Advertisement

704 ದಿನಗಳ ಬಳಿಕ ಆಸ್ಟ್ರೇಲಿಯಾ “ಓಪನ್‌’

08:17 PM Feb 21, 2022 | Team Udayavani |

ಸಿಡ್ನಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಬಂದ್‌ ಆಗಿದ್ದ ಆಸ್ಟ್ರೇಲಿಯಾದ ಗಡಿ ಈಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಕ್ತವಾಗಿದೆ.

Advertisement

ಸೋಮವಾರ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವು ತೆರವಾಗಿದ್ದು, ಈವರೆಗೆ ತಮ್ಮ ಪ್ರೀತಿಪಾತ್ರರಿಂದ ದೂರವುಳಿದಿದ್ದ ಕುಟುಂಬಗಳು, ಸ್ನೇಹಿತರು ಸಿಡ್ನಿ ಏರ್‌ಪೋರ್ಟ್‌ನಲ್ಲಿ ಒಂದಾಗಿದ್ದಾರೆ.

ಸೋಮವಾರ ಮುಂಜಾನೆ 6.20ರ ವೇಳೆಗೆ ಲಾಸ್‌ಏಂಜಲೀಸ್‌ನಿಂದ ಮೊದಲ ವಿಮಾನ ಸಿಡ್ನಿ ನೆಲವನ್ನು ಸ್ಪರ್ಶಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಹೇರಲಾಗಿದ್ದ 704 ದಿನಗಳ ನಿರ್ಬಂಧವು ಸಂಪೂರ್ಣ ತೆರವಾದಂತಾಗಿದೆ.

ವಿಮಾನನಿಲ್ದಾಣದಲ್ಲಿ ಎಲ್ಲೆಲ್ಲೂ “ವೆಲ್‌ಕಂ ಬ್ಯಾಕ್‌’ ಎಂಬ ಫ‌ಲಕಗಳು ಕಾಣಿಸುತ್ತಿದ್ದು, ಕೆಲವರ ಕಣ್ಣಲ್ಲಿ ಆನಂದಭಾಷ್ಪ ಜಿನುಗಿದರೆ, ಮತ್ತೆ ಕೆಲವರು ಪರಸ್ಪರ ಆಲಿಂಗಿಸಿಕೊಂಡು, ಕುಣಿದಾಡಿದ್ದಾರೆ.

ಇದನ್ನೂ ಓದಿ:ನಾಳೆ ಸಂಜೆ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದಿಂದ ರಾಜಭವನದ ವರೆಗೆ ಪಾದಯಾತ್ರೆ

Advertisement

ಗಡಿಗಳನ್ನು ತೆರೆದಿರುವುದರಿಂದ ಇಂದು ಆಸ್ಟ್ರೇಲಿಯಾದ ಪ್ರವಾಸೋದ್ಯಮ ವಲಯಕ್ಕೆ “ಸಂಭ್ರಮದ ದಿನ’ ಎಂದು ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡ್ಯಾನ್‌ ಟೆಹಾನ್‌ ಹೇಳಿದ್ದಾರೆ. ಸೋಮವಾರ ಒಂದೇ ದಿನ ಆಸ್ಟ್ರೇಲಿಯಾಗೆ 56 ವಿಮಾನಗಳು ಬಂದಿಳಿಯಲಿವೆ.

2020ರ ಮಾರ್ಚ್‌ ತಿಂಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ಹೇರಲಾಗಿತ್ತು. ಬಳಿಕ ಜಗತ್ತಿನಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಆಸ್ಟ್ರೇಲಿಯಾದಲ್ಲಿ ಹೇರಲಾಯಿತು. ಬೇರೆ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ಪ್ರವೇಶ ನಿರಾಕರಿಸಲಾಗಿತ್ತು.

 

 

Advertisement

Udayavani is now on Telegram. Click here to join our channel and stay updated with the latest news.

Next