Advertisement
ಕೇರಳದ 44 ನದಿಗಳಲ್ಲಿ 16 ಐತಿಹಾಸಿಕ ಕಥೆ ಗಳೊಂದಿಗೆ ಹರಿಯುತ್ತವೆ. ಪ್ರವಾಸೋದ್ಯಮ ಇಲಾಖೆಯ ಅ ಧೀನದಲ್ಲಿರುವ ಬಿಆರ್‌ಡಿಸಿ, ಉತ್ತರ ಮಲಬಾರ್ ಸಂಸ್ಕೃತಿಗೆ ಭೇಟಿ ನೀಡುವ ಮತ್ತು ನಮ್ಮ ವಿಶಿಷ್ಟ ಕಲಾತ್ಮಕತೆಯನ್ನು ಆನಂದಿಸುವ ಪ್ರವಾಸಿಗರಿಗಾಗಿ ನವೀನ ನದಿ ಸಂಸ್ಕೃತಿ, ಪ್ರವಾಸೋದ್ಯಮ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ. ಹೌಸ್ ಬೋಟ್‌ಗಳಂತಲ್ಲದೆ, ಹೆಚ್ಚು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯಾಗಿದೆ ಇದು. ಯಕ್ಷಗಾನ, ಗೊಂಬೆಯಾಟ (ಪಾವಕ್ಕಳಿ), ಕೋಲಾಟ (ಕೋಲ್ಕಳಿ), ಅಲಮಿಕಳಿ, ದಫ್‌ಮುಟ್ ಮತ್ತು ಒಪ್ಪನಗಳಲ್ಲದೆ, ಉತ್ತರ ಜಿಲ್ಲೆಗಳ ಲಲಿತಕಲೆಗಳು ಪ್ರವಾಸಿಗರಿಗೆ ಬುಡಕಟ್ಟು ಸಮುದಾಯದ ವಿಶಿಷ್ಟ ಲಕ್ಷಣಗಳಾದ ಮಂಗಲಂಕಳಿ, ಎರುತ್‌ಕಳಿ ಮೊದಲಾದವು ವೀಕ್ಷಿಸಲು ಲಭ್ಯವಿವೆ.
Related Articles
Advertisement
ಬಿಆರ್‌ಡಿಸಿಯ ಮತ್ತೂಂದು ನವೀನ ಉಪಕ್ರಮವಾಗಿರುವ “ಸ್ಮೈಲ್ ಟೂರಿಸಂ’ ಎಂಬ ಕಾರ್ಯತಂತ್ರದ ಯೋಜನೆಯನ್ನು ಜಾರಿಗೆ ತರುವ ಮೂಲಕ ಕಾಸರಗೋಡು ಜಿಲ್ಲೆಯನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಇರಿಸಿದೆ. ಈ ಯೋಜನೆಯ ಉದ್ದೇಶ ಪ್ರವಾಸಿಗರಿಗೆ ಇಲ್ಲಿನ ಸಂಸ್ಕೃತಿಯ ಮಾಹಿತಿಯನ್ನು ಒದಗಿಸುವುದು ಮತ್ತು ಸಂಸ್ಕೃತಿಯ ಗುರುತನ್ನು ಕಳೆದುಕೊಳ್ಳದೆ ಅವರಿಗೆ ಹಿತಕರವಾಗಿಸುವುದು.
ಪ್ರವಾಸೋದ್ಯಮ ಇಲಾಖೆಯಡಿ ಸ್ಥಾಪಿಸಲಾದ ಬಿಆರ್‌ಡಿಸಿಯ ನೌಕೆಯಲ್ಲಿ 50 ಜನರಿಗೆ ಸಂಚರಿಸುವ ಅವಕಾಶ ಕಲ್ಪಿಸಲು ಸಜ್ಜಾಗಿದೆ. ಈ ಯೋಜನೆಯನ್ನು ತಿರುವನಂತಪುರದಲ್ಲಿ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ಮನ್ಸೂರ್ ಹೇಳಿದರು.
ಪ್ರವಾಸೋದ್ಯಮ ಕಾರ್ಯದರ್ಶಿ ರಾಣಿ ಜಾರ್ಜ್, ಪ್ರವಾಸೋದ್ಯಮ ನಿರ್ದೇಶಕ ಪಿ.ಬಾಲಕಿರಣ್, ಕೆಟಿಡಿಸಿ ಎಂ.ಡಿ. ಕೃಷ್ಣತೇಜ, ಕಾಸರಗೋಡು ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ಬಾಬು ಮತ್ತು ಹಣಕಾಸು ಕಾರ್ಯದರ್ಶಿ ಗಿರೀಶ್ ಪಾರಕ್ಕಾಟ್ ಉಪಸ್ಥಿತರಿದ್ದರು.
ಸ್ಮೈಲ್ ಯೋಜನೆಮಲಬಾರ್ ಪ್ರದೇಶದಲ್ಲಿ ನೌಕೆ ನಿರ್ಮಾಣದ ಇತಿಹಾಸವು 1,000 ವರ್ಷಗಳಿಗಿಂತಲೂ ಹಳೆಯದು. ಸ್ಮೈಲ್ ಉದ್ಯಮಿಗಳು ಪ್ರವಾಸೋ ದ್ಯಮ ಯೋಜನೆಯ ಭಾಗವಾಗಿರುವ ಪ್ರಯಾಣಿಕರಿಗೆ ನೌಕೆಯ ಇತಿಹಾಸ, ನಿರ್ಮಾಣ ವೈಶಿಷ್ಟéಗಳನ್ನು ಕಥೆ ಹೇಳುವ ಮತ್ತು ಚಿತ್ರಗಳ ಮೂಲಕ ವಿವರಿಸುತ್ತಾರೆ. ಮೆಸಪೊಟೋಮಿಯಾದ ವ್ಯಾಪಾರ ಮತ್ತು ಅರಬರಿಂದ ನೌಕೆ ನಿರ್ಮಾಣಕ್ಕೆ ನೆರವು ಪಡೆದಿರುವುದು ಇತಿಹಾಸದ ಒಂದು ಭಾಗವಾಗಿದೆ. ಯಾವುದೇ ಲಿಖೀತ ಅಂಕಿ ಅಥವಾ ರೇಖಾಚಿತ್ರಗಳಿಲ್ಲದೆ ನೌಕೆಯನ್ನು ಹಿಂದೆ ನಿರ್ಮಿಸಲಾಗಿತ್ತು. ಮಲಬಾರ್‌ನ ಖಲಾಸಿಗಳ ಕರಕುಶಲದಿಂದಾಗಿ, ಸ್ಥಳೀಯ ಉಪಕರಣಗಳನ್ನು ಹೊರತುಪಡಿಸಿ ಯಾವುದೇ ಜನಪ್ರಿಯ ಯಂತ್ರೋಪಕರಣಗಳನ್ನು ನಿರ್ಮಾಣ ಪ್ರಕ್ರಿಯೆಯಲ್ಲಿ ಬಳಸದೆ ನೌಕೆಗಳನ್ನು ನಿರ್ಮಿಸಲಾಗಿತ್ತು. ಅದೇ ಸಮಯದಲ್ಲಿ, ಇದು ವಿಶ್ವದ ಅತಿದೊಡ್ಡ ಕ್ರಾಫ್ಟ್ ಆಗಿ ಹೊರಹೊಮ್ಮಿದೆ. ಒಂದು ಕಾಲದಲ್ಲಿ ಸಮೃದ್ಧ ರೂಪಕವಾಗಿ ನೌಕೆಗಳು ಸಿದ್ಧವಾಗುತಿದ್ದವು. ಬಿಆರ್‌ಡಿಸಿ ಯೋಜನೆಯು ಮಲಬಾರ್‌ನ ವಿಶಿಷ್ಟ ವಾಸ್ತುಶಿಲ್ಪ ಪರಂಪರೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.