿಲ್ಲಾ ಆಯುಷ್‌ ಇಲಾಖೆ, ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಶುಕ್ರವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಇಡೀ ವಿಶ್ವವೇ ಯೋಗಾಭ್ಯಾಸವನ್ನು ಮಾಡುತ್ತಿರುವುದು ಸಮಸ್ತ ಭಾರತೀ ಯರಿಗೆ ಹೆಮ್ಮೆಯ ವಿಚಾರ ಎಂದರು.

ಯೋಗ ದಿನಚರಿಯಾಗಲಿ
ಪ್ರಾಚೀನ ಕಾಲದಲ್ಲಿ ಪತಂಜಲಿ ಮಹರ್ಷಿ ಯೋಗವನ್ನು ನೀಡುವ ಮೂಲಕ ಇಡೀ ವಿಶ್ವದ ಜನರ ಆರೋಗ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ. ಒತ್ತಡ ನಿವಾರಣೆ, ಆರೋಗ್ಯ ವೃದ್ಧಿ, ಸುಂದರ ಸಮಾಜಕ್ಕೆ ಯೋಗ ಪ್ರತಿಯೊಬ್ಬರ ದಿನಚರಿಯಾಗಬೇಕು ಎಂದರು.

ಶಾಸಕ ಡಾ| ಭರತ್‌ ಶೆಟ್ಟಿ ವೈ., ದ.ಕ. ಜಿಲ್ಲಾ ಪಂಚಾಯ ತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಗೃಹ ರಕ್ಷಕದಳದ ಸಮಾದೇಷ್ಠ ಡಾ| ಮುರಲೀ ಮೋಹನ ಚೂಂತಾರು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌, ನೆಹರೂ ಯುವ ಕೇಂದ್ರದ ರಘುವೀರ್‌ ಸೂಟರ್‌ಪೇಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮಹಮ್ಮದ್‌ ಇಕ್ಬಾಲ್‌ ಕೆ., ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ
ಯೋಗದಲ್ಲಿ ಸಾಧನೆ ಮಾಡಿದ ವಿದ್ಯಾ ರ್ಥಿಗಳಾದ ವಿನಯ, ಶ್ರುತಿ ರಾವ್‌, ಅಮೃತಾ, ಸ್ವಸ್ತಿ ರೈ, ಚೈತ್ರಾ ಶೆಟ್ಟಿ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಬಳಿಕ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next