Advertisement

International Maths Olympiad: ವಿಶ್ವದಲ್ಲೇ ಭಾರತ ನಂ 4!

12:49 AM Jul 22, 2024 | Team Udayavani |

ಹೊಸದಿಲ್ಲಿ: ಬ್ರಿಟನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌(ಐಎಂಒ)ನಲ್ಲಿ 6 ಸದಸ್ಯರ ಭಾರತ ತಂಡ ದೇಶದ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟಿದೆ.

Advertisement

ಯುಕೆಯ ಬಾಥ್‌ನಲ್ಲಿ ನಡೆದ 65ನೇ ಒಲಿಂಪಿಯಾಡ್‌ನ‌ಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳ ಭಾರತ ತಂಡ 4 ಚಿನ್ನದ ಪದಕಗಳು, 1 ಬೆಳ್ಳಿ ಪದ ಮತ್ತು 1 ಬಾರಿ ಗೌರವಾನ್ವಿತ ಉಲ್ಲೇಖಕ್ಕೆ ಪಾತ್ರವಾಗಿದೆ. 1989ರ ಅನಂತರ ಅಂದರೆ ಭಾರತವು ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲು ಆರಂಭಿಸಿದ ಬಳಿಕ, ಸ್ವರ್ಣ ಪದಕದಲ್ಲೂ, ರ್‍ಯಾಂಕ್‌ ಪಟ್ಟಿಯಲ್ಲೂ ದೇಶದ ಅತ್ಯುತ್ತಮ ಸಾಧನೆ ಇದಾಗಿದೆ.

ಜಾಗತಿಕವಾಗಿ ಅಮೆರಿಕ, ಚೀನ, ದಕ್ಷಿಣ ಕೊರಿಯಾ ಟಾಪ್‌ 3 ಸ್ಥಾನಗಳನ್ನು ಪಡೆದುಕೊಂಡಿವೆ. 167 ಅಂಕಗಳೊಂದಿಗೆ ಭಾರತ ರ್‍ಯಾಂಕ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನ ಪಡೆದ ಅಮೆರಿಕದ ಅಂಕ 192.
ಪ್ರಧಾನಿ ಮೋದಿ ಅಭಿನಂದನೆ: ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿರುವುದು ಅತ್ಯಂತ ಖುಷಿ ಮತ್ತು ಹೆಮ್ಮೆಯ ಸಂಗತಿ. ಈ ಸಾಧನೆಯು ಇನ್ನೂ ಅನೇಕ ಯುವಜನತೆಗೆ ಸ್ಫೂರ್ತಿಯಾಗಲಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next