Advertisement

ವಿಶ್ವ ರೈಲ್ವೇ ಆ್ಯತ್ಲೆಟಿಕ್‌: ಸುಳ್ಯದ ಸಂಶೀರ್‌ಗೆ ಚಿನ್ನ

09:36 AM Sep 14, 2019 | sudhir |

ಸುಳ್ಯ: ಯುರೋಪಿನ ಟ್ರೊಟ್ ನೋ ಚೆಕ್ ಗಣರಾಜ್ಯದಲ್ಲಿ ನಡೆದ ವಿಶ್ವ ರೈಲ್ವೆ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮುಂಬಯಿ ರೈಲ್ವೆ ಉದ್ಯೋಗಿ ಸುಳ್ಯದ ಜಯನಗರ ನಿವಾಸಿ ಸಂಶೀರ್ ಎಸ್.ಇ. ಅವರು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಂಗಾರದ ಪದಕಕ್ಕೆ ಕೊರಳೊಡಿದ್ದಾರೆ.

Advertisement

ಲಾಂಗ್ ಜಂಪ್ ಸ್ಪರ್ಧಿಯಾಗಿರುವ ಇವರು ಈಗಾಗಲೇ ರಾಜ್ಯ ಅಥ್ಲೆಟಿಕ್ಸ್ ನಲ್ಲಿ 24 ವರ್ಷದ ಹಿಂದಿನ ದಾಖಲೆ ಅಳಿಸಿ ಕೂಟ ದಾಖಲೆ‌ ನಿರ್ಮಿಸಿದ್ದರು. ಅಲ್ಲದೇ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಲಾಂಗ್ ಜಂಪ್ ನಲ್ಲಿ ಹಲವು ದಾಖಲೆ ಹೊಂದಿದ್ದಾರೆ. ಇದೀಗ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕೂಡ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಪದಕ ಜಯಿಸಿ ಹೊಸ ಸಾಧನೆ ತೋರಿದ್ದಾರೆ. ಪ್ರಸ್ತುತ ರೈಲ್ವೆಯ ತಿರುವನಂತಪುರ ಇಂಡಿಯನ್ ತರಬೇತಿ ಸಂಸ್ಥೆಯಲ್ಲಿ ನಾಲ್ಕು ವರ್ಷದಿಂದ ಅಭ್ಯಾಸ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next