ಮಹಾನಗರ: ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ವತಿಯಿಂದ ಎ. 16ರಂದು ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಕುಡ್ಲ ಫೆವಿಲಿಯನ್‌ನಲ್ಲಿ ಬಿಸುತ ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯು ನಗರದಲ್ಲಿ ಇತ್ತೀಚೆಗೆ ನಡೆಯಿತು.
ಬಿಸುತ ದಿನ ಸಮಾರಂಭದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ವಹಿಸಲಿದ್ದಾರೆ. ಬಿಸುಕಣಿ ಉದ್ಘಾಟಣೆ ಯನ್ನು ಮೈನಾ ಸದಾನಂದ ಶೆಟ್ಟಿ ನಿರ್ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿಟ್ಟೆ ಮಾನವಿಕಾ ವಿಭಾಗದ ಕ್ಷೇಮದ ಮುಖ್ಯಸ್ಥೆ ಡಾ| ಸಾಯಿ ಗೀತಾ ಬಿಸು ಸಂದೇಶ ನೀಡಲಿದ್ದಾರೆ. ಮಂಗಳಾದೇವಿ ದೇವಸ್ಥಾನದ ಆನು ವಂಶಿಕ ಮೊಕ್ತೇಸರ ರಮಾನಾಥ್ ಹೆಗಡೆ ಭಾಗವಹಿಸಲಿದ್ದಾರೆ.
ಬಿಸು ಮಾನದಿಗೆ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಬ್ಯಾಂಕಿಗ್ ಕ್ಷೇತ್ರದಲ್ಲಿ ಸಾಧನೆಗೈದ ವಿಜಯ ಬ್ಯಾಂಕಿನ ಮಾಜಿ ವಲಯ ಪ್ರಬಂಧಕ ಎ. ಕೃಷ್ಣಾನಂದ ಶೆಟ್ಟಿ ಅವರನ್ನು ಬಿಸು ಮಾನದಿಗೆ ನೀಡಿ ಸಮ್ಮಾನಿಸಲಾಗುವುದು. ಸಿರಿಮನೆ ಕಮಲಾಕ್ಷ ಬಿ. ಶೆಟ್ಟಿ ಅವರಿಂದ ತುಳುನಾಡ ಸಂಸ್ಕೃತಿಯ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಭಿ ಸವಾಲ್, ರಸಪ್ರಶ್ನೆ ಸಹಿತ ಮುರಳೀಧರ ಕಾಮತ್ ಬಳಗದಿಂದ ಪದರಂಜಿತ ರಸಮಂಜರಿ ಕಾರ್ಯಕ್ರಮ ಮತ್ತು ಅಮೃತ ಪಲಾಹರ ವಿತರಣೆ ನಡೆಯಲಿದೆ.
ಸಮಾರಂಭ ಪೂರ್ವ ಸಿದ್ಧತಾ ಸಭೆಯ ವೇದಿಕೆಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ದೇವಿಚರಣ್ ಶೆಟ್ಟಿ, ಬಾಸ್ಕರ್ ರೈ ಕುಕ್ಕುವಳ್ಳಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯಾ ಶೆಟ್ಟಿ, ರೂಪಶ್ರೀ ಶೆಟ್ಟಿ, ಗೋàಪಿನಾಥ್ ಶೆಟ್ಟಿ, ರಥನ್ ಶೆಟ್ಟಿ, ಮದಲಾಕ್ಷಿ ರೈ, ಸತ್ಯ ಪ್ರಸಾದ್ ಶೆಟ್ಟಿ, ಎಂ.ಸಿ. ಶೆಟ್ಟಿ, ಶಿವರಾಮ ಶೆಟ್ಟಿ, ಆರತಿ ಆಳ್ವ, ತಾರನಾಥ ಶೆಟ್ಟಿ ಬೋಳಾರ್, ಗಣೇಶ್ ಮಲ್ಲಿ, ರೇಖಾ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಕಮಲಾಕ್ಷ ಬಿ ಶೆಟ್ಟಿ, ವಿಜಯಲಕ್ಷ್ಮೀ ಪ್ರಸಾದ್ ರೈ, ಸೀತಾರಾಮ್ ಶೆಟ್ಟಿ, ಜಗದೀಶ್ ಶೆಟ್ಟಿ, ರಘುರಾಮ್ ಶೆಟ್ಟಿ ಮತ್ತು ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.ತೀರ್ಥಹಳ್ಳಿ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ, ಕದ್ರಿ ನವನೀತ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಸಂಚಾಲಕಿ ವಿಜಯಲಕ್ಷ್ಮೀ ಬಿ. ಶೆಟ್ಟಿ ನಿರ್ವಿಹಿಸಿದರು.