Advertisement

ಮೊಹಾಲಿಯಲ್ಲಿ ನಡೆದದ್ದು ಕೊನೆಯ ಪಂದ್ಯವೇ?

11:24 PM Mar 07, 2022 | Team Udayavani |

ಮೊಹಾಲಿ: ಭಾರತದ ಖ್ಯಾತ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಒಂದಾದ, ಅನೇಕ ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾದ ಮೊಹಾಲಿಯ “ಐ.ಎಸ್‌. ಬಿಂದ್ರಾ ಸ್ಟೇಡಿಯಂ’ನಲ್ಲಿನ್ನು ಅಂತಾರಾಷ್ಟ್ರೀಯ ಪಂದ್ಯ ನಡೆಯುವುದಿಲ್ಲವೇ? ಭಾರತ-ಶ್ರೀಲಂಕಾ ನಡುವೆ ರವಿವಾರ ಮುಗಿದ ಟೆಸ್ಟ್‌ ಮುಖಾಮುಖಿಯೇ ಇಲ್ಲಿನ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೇ? ಚಂಡೀಗಢದ ಪತ್ರಿಕೆಯೊಂದರ ವರದಿ ಪ್ರಕಾರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ “ಹೌದು’!

Advertisement

ಕಾರಣ, ಮೊಹಾಲಿಯಿಂದ 15 ಕಿ.ಮೀ. ದೂರದ ಮುಲ್ಲಾನ್‌ಪುರದಲ್ಲಿ ತಲೆ ಎತ್ತಿರುವ ಸುಸಜ್ಜಿತ ನೂತನ ಕ್ರೀಡಾಂಗಣ. ಮೊಹಾಲಿ ಸ್ಟೇಡಿಯಂಗೆ ಹೋಲಿಸಿದರೆ ಇಲ್ಲಿನ ವೀಕ್ಷಕರ ಸಾಮರ್ಥ್ಯ 10 ಸಾವಿರದಷ್ಟು ಜಾಸ್ತಿ. ಅಲ್ಲಿ 25 ಸಾವಿರವಾದರೆ, ಇಲ್ಲಿ 35 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬಹುದು. ಪಾರ್ಕಿಂಗ್‌ ಸ್ಥಳಾವಕಾಶವೂ ಹೆಚ್ಚು ವಿಸ್ತಾರವಾಗಿದೆ. ಡ್ರೈನೇಜ್‌ ಸೌಕರ್ಯವೂ ಅದ್ಭುತ ಮಟ್ಟದಲ್ಲಿದೆ. ಮಳೆ ನಿಂತ ಅರ್ಧ ಗಂಟೆಯಲ್ಲೇ ಪಂದ್ಯವನ್ನು ಆರಂಭಿಸಬಹುದು.

ಈ ಎಲ್ಲ ಕಾರಣಗಳಿಂದ ಮೊಹಾಲಿಯ ಐ.ಎಸ್‌.ಬಿಂದ್ರಾ ಸ್ಟೇಡಿಯಂ ಇತಿಹಾಸ ಸೇರು ವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಬಹುಶಃ ಪಂಜಾಬ್‌ಗ ಮುಂದಿನ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ಲಭಿಸುವ ವೇಳೆ ಮುಲ್ಲಾನ್‌ಪುರದ ಸ್ಟೇಡಿಯಂ ಸಜ್ಜಾದೀತು.

ಇದರ ನಿರ್ಮಾಣ ಕಾರ್ಯ 2013-14ರಲ್ಲೇ ಆರಂಭವಾಗಿತ್ತು. ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಗಿದಿದೆ. ದ್ವಿತೀಯ ಹಂತ ಇನ್ನೇನು ಮುಗಿಯಲಿದೆ. ಈಗಾಗಲೇ ಇಲ್ಲಿ ರಾಜ್ಯ ಮಟ್ಟದ ಕೆಲವು ಕ್ರಿಕೆಟ್‌ ಪಂದ್ಯಗಳನ್ನು ಆಡಲಾಗಿದೆ. ಎರಡು ವಿಶಾಲ ಮೈದಾನಗಳನ್ನು ಹೊಂದಿರುವುದು ಈ ಸ್ಟೇಡಿಯಂನ ಹೆಗ್ಗಳಿಕೆ.

Advertisement

ಹರ್ಯಾಣದಲ್ಲೂ ಸ್ಟೇಡಿಯಂ
ಪಕ್ಕದ ಹರ್ಯಾಣದಲ್ಲೂ ಸುಸಜ್ಜಿತ ಕ್ರಿಕೆಟ್‌ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆ ಇದೆ. ಇಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣವಿಲ್ಲ. ಚಂಡೀಗಢದ ಸೆಕ್ಟರ್‌-16 ಸ್ಟೇಡಿಯಂ ಸಾಮಾನ್ಯ ಮಟ್ಟದ ಕ್ರೀಡಾಂಗಣ. 2006ರಲ್ಲಿ ಭಾರತ- ಆಸ್ಟ್ರೇಲಿಯ ನಡುವೆ ನಡೆದ ಏಕದಿನ ಪಂದ್ಯದ ಬಳಿಕ ಇದಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ಲಭಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next