Advertisement

ಅಂತರ್‌ಜಿಲ್ಲಾ ಕಳವು ಆರೋಪಿಗಳ ಬಂಧನ

02:37 PM Aug 01, 2017 | Team Udayavani |

ಉಡುಪಿ: ಅಂತರ್‌ ಜಿಲ್ಲಾ ಕಳವು ಆರೋಪಿಗಳಿಬ್ಬರನ್ನು ಉಡುಪಿ ಜಿಲ್ಲಾ ಅಪರಾಧ ತನಿಖಾ ದಳದ (ಡಿಸಿಐಬಿ) ಪೊಲೀಸರ ತಂಡ ಬಂಧಿಸಿದೆ.

Advertisement

ಮೈಸೂರಿನ ಅರುಣ್‌ಕುಮಾರ್‌ ಯಾನೆ ಕಿರಣ್‌ (28) ಮತ್ತು ಹುಬ್ಬಳ್ಳಿಯ ಅಮರೇಶ್‌ (28) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹೆಬ್ರಿ ಠಾಣೆ ವ್ಯಾಪ್ತಿಯ ಮುದ್ರಾಡಿ ಮತ್ತು ಸೀತಾನದಿಯಲ್ಲಿ ಮನೆಯ ಬೀಗ ಒಡೆದು ಅವರು ಕಳವು ಮಾಡಿದ್ದ ಎರಡು ಚಿನ್ನದ ಚೈನು, ಕೃತ್ಯಕ್ಕೆ ಬಳಸಿದ ಬೈಕ್‌, ಸೂಡ್ರೈವರ್‌, ಕಬ್ಬಿಣದ ರಾಡ್‌ ಅನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ 99 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣವನ್ನು ಹೆಬ್ರಿ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಅನ್ಯಜಿಲ್ಲೆಗಳಲ್ಲೂ ಕಳವು
ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಹರಿಹರಪುರ, ಹೊನ್ನಾವರ, ಗದಗ್‌, ಸವದತ್ತಿ, ರೋಣ, ನರಗಲ್‌ ಮೊದಲಾದ ಕಡೆಗಳಲ್ಲಿ ಕಳವು ಮಾಡಿರುವುದು ತನಿಖೆಯಿಂದ ಹೊರಬಿದ್ದಿದೆ. 

ಅರುಣ್‌ ಕುಮಾರ್‌ ವಿರುದ್ಧ ಮೈಸೂರು, ರಾಣೆಬೆನ್ನೂರು, ತೀರ್ಥಹಳ್ಳಿ, ಶಿರಸಿ ಮತ್ತು ಮಂಡ್ಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ಗಳು ದಾಖಲಾಗಿವೆ. 

Advertisement

ಅಲ್ಲಿನ  ನ್ಯಾಯಾಲಯಕ್ಕೆ ಹಾಜರಾಗದೇ ಬಂಧನ ವಾರಂಟ್‌ ಕೂಡ ಜಾರಿಯಾಗಿತ್ತು. ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರ ನಿರ್ದೇಶದಂತೆ ಡಿವೈಎಸ್‌ಪಿ ಎಸ್‌.ಜೆ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್‌ ಸಂಪತ್‌ಕುಮಾರ್‌ ಎ. ಅವರ ನೇತೃತ್ವದಲ್ಲಿ  ಡಿಸಿಐಬಿ ತಂvಠಿ ಕಾರ್ಯಾಚರಣೆ ನಡೆಸಿದೆ.

ಡಿಸಿಐಬಿ ತಂಡದಲ್ಲಿ ಎಎಸ್‌ಐ ರೊಸಾರಿಯಾ ಡಿ’ಸೋಜಾ, ರವಿಚಂದ್ರ, ಸಿಬಂದಿ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ್‌ ಕುಂದರ್‌, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್‌ಕುಮಾರ್‌, ದಯಾನಂದ ಪ್ರಭು, ಶಿವಾನಂದ, ಚಾಲಕ ರಾಘವೇಂದ್ರ ಅವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next