Advertisement

ಪಿಲಿಕುಳದಲ್ಲಿ ಇಂದಿನಿಂದ ಅಂತಾರಾಷ್ಟ್ರೀಯ ಫುಲ್‌ ಡೋಮ್‌ ಚಿತ್ರೋತ್ಸವ

10:42 PM Nov 05, 2019 | mahesh |

ಮಹಾನಗರ: ದೇಶದಲ್ಲೇ ಪ್ರಥಮ ಬಾರಿಗೆ 3ಡಿ ಮತ್ತು 2ಡಿ ಚಿತ್ರ ಪ್ರದರ್ಶನ ಮಂಗಳೂರಿನ ಪಿಲಿಕುಳದಲ್ಲಿ ನ. 6ರಿಂದ ನಡೆಯುತ್ತಿದೆ. ಅಂತಾರಾಷ್ಟ್ರೀಯ ಫುಲ್‌ ಡೋಮ್‌ ಚಿತ್ರೋತ್ಸವ ಹೆಸರಿನಲ್ಲಿ ಈ ಚಿತ್ರ ಪ್ರದರ್ಶನ ಜರಗುತ್ತಿದ್ದು, ಅತಿದೊಡ್ಡ ಚಿತ್ರೋತ್ಸವಕ್ಕೆ ಪಿಲಿಕುಳ ಸಾಕ್ಷಿಯಾಗಲಿದೆ.

Advertisement

3ಡಿ ಮತ್ತು 2ಡಿ ಚಿತ್ರೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಅಂತಿಮಗೊಂಡಿದ್ದು, ಸಾರ್ವಜನಿಕರನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ. ಈ ಹಿಂದೆ ಸೂರತ್‌ನಲ್ಲಿ 2ಡಿ ಚಿತ್ರ ಪ್ರದರ್ಶನ ನಡೆಸಲಾಗಿತ್ತು. ಮಂಗಳೂರಿನಲ್ಲಿ ಈವರೆಗೆ ಯಾವುದೇ ಇಂತಹ ಪ್ರದರ್ಶನಗಳು ನಡೆದಿಲ್ಲ. ಆದರೆ, ಈಗ ದೇಶದಲ್ಲೇ ಮೊದಲ ಬಾರಿಗೆ 3ಡಿ ಮತ್ತು 2ಡಿ ಚಿತ್ರ ಪ್ರದರ್ಶನಗಳು ಒಟ್ಟಿಗೇ ನಡೆಯುತ್ತಿರುವುದು ಮಂಗಳೂರಿಗರ ಪಾಲಿಗೆ ಹೊಸ ಅವಕಾಶವಾಗಿದೆ.

ಚಿತ್ರ ಪ್ರದರ್ಶನ
ಸಾರ್ವಜನಿಕರಿಗಾಗಿ 6ರಂದು ಸ್ಕೈನೈಟ್‌-ಬರ್ತ್‌ ಆಫ್‌ ದಿ ಪ್ಲಾನೆಟ್‌-2ಡಿ, ಡೈನೋಸರ್ ಅಟ್‌ ಡಸ್ಕ್-3ಡಿ, ಅಪೋಲೋ 11 ಪ್ಲಸ್‌ ಡಿ6 ಸಿಮ್ಯುಲೇಶನ್‌-2ಡಿ, ವೈಲೆxಸ್ಟ್‌ ವೆದರ್‌ ಇನ್‌ ಸೋಲಾರ್‌ ಸಿಸ್ಟಂ-3ಡಿ, ಸ್ಪೇಸ್‌ ನೆಕ್ಸ್ಟ್-3ಡಿ;.

7ರಂದು ಸೀ ಮಾನ್‌ಸ್ಟರ್-3ಡಿ, ಈಜಿಪ್ಟ್: ಸೀಕ್ರೆಟ್ಸ್‌ ಆಫ್‌ ದ ಮಮ್ಮಿàಸ್‌-3ಡಿ, ವೈಲೆxಸ್ಟ್‌ ವೆದರ್‌ ಇನ್‌ ಸೋಲಾರ್‌ ಸಿಸ್ಟಮ್‌-3ಡಿ, ಟೇಲ್ಸ್‌ ಆಫ್‌ ಎ ಟೈಮ್‌ ಟ್ರಾವೆಲ್ಲರ್‌-2ಡಿ, ಸ್ಪೇಸ್‌ ನೆಕ್ಸ್ಟ್-3ಡಿ, ಟಚ್‌ ದ ಸ್ಟಾರ್-3ಡಿ; 8ರಂದು ಟೇಲ್ಸ್‌ ಆಫ್‌ ಎ ಟೈಮ್‌ ಟ್ರಾವೆಲ್ಲರ್‌-2ಡಿ, ವೆದರ್‌ ಇನ್‌ ಸೋಲಾರ್‌ ಸಿಸ್ಟಂ-3ಡಿ, ಡೈನೋಸರ್ ಎಟ್‌ ಡಸ್ಕ್-3ಡಿ, ಈಜಿಪ್ಟ್ ಸೀಕ್ರೆಟ್ಸ್‌ ಆಫ್‌ ದ ಮಮ್ಮಿàಸ್‌-3ಡಿ, ದ ಮೂನ್‌-2ಡಿ, ಸೀ ಮಾನ್‌ಸ್ಟರ್-3ಡಿ, ಸ್ಪೇಸ್‌ ನೆಕ್ಸ್‌r-3ಡಿ;.

9ರಂದು ಅಪೋಲೋ 11 ಪ್ಲಸ್‌ ಡಿ6 ಅಪೋಲೋ ಸಿಮ್ಯುಲೇಶನ್‌-2ಡಿ, ವೆದರ್‌ ಇನ್‌ ಸೋಲಾರ್‌ ಸಿಸ್ಟಮ್‌-3ಡಿ, ಇ ಎಕಸೋ-2ಡಿ, ಈಜಿಪ್ಟ್ ಸೀಕ್ರೆಟ್ಸ್‌ ಆಫ್‌ ದ ಮಮ್ಮಿàಸ್‌-3ಡಿ, ಸೀ ಮಾನ್‌ಸ್ಟರ್-3ಡಿ, ಸ್ಕೈಟೂನೈಟ್‌ ಪ್ಲಸ್‌ ಬರ್ತ್‌ ಆಫ್‌ ದ ಪ್ಲಾನೆಟ್‌ 2ಡಿ, ದ ಮೂನ್‌-2ಡಿ, ಟಚ್‌ ದ ಸ್ಟಾರ್-3ಡಿ, ಸ್ಪೇಸ್‌ ನೆಕ್ಸ್ಟ್-3ಡಿ;.

Advertisement

10ರಂದು ಅಪೋಲೋ 11 ಪ್ಲಸ್‌ ಡಿ6 ಅಪೋಲೋ ಸಿಮ್ಯುಲೇಶನ್‌-2ಡಿ, ವೆದರ್‌ ಇನ್‌ ಸೋಲಾರ್‌ ಸಿಸ್ಟಂ-3ಡಿ, ಬಿಯಾಂಡ್‌ ದ ಸನ್‌-2ಡಿ, ಸ್ಪೇಸ್‌ ನೆಕ್ಸ್ಟ್-3ಡಿ, ಮಾರ್ 1001-2ಡಿ, ಟೇಲ್ಸ್‌ ಆಫ್‌ ಎ ಟೈಮ್‌ ಟ್ರಾವೆಲ್ಲರ್‌-2ಡಿ, ಸೀ ಮಾನ್‌ಸ್ಟರ್-3ಡಿ, ಟಚ್‌ ದ ಸ್ಟಾರ್-3ಡಿ, ಈಜಿಪ್ಟ್ ಸೀಕ್ರೆಟ್ಸ್‌ ಆಫ್‌ ದ ಮಮ್ಮಿàಸ್‌-3ಡಿ ಸೇರಿದಂತೆ ವಿವಿಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಮುಂಗಡ ಬುಕ್ಕಿಂಗ್‌ಗೆ ಅವಕಾಶ
ಈಗಾಗಲೇ ಹಲವಾರು ಮಂದಿ ಈ ಚಿತ್ರಗಳನ್ನು ನೋಡಲು ಮುಂಗಡ ಬುಕ್ಕಿಂಗ್‌ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಬುಕ್ಕಿಂಗ್‌ಗೆ ಅವಕಾಶವಿದೆ. ಬುಕ್‌ ಮೈ ಶೋದಲ್ಲಿ ಮುಂಗಡ ಬುಕ್ಕಿಂಗ್‌ ಮಾಡಿಕೊಂಡು ಚಿತ್ರಗಳನ್ನು ವೀಕ್ಷಿಸಬಹುದಾಗಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ. ವಿ. ರಾವ್‌ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳಿಂದ ಶೈಕ್ಷಣಿಕ ವಸ್ತು ಪ್ರದರ್ಶನ, ವಿಶ್ವೇಶ್ವರಯ್ಯ ಮ್ಯೂಸಿಯಂನ ಸಹಕಾರದಿಂದ ಬಾಹ್ಯಾಕಾಶ ವಿಜ್ಞಾನ ಮ್ಯೂಸಿಯೋ ಬಸ್‌ ಇರಲಿದೆ. ರಾಜ್ಯದ ಅಧ್ಯಾಪಕರಿಗೆ ಕಂಕಣ ಸೂರ್ಯಗ್ರಹಣ ಬಗ್ಗೆ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಹಮ್ಮಿಕೊಂಡಿದೆ.

ಇಂದು ಉದ್ಘಾಟನೆ
ಕಾರ್ಯಕ್ರಮ ನ. 6ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಒಟ್ಟು ಅವಧಿ 6ರಿಂದ 8ರವರೆಗೆ ಆಗಿದ್ದರೂ, ಸಾರ್ವಜನಿಕರಿಗಾಗಿ ಚಿತ್ರ ಪ್ರದರ್ಶನ ನ. 10ರ ವರೆಗೂ ನಡೆಯಲಿದೆ. ಜಿಲ್ಲೆಯ ಸರಕಾರಿ ಶಾಲೆಗಳ ಆಯ್ದ ಮಕ್ಕಳಿಗಾಗಿ 7ರಂದು ಚಿತ್ರ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಿ ಎರಡು ಸಂಚಾರಿ ತಾರಾಲಯಗಳನ್ನು ಖಗೋಳಶಾಸ್ತ್ರ ಸಂಬಂಧಿ ಕಾರ್ಯಕ್ರಮ ಹಾಗೂ ಚಿತ್ರ ಪ್ರದರ್ಶನಗಳನ್ನು ವೀಕ್ಷಿಸಲು ಈಗಾಗಲೇ ಸಿದ್ಧಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next