Advertisement
ಎರಡನೇ ಅತೀದೊಡ್ಡ ಸರ್ಚ್ ಇಂಜಿನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯೂ-ಟ್ಯೂಬ್ ಗೆ ಇದೀಗ 14ರ ಹರೆಯ. 2005ರಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನದಂದೇ ಪೇ ಪಾಲ್ ಸಂಸ್ಥೆಯ ಮಾಜೀ ಉದ್ಯೋಗಿಗಳು ವಿಡಿಯೋ ಪ್ರಸಾರಕ್ಕಾಗಿ ವೆಬ್ ಸೈಟ್ ಒಂದನ್ನು ಪ್ರಾರಂಭಿಸುತ್ತಾರೆ ಮುಂಬರುವ ದಿನಗಳಲ್ಲಿ ಅದೇ ವೆಬ್ ಸೈಟ್ ‘ಯೂ-ಟ್ಯೂಬ್’ ಅನ್ನುವ ಹೆಸರಿನಿಂದ ಜನಮಾನಸದಲ್ಲಿ ಮಾನ್ಯತೆಯನ್ನು ಪಡೆದುಕೊಳ್ಳುವ ಕಥೆಯೇ ಒಂದು ರೋಚಕ ಪಯಣ.
2008ರಲ್ಲಿ ಹೀಗಿದ್ದರು ಜಾವೇದ್.
Related Articles
Advertisement
ಯೂ-ಟ್ಯೂಬ್ ನ ಮಾಸ್ಟರ್ ಮೈಂಡ್ ಇವರು. ಇದರಲ್ಲಿ ಟ್ಯಾಗಿಂಗ್ ಮತ್ತು ವಿಡಿಯೋ ಶೇರ್ ಮಾಡುವ ಆಯ್ಕೆಗಳನ್ನು ಅಳವಡಿಸುವಲ್ಲಿ ಹರ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಯೂ ಟ್ಯೂಬ್ ನ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯಲ್ಲಿ ಇವರ ಪಾತ್ರ ನಿರ್ಣಾಯಕವಾಗಿದ್ದ ಕಾರಣದಿಂದ ಯೂ ಟ್ಯೂಬ್ ಅನ್ನು ಗೂಗಲ್ ಪಡೆದುಕೊಂಡ ಸಂದರ್ಭದಲ್ಲಿ ಹರ್ಲಿ ಅವರಿಗೆ ಹೆಚ್ಚಿನ ಪ್ರಮಾಣದ ಪಾಲನ್ನು ಪಡೆದುಕೊಂಡರು. ಇವರು ಯೂ-ಟ್ಯೂಬ್ ನ ಮೊದಲ ಸಿ.ಇ.ಒ. ಸಹ ಹೌದು. 2010ರವರೆಗೂ ಇವರು ಯೂ ಟ್ಯೂಬ್ ನ ಸಿ.ಇ.ಒ. ಆಗಿದ್ದರು ಬಳಿಕ ‘ಮಿಕ್ಸ್ ಬಿಟ್’ ಎಂಬ ಇನ್ನೊಂದು ವಿಡಿಯೋ ಶೇರಿಂಗ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮಿಕ್ಸ್ ಬಿಟ್ ಇವತ್ತು ‘ಝೀನ್’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಹಾಗೂ ಇದನ್ನು 2018ರಲ್ಲಿ ಬ್ಲೂ ಜೀನ್ಸ್ ಕಂಪೆನಿಯು ಖರಿದಿ ಮಾಡಿತ್ತು. ಇವತ್ತು ಚಾಡ್ ಹರ್ಲಿ ಅಮೆರಿಕಾದ ಮಾಧ್ಯಮ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ಧಾರೆ. 2006ರಲ್ಲಿ ಇವರು ‘ಬ್ಯುಸಿನೆಸ್’ ನಿಯತಕಾಲಿಕೆಯ ’50 ಪೀಪಲ್ ಹೂ ಮ್ಯಾಟರ್’ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಪುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳಲ್ಲಿ ಇವರಿಗೆ ವಿಶೇಷವಾದ ಆಸಕ್ತಿಯ ಕಾರಣದಿಂದ ಹರ್ಲಿ ಅವರು ‘ಮೇಜರ್ ಸಾಕರ್ ಲೀಗ್ ಫುಟ್ಬಾಲ್ ಕ್ಲಬ್, ಗೋಲ್ಡನ್ ಸ್ಟೇಟ್ ವಾರಿಯರ್ಸ್ ಎಂಬ NBAಯ ಬಾಸ್ಕೆಟ್ ಬಾಲ್ ತಂಡಗಳ ಮಾಲಕರೂ ಆಗಿದ್ದಾರೆ. ಸ್ಟೀವ್ ಚೆನ್
ತೈಪೆ ಮೂಲದ ಅಮೆರಿಕಾದ ಉದ್ಯಮಿಯಾಗಿರುವ ಸ್ಟಿವ್ ಚೆನ್ ಅವರೂ ಸಹ ಯೂ-ಟ್ಯೂಬ್ ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಫೇಸ್ಬುಕ್ ನ ಉದ್ಯೋಗಿಯಾಗಿದ್ದ ಚೆನ್ ಅವರು ಬಳಿಕ ತಮ್ಮ ಉದ್ಯೋಗವನ್ನು ತೊರೆದು ಉಳಿದ ಇಬ್ಬರೊಂದಿಗೆ ಸೇರಿಕೊಂಡು ಯೂ-ಟ್ಯೂಬ್ ಅನ್ನು ಸ್ಥಾಪಿಸಿದರು. ಯೂ ಟ್ಯೂಬ್ ಸ್ಥಾಪನೆಗೊಂಡ ಒಂದೇ ವರ್ಷದಲ್ಲಿ ಅದನ್ನು ಗೂಗಲ್ ಗೆ ಪರಭಾರೆ ಮಾಡಿದ ಈ ಸ್ಥಾಪಕರಲ್ಲಿ ಜಾವೇದ್ ಕರೀಂ ಇವರಿಬ್ಬರಿಂದ ಬೇರೆಯಾಗಿ ತನ್ನದೇ ಹಾದಿ ಹಿಡಿದರು. ಇತ್ತ ಚಾಡ್ ಹರ್ಲಿ ಮತ್ತು ಸ್ಟೀವ್ ಚೆನ್ ಜೊತೆಯಾಗಿ AVOS ಸಿಸ್ಟಮ್ಸ್ ಅನ್ನು ಸ್ಥಾಪಿಸಿದರು ಅದನ್ನು ಬಳಿಕ ಯಾಹೂ ಒಡೆತನದ ಡೆಲಿಷಿಯಸ್ ಖರೀದಿ ಮಾಡಿತು. ಬಳಿಕ ಹರ್ಲಿಯಿಂದ ಬೇರೆಯಾದ ಸ್ಟೀವ್ 2014ರಲ್ಲಿ ಗೂಗಲ್ ವೆನ್ಚರ್ಸ್ ನ ಪಾಲುದಾರರಾದರು ಮತ್ತೀಗ ಅವರು ಅದರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಸ್ಟೀವ್ ಅವರು 2016ರಲ್ಲಿ ಆಹಾರ ಪ್ರಿಯರಿಗಾಗಿ ‘ನೋಮ್’ ಎಂಬ ವೆಬ್ ಸೈಟ್ ಅನ್ನು ಸ್ಥಾಪಿಸಿದರು. ಆದರೆ ಸ್ಟೌವ್ ಅವರ ಈ ಪ್ರಯತ್ನ ಅವರಿಗೆ ಯಶ ತರದ ಕಾರಣ 2017ರಲ್ಲಿ ಅದನ್ನು ಅವರು ನಿಲ್ಲಿಸಬೇಕಾಯಿತು. ಸ್ಟೀವ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿಲ್ಲದಿದ್ದರೂ ತಮ್ಮ ಫೇಸ್ಬುಕ್ ಪುಟವನ್ನು ಆಗಾಗ ಮಾಹಿತಿಪೂರ್ಣವಾಗಿ ಅಪ್ಡೇಟ್ ಮಾಡುತ್ತಿರುತ್ತಾರೆ. 2006ರಲ್ಲಿ ಈ ತ್ರಿವಳಿಗಳು ತಾವು ಪ್ರಾರಂಭಿಸಿದ ಸ್ಟ್ರೀಮಿಂಗ್ ಸೈಟ್ ಅನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ ಗೆ 1.16 ಲಕ್ಷ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಈ ರೀತಿಯಾಗಿ ಇವತ್ತು ನೆಟ್ ಜಗತ್ತಿನಲ್ಲಿ ನೆಟ್ಟಿಗರ ಫೆವರಿಟ್ ವಿಡಿಯೋ ಸ್ಟ್ರೀಮಿಂಗ್ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯೂ ಟ್ಯೂಬ್ ಅನ್ನು ಪ್ರಾರಂಭಿಸಿದ ಈ ಮೂವರು ಬಳಿಕ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡ ಕಥೆ ‘ಸ್ಟಾರ್ಟ್ ಅಪ್’ ಕಲ್ಪನೆಗೆ ಉತ್ತಮ ಪ್ರೇರಣೆ ಎಂದರೆ ತಪ್ಪಾಗಲಾರದು.