Advertisement

ಇಂದು ವಿಶ್ವ ಓಜೋನ್‌ ದಿನ; ವಿಶೇಷತೆಯೇನು ?

10:14 AM Sep 17, 2019 | Sriram |

ಪ್ರತಿ ವರ್ಷ ಸೆಪ್ಟಂಬರ್‌ 16 ರಂದು ವಿಶ್ವ ಓಜೋನ್‌ ದಿನ ಎಂದು ಆಚರಿಸುತ್ತಾರೆ. ಆದರೆ ಅದರ ಮಹತ್ವವನ್ನರಿಯದ ನಾವು ಅದರ ವಿನಾಶದ ಹಂಚಿಗೆ ಕಾರಣರಾಗುತ್ತಿದ್ದೇವೆ.

Advertisement

ಮನು ಕುಲವನ್ನು ರಕ್ಷಿಸಲು ಉದ್ಭವಾಗಿರುವ ಹಲವಾರು ಪ್ರಕೃತಿ ರಕ್ಷ ಕವಚಗಳಲ್ಲಿ ಓಜೋನ್‌ ಪದರವು ಒಂದು. ಆದರೆ ಅಂತಹ ರಕ್ಷೆ ಒದಗಿಸುವ ಕವಚದ ಧ್ವಂಸ ಮಾಡುವ ಧೈರ್ಯ ಮಾಡುತ್ತಿದ್ದೇವೆ. ಅದರ ಪರಿಣಾಮದ ಆಳ ಅರಿಯದೇ ಪರಿಸರ ಮಾಲಿನ್ಯದಂತಹ ಕೃತ್ಯಗಳನ್ನು ಮುಂದುವರಿಸಿಯುತ್ತಿದ್ದೇವೆ. ಇಂತಹ ಮನಸ್ಥಿತಿ ಹೀಗೆ ಮುಂದುವರೆದ್ದರೆ ಮುಂದೊಂದು ದಿನ ಭೀಕರವಾದ ಅಂತ್ಯ ಕಾಣುವುದು ಸುಳ್ಳಲ್ಲ.

ಹಾಗಾದರೆ ಓಜೋನ್‌ ಪದರ ಎಂದರೇನು? ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಓಜೋನ್‌ ಎಷ್ಟು ಪ್ರಾಮುಖ್ಯ? ಅದರ ಮಹತ್ವವೇನು ? ಕಾರ್ಬನ್‌ ಹೊರಸೂಸುವಲ್ಲಿ ಯಾವ ದೇಶ ಮುಂಚೂಣಿ ಎಲ್ಲಿದೆ ? ಎಂಬ ವಿವರ ಇಲ್ಲಿದೆ.

ಓಜೋನ್‌ ಎಂದರೇನು ?
ಅದು ಆಮ್ಲಜನಕದ ಒಂದು ರೂಪ. ಅದರ ರಾಸಾಯನಿಕ ಸಂಕೇತ “ಓ’.

1839 ರಲ್ಲಿ ಶೋಧ?
1839ರಲ್ಲಿ ಶೋಧ ಮಾಡುವ ಮೂಲಕ ಓಜೋನ್‌ ಪದರವನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಕಂಡುಕೊಂಡಿದ್ದರು.

Advertisement

ಸಾಮಾನ್ಯ ಆಮ್ಲಜನಕಕ್ಕಿಂತ ಅದು ಹೇಗೆ ಭಿನ್ನ ?
ಸಾಮಾನ್ಯ ಆಮ್ಲಜನಕವು ಎರಡು ಪರಮಾಣುಗಳನ್ನು ಒಳಗೊಂಡಿರುತ್ತದೆ. ಓಜೋನ್‌ನಲ್ಲಿ ಮೂರು ಪರಮಾಣುಗಳಿರುತ್ತವೆ.

ಓಜೋನ್‌ ಹೇರಳವಾಗಿ ಇರುವುದು ಎಲ್ಲಿ ?
ವಾಯುಮಂಡಲದ “ಸ್ಟ್ರಾಟೋಸಿ#ಯರ್‌’ನಲ್ಲಿ 15 ರಿಂದ 50 ಕಿ.ಮೀ ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇತ್ಛವಾಗಿ ಇರುತ್ತದೆ. ಭೂಮಂಡಲದ ಜೀವಿಗಳಿಗೆ ಓಜೋನ್‌ ತುಂಬಾ ಮುಖ್ಯ.

ಯಾಕೆ ?
ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಓಜೋನ್‌ ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್‌ನ ಈ ಫಿಲ್ಟರ್‌ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು.

ದಿನದಿಂದ ದಿನಕ್ಕೆ ಹೆಚ್ಚಾದ ಓಜೋನ್‌ ಕುರಿತ ಚರ್ಚೆಗಳು ?
ಕ್ಲೋರೊಪಿರೊ, ಇಂಗಾಲದಂಥ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಓಜೋನ್‌ ಪದರ ತೆಳುವಾಗುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸ್ಪಷ್ಟವಾಗಿದೆ. ಹಾಗಾಗಿ ಆ ಪದರಕ್ಕೆ ಇನ್ನೂ ಹೆಚ್ಚು ಹಾನಿ ಮಾಡದಂತೆ ಹಾಗೂ ಕ್ಲೋರೊಪಿÂರೊ ಮತ್ತು ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಸಲಹೆಗಳು ವಿಶ್ವದ ವಿವಿಧೆಡೆಯಿಂದ ಹರಿದು ಬರುತ್ತಿವೆ.

17% ರಷ್ಟು ವಿನಾಶ
2020 ಅಂತ್ಯವಾಗುವ ವೇಳೆಗೆ ಸುಮಾರು 17 % ರಷ್ಟು ಓಜೋನ್‌ ಪದರ ತೆಳುವಾಗುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಓಜೋನ್‌ ಪದರ ಕರಗಲು ಮುಖ್ಯ ಕಾರಣ?
* ಬೆಳೆಯುತ್ತಿರುವ ಕೈಗಾರಿಕ ಘಟಕಗಳು.
* ಕಾರ್ಖಾನೆಗಳಿಂದ ಹೊರಹುಮ್ಮುವ ವಿಷಕಾರಕ ಅನಿಗಳು.
* ವಾಹನಗಳಿಂದ ಹೊರಬರುವ ಹೊಗೆ ಹಾಗೂ ಶೀಥಲೀಕರಣ ಯಂತ್ರದಿಂದ ಬರುವ ಅನಿಲ.
* ಮಿಥೇನ್‌, ಕಾರ್ಬನ್‌ ಮೋನೋಕ್ಸೆ„ಡ್‌, ಕ್ಲೋರೋಪ್ಲೋರೋ ಕಾರ್ಬನ್‌, ಕ್ಲೋರಿನ್‌, ಬ್ರೋಮಿನ್‌, ಮೀಥೈಲ್‌ ಬ್ರೋಮೈಡ್‌, ಹೈಡ್ರೋ ಫ್ಲೋರೋ ಕಾರ್ಬನ್‌ ಮುಂತಾದ ಅನಿಗಳಿಂದಲ್ಲೂ ಮಾರಕ.

ಓಜೋನ್‌ ಪದರ ತೆಳುವಾದರೇ ಏನಾಗುತ್ತದೆ ?
* ಪರಿಸರದ ಸಮತೋಳನ ಕಳೆದುಹೋಗಿ, ಭೂಮಿ ಬರಡಾಗುತ್ತದೆ.
* ಜೀವ ವೈವಿಧ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾಗುತ್ತದೆ.
* ಪರಿಣಾಮ ಮನುಷ್ಯ ಆರೋಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್‌ ಬರಬಹುದು.
* ನೀರಿನ ಕೊರತೆ ಕಾಡಬಹುದು.

ಚೀನಾಕ್ಕೆ ಮೊದಲ ಸ್ಥಾನ
ವಿಶ್ವ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.

ಭಾರತಕ್ಕೆ ನಾಲ್ಕನೇ ಸ್ಥಾನ
ವಿಶ್ವದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಟಾಪ್‌ ಟೆನ್‌ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಟಾಪ್‌ ಟೆನ್‌ ದೇಶಗಳು
– ಚೀನಾ.
– ಅಮೆರಿಕಾ.
– ಯರೋಪಿಯನ್‌.
– ಭಾರತ .
– ರಷ್ಯಾ.
– ಜಪಾನ್‌.
– ಜರ್ಮನಿ.
– ಇರಾನ್‌.
– ಸೌದಿ ಅರೇಬಿಯಾ.
– ದಕ್ಷಿಣ ಕೊರಿಯಾ.

ಚಿಕಿತ್ಸೆಯಲ್ಲೂ ಓಜೋನ್‌ ಬಳಕೆ ?
“ಸ್ಲಿಪ್‌ ಡಿಸ್ಕ್ನಿಂದಾಗಿ ಬೆನ್ನುನೋವು ಇರುವವರಿಗೆ ಓಜೋನ್‌ ಚುಚ್ಚುಮದ್ದನ್ನು ನೀಡುತ್ತಾರೆ. ಹಾನಿಗೊಳಗಾದ ಬೆನ್ನುಮೂಳೆಯನ್ನು ಹಿಡಿದುಕೊಳ್ಳುವ ವೃತ್ತಾಕಾರದ “ಡಿಸ್ಕ್’ಗೆ ಓಜೋನ್‌ ಅನ್ನು ಚುಚ್ಚು ಮದ್ದಿನ ಮೂಲಕ ಕೊಡುತ್ತಾರೆ. ಇದರಿಂದ ನೋವು ಬಹುತೇಕ ನಿವಾರಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next