Advertisement

ಆಂತರಿಕ ವಿನ್ಯಾಸಗಾರರಿಗಿದೆ ಅಪಾರ ಅವಕಾಶ

04:23 AM May 08, 2019 | Team Udayavani |

ಮನೆ ಕಟ್ಟುವುದು ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿ ಅದನ್ನು ಸಿಂಗರಿಸುವುದು ಅಷ್ಟೇ ಮುಖ್ಯ. ಹೀಗಾಗಿ ಮನೆಯ ಸಿಂಗಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚುತ್ತಿದೆ. ಮನೆಗೆ ಯಾವ ಬಣ್ಣ ನೀಡಿದರೆ ಸೂಕ್ತ, ಲೈಟಿಂಗ್‌ ಹೇಗೆ ಇರಬೇಕು ಎಂಬುದನ್ನು ಕ್ರಿಯಾತ್ಮಕವಾಗಿ ವಿನ್ಯಾಸಕಾರ ತಿಳಿಯಪಡಿಸುತ್ತಾನೆ.

Advertisement

ಒಳಾಂಗಣ ವಿನ್ಯಾಸಕಾರರ ಕರ್ತವ್ಯಗಳು
ಹೊಸ ಹೊಸ ಯೋಜನೆಗಳನ್ನು ತೆಗೆದುಕೊಂಡು ಗ್ರಾಹಕನಿಗೆ ಬೇಕಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡುವುದಲ್ಲದೆ ಇರುವ ಜಾಗದಲ್ಲಿ ಪೀಠೊಪಕರಣ, ನೆಲಹಾಸು ಮುಂತಾದವುಗಳನ್ನು ಮನೆಗಳಲ್ಲಿ ಹೇಗೆ ಜೋಡಣೆ ಮಾಡಬೇಕು ಎಂದು ಅರಿತು ಅದಕ್ಕೆ ಆಗುವ ಮೊತ್ತವನ್ನು ಅಂದಾಜು ಮಾಡುವುದು. ಯೋಜನೆ ಪೂರ್ಣಗೊಂಡ ಬಳಿಕ ಗ್ರಾಹಕರು ತೃಪ್ತಿ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಎಲ್ಲಕ್ಕಿಂತ ಮಖ್ಯ . ಇದರಿಂದ ವೃತ್ತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.

ಶಿಕ್ಷಣ
ವಿನ್ಯಾಸಕಾರರಾಗಲು ಸ್ನಾತಕೋತ್ತರ ಪದವಿಗಳಿದ್ದು ಡಿಗ್ರಿಯಲ್ಲಿ ಇದನ್ನು ಒಂದು ಪ್ರತ್ಯೇಕ ವಿಷಯವಾಗಿ ತೆಗೆದುಕೊಳ್ಳಬಹುದು ಇಲ್ಲವಾದಲ್ಲಿ ಟ್ರೇನಿಂಗ್‌ ಕೋರ್ಸ್‌ಗಳನ್ನು ಆಸಕ್ತಿಗೆ ಪೂರಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಪೂರಕವಾಗಿ ಹಲವಾರು ಕಾಲೇಜುಗಳಿದ್ದು ಅರ್ಜಿ ಸಲ್ಲಿಸುವಾಗ ನಿಮ್ಮಲ್ಲಿರುವ ಕಲಾತ್ಮಕ ಸಾಮಥ್ಯದ ರೇಖಾಚಿತ್ರಗಳು ಮತ್ತು ಇತರ ಉದಾಹರಣೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರ ಆದಾರದ ಮೇಲೆ ನಿಮ್ಮ ಕ್ರೀಯಾಶೀಲತೆಯನ್ನು ಗಮನಿಸಲಾಗುತ್ತದೆ.

ಒಳಾಂಗಣ ವಿನ್ಯಾಸಗಳಲ್ಲಿ ಅನೇಕ ವಿಧಗಳಿದ್ದು ಅವುಗಳಲ್ಲಿ 3 ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿದ್ದು ಇದಕ್ಕೆ ಸಬಂಧಪಟ್ಟ ವಿನ್ಯಾಸಕಾರರಿಗೆ ಇತ್ತೀಚಿನ ದಿನಗಳಲ್ಲಿ ಬಲು ಬೇಡಿಕೆ ಇದೆ. ಕಾರ್ಪೊರೇಟ್ ವಿನ್ಯಾಸಕಾರರು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಕ್ರಿಯಾತ್ಮಕ ಮತ್ತು ಸುರಕ್ಷಿತವಾಗಿರುವಂತಹ ವಿನ್ಯಾಸವನ್ನು ರಚಿಸುತ್ತಾರೆ, ಇದರಲ್ಲಿ ಕಂಪೆನಿಯ ಬ್ರಾಂಡ್‌ ಅನ್ನು ಪ್ರಮೋಟ್ ಮಾಡುವುದು ಮುಖ್ಯವಾಗಿರುತ್ತದೆ.

ಹೇಲ್ತ್ಕೇರ್‌ ವಿನ್ಯಾಸಕಾರರು ಆರೋಗ್ಯ ಕೇಂದ್ರಗಳು, ಚಿಕಿತ್ಸಾಲಯ, ವೈದ್ಯರ ಕಚೇರಿ, ಆಸ್ಪತ್ರೆ, ವಸತಿ ಸೌಕರ್ಯಗಳಲ್ಲಿ ವಿನ್ಯಾಸಗೊಳಿಸುವುದು ಮತ್ತು ನವೀಕರಿಸುವುದು ಮುಖ್ಯ ಕೆಲಸವಾಗಿದ್ದು ಇದಕ್ಕೆಂದೇ ವೃತ್ತಿಪರ ತರಗತಿ ಕೂಡ ಇರುತ್ತದೆ. ಇನ್ನೊಂದು ಅಡುಗೆಮನೆ ವಿನ್ಯಾಸಕಾರರು ಮನೆಯ ರೂಮ್‌ಗಳ ವಿನ್ಯಾಸ ಮಾಡುವುದು ಇವರ ಕೆಲಸವಾಗಿದ್ದು ಯಾವ ರೀತಿಯಲ್ಲಿ ವಿನ್ಯಾಸ ಮಾಡುವುದು ಎಂಬುದು ಅವರ ಕ್ರಿಯಾಶೀಲತೆಗೆ ಬಿಟ್ಟ ವಿಚಾರವಾಗಿರುತ್ತದೆ.

Advertisement

ಅರೆಕಾಲಿಕ ಉದ್ಯೋಗಕ್ಕೆ ಅವಕಾಶ
ಬೇರೆ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ ಅಥವಾ ಓದುತ್ತಲೇ ಈ ಕೆಲಸವನ್ನು ನಿರ್ವಹಿಸಬಹುದು ಇದಕ್ಕೆ ಕ್ರೀಯಾಶೀಲತೆ ಮುಖ್ಯವಾಗಿದ್ದು ನಿಮ್ಮ ಯೋಚನೆಗಳು ಮತ್ತು ಅದಕ್ಕೆ ತಕ್ಕಂತೆ ನೀವು ಸಂಯೋಜಿಸುವ ವಿಧಾನ ಇಲ್ಲಿ ಮುಖ್ಯವಾಗಿರುತ್ತದೆ.

•ಪ್ರೀತಿ ಭಟ್, ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next