Advertisement
ಹಸೀನಾ ಪಲಾಯನದ ಬೆನ್ನಲ್ಲೇ ಮಧ್ಯಂತರ ಸರ್ಕಾರ ರಚನೆಯ ಕುರಿತು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಸಂಘಟನೆಗಳು ಮೊಹಮ್ಮದ್ ಯೂನುಸ್‌ಗೆ ದೇಶದ ಚುಕ್ಕಾಣಿ ನೀಡುವಂತೆ ಪಟ್ಟು ಹಿಡಿದಿದ್ದವು. ಅದರಂತೆ ಯೂನುಸ್‌ರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಶಹಬುದ್ದೀನ್ ನೇಮಿಸಿದ್ದಾರೆ. ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಪ್ಯಾರಿಸ್‌ಗೆ ತೆರಳಿದ್ದ ಯೂನುಸ್ ಈ ಜವಾಬ್ದಾರಿ ಹೊರಲು ಸಿದ್ಧರಾಗಿದ್ದು, ಬಾಂಗ್ಲಾದೇಶಕ್ಕೆ ಹಿಂದಿರುಗುತ್ತಿದ್ದಾರೆ. ಯೂನುಸ್ ಅವರಿಗೆ ಅಧಿಕಾರ ನೀಡುತ್ತಿರುವುದರ ಬಗ್ಗೆ ಬಾಂಗ್ಲಾ ಸೇನೆಯೂ ಸಹಮತ ವ್ಯಕ್ತಪಡಿಸಿದೆ.
ದೇಶವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಮಧ್ಯಂತರ ಸರ್ಕಾರ ರಚನೆಯಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಾಳ್ಮೆಯನ್ನು ವಹಿಸಬೇಕು ಎಂದು ಮೊಹಮ್ಮದ್ ಯೂನುಸ್ ಅವರು ಮನವಿ ಮಾಡಿದ್ದಾರೆ. 205 ಮಂದಿ ಕರೆ ತಂದ ಏರಿಂಡಿಯಾ ವಿಮಾನ
ಢಾಕಾದಲ್ಲಿ ತೊಂದರೆಗೆ ಒಳಗಾಗಿದ್ದ 205 ಮಂದಿಯನ್ನು ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ. ಭಾರತಕ್ಕೆ ಬಂದವರ ಪೈಕಿ 6 ಕೂಸುಗಳು ಮತ್ತು 199 ಪ್ರಯಾಣಿಕರು ಇದ್ದಾರೆ.
Related Articles
Advertisement