Advertisement

ಚಿನ್ಮಯ ವಿದ್ಯಾಲಯ: ಮಾದಕ ದ್ರವ್ಯ ವಿರೋಧಿ ದಿನಾಚರಣೆ

11:16 PM Jun 26, 2019 | Sriram |

ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.

Advertisement

ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಮೂಲಕ ಮಾದಕ ದ್ರವ್ಯ ವ್ಯಸನ ಇಡೀ ಸಮಾಜಕ್ಕೆ ಬೀರುವ ದುಷ್ಪರಿಣಾಮಗಳ ಬಗ್ಗೆ ಪ್ರಜ್ಞೆ ಮೂಡಿಸಿದರು. ಈ ಬಗೆಗಿನ ಹಲವಾರು ಭಿತ್ತಿಪತ್ರ, ವೀಡಿಯೋ ಪ್ರದರ್ಶನದ ಮೂಲಕ ಮಾದಕ ದ್ರವ್ಯ ವ್ಯಸನಿಗಳು ಒಮ್ಮೆ ಇದಕ್ಕೆ ಬಲಿಯಾದರೆ ಅದರಿಂದ ಹೊರಬರಲಾರದೆ ಬಳಲುವ ಹೃದಯ ವಿದ್ರಾವಕ ಚಿತ್ರಗಳನ್ನೂ, ಸನ್ನಿವೇಶಗಳನ್ನೂ ಪ್ರದರ್ಶಿಸಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥೆ ಸ್ವಪ್ನಾ ನೇತೃತ್ವದಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳನ್ನು ಸಾರುವ ವಸ್ತು ಪ್ರದರ್ಶನವನ್ನು ಏರ್ಪಡಿಸಿದರು. ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ಇದರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರಲ್ಲದೆ ಶಾಲಾ ತರಗತಿ ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ವಿಜ್ಞಾನ ವಿಭಾಗದ ಇತರ ಅಧ್ಯಾಪಕರಾದ ರತೀಶ್‌, ಶಿವರಾಜ್‌, ಶೀನ ಕೆ.ಪಿ. ಮೊದಲಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next