Advertisement

ಕೇಂದ್ರ ಬಜೆಟ್ 2019: ಕಾಮಧೇನು ಆಯೋಗ; ಕೇಂದ್ರದಿಂದ ಬಂಪರ್ ಕೊಡುಗೆ

06:27 AM Feb 01, 2019 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಎನ್ ಡಿಎ ಸರಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಶುಕ್ರವಾರ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಂಡಿಸಿದ್ದು, ನಿರೀಕ್ಷೆಯಂತೆಯೇ ರೈತರು, ಕಾರ್ಮಿಕ ವಲಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭರಪೂರ ಭರ್ಜರಿ ಘೋಷಣೆ ಮಾಡಲಾಗಿದೆ.

Advertisement

ರೈತರಿಗೆ ಬಂಪರ್ ಕೊಡುಗೆ:

ಸಣ್ಣ ಹಿಡುವಳಿದಾರರಿಗೆ ಪ್ರತಿವರ್ಷ ಆರು ಸಾವಿರ ರೂಪಾಯಿ ನೇರ ನಗದು ಹಣ ಖಾತೆಗೆ ಹಾಕಲಾಗುವುದು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಅಕೌಂಟ್ ಗೆ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿ.

ಮೀನುಗಾರಿಕೆಗೆ ಪ್ರತ್ಯೇಕ ನಿಗಮ ಸ್ಥಾಪನೆ:

ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿರುವ ಕೇಂದ್ರ ಸರ್ಕಾರ ಮೀನುಗಾರರು ಮತ್ತು ಪಶುಸಂಗೋಪನಾ ಕ್ಷೇತ್ರದವರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ ನೀಡುವುದಾಗಿ ಹೇಳಿದೆ.

Advertisement

ಗೋ ಸಂರಕ್ಷಣೆಗಾಗಿ ಕಾಮಧೇನು ಆಯೋಗ:

ದೇಶದಲ್ಲಿ ಗೋಸಂರಕ್ಷಣೆಗಾಗಿ ಕಾಮಧೇನು ಆಯೋಗ ರಚಿಸುವುದಾಗಿ ಕೇಂದ್ರ ಘೋಷಿಸಿದೆ.

ಕಾರ್ಮಿಕರಿಗೆ ಬಂಪರ್ ಕೊಡುಗೆ:

ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.

ಇಎಸ್ ಐ ಆದಾಯ ಮಿತಿ ಏರಿಕೆ:

ಇಎಸ್ ಐ ಆದಾಯ ಮಿತಿ ಏರಿಕೆ ಮಾಡಿದ್ದು, 15 ಸಾವಿರ ರೂಪಾಯಿಯಿಂದ 21 ಸಾವಿರಕ್ಕೆ ಮಿತಿ ಏರಿಕೆ ಮಾಡಲಾಗಿದೆ.

ಅಲೆಮಾರಿ ನಿಗಮ ಸ್ಥಾಪನೆ:

ದೇಶದಲ್ಲಿ ಅಲೆಮಾರಿ ಸಮುದಾಯಕ್ಕೆ ಹೊಸ ನಿಗಮ ಸ್ಥಾಪನೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿಗೆ ನಿರ್ಧಾರ. ಒಂದು ಕೋಟಿ ಯುವಕರಿಗೆ ತರಬೇತಿ ನೀಡಲು ಹೊಸ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next