ಮಂಗಳೂರು: ವಿದ್ಯಾರ್ಥಿ ದೆಸೆಯಲ್ಲೇ ಸಂಶೋಧನ ಅಸಕ್ತಿ ಬೆಳೆಸಿಕೊಂಡಾಗ ಶೈಕ್ಷಣಿಕ ಮತ್ತು ಕಾರ್ಯಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಚ್. ವಿನೋದ್ ಭಟ್ ಹೇಳಿದರು.
ಮಣಿಪಾಲ ದಂತ ವೈದ್ಯಕೀಯ ಕಾಲೇಜು ಮಂಗಳೂರು ಇದರ ಮಣಿಪಾಲ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಶೋಧನ ವೇದಿಕೆ ವತಿಯಿಂದ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನೆàಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಂಶೋಧನ ವಿದ್ಯಾರ್ಥಿ ಸಮಾವೇಶ (ಸ್ಟೊಡೆಂಟ್ ಕಾನೆ#ರೆನ್ಸ್ ಆಫ್ ರಿಸರ್ಚ್ ಇನ್ ಎಜುಕೇಶನ್) ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಸಂಶೋಧನೆ ವಿಸ್ತೃತ ವ್ಯಾಪ್ತಿ ಮತ್ತು ಆಯಾಮ ಹೊಂದಿರುತ್ತವೆ. ಶೈಕ್ಷಣಿಕ ಮತ್ತು ವಾಣಿಜ್ಯವಾಗಿ ಮಹತ್ವ ಪಡೆದಿರುತ್ತವೆ. ಪ್ರಮುಖವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳು ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಿಗೆ ಕಾರಣವಾಗಿವೆ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳು ಇಂದು ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆ ತಂದಿದೆ. ಇಂದು ಇಲ್ಲಿ ಆಯೋಜಿಸಿರುವ ಶೈಕ್ಷಣಿಕ ಸಂಶೋಧನ ವಿದ್ಯಾರ್ಥಿ ಸಮಾವೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆಗೆ ಪ್ರೇರೇಪಿಸುವ, ಪ್ರೋತ್ಸಾಹಿಸು ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ, ಮಣಿಪಾಲ ವಿ.ವಿ. ಸಹ ಉಪಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನ ಹವ್ಯಾಸ ಬೆಳೆಸಿಕೊಳ್ಳಬೇಕು. ಸಮಯ ಹಾಗೂ ಹಣ ಹೊಂದಿಸಿಕೊಳ್ಳುವ ಸಮಸ್ಯೆ ಇರುತ್ತದೆ. ಇದು ಸಂಶೋಧನೆಗೆ ಅಡ್ಡಿಯಾಗಬಾರದು. ಮಣಿಪಾಲ ವಿಶ್ವವಿದ್ಯಾನಿಲಯ ಸಂಶೋಧನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಬಹಳಷ್ಟು ನೆರವು ನೀಡುತ್ತಿದೆ ಎಂದರು.ಸಂಶೋಧನ ವಿಭಾಗದ ನಿರ್ದೇಶಕ ಡಾ| ಎನ್. ಉಡುಪ ಅತಿಥಿಯಾಗಿದ್ದರು.
ಮಣಿಪಾಲ ದಂತ ವೈದ್ಯಕೀಯ ಕಾಲೇಜು ಮಂಗಳೂರು ಡೀನ್ ಡಾ| ದಿಲೀಪ್ ಜಿ. ನಾೖಕ್ ಸ್ವಾಗತಿಸಿ, ಶೈಕ್ಷಣಿಕ ಸಂಶೋಧನ ವಿದ್ಯಾರ್ಥಿ ಸಮಾವೇಶದ ಮಹತ್ವ ವಿವರಿಸಿದರು. ಡಾ| ರವಿಕಿರಣ್ ವಂದಿಸಿದರು.
ಡಾ| ಸ್ವಾತಿ ಪ್ರಹ್ಲಾದ್, ಡಾ| ಜೊನ್ನಾ ಬ್ಯಾಪ್ಟಿಸ್ಟ್ , ಸಂಚಿತಾ ಸಂದರ್, ಡಾ| ಹುಸೈನ್ ಲೋಖಂಡ್‌ವಾಲ, ಡಾ| ಸನಾ ಚಾವ್ಲಾ, ದುರ್ಗಾ ಸಂಜನಾ ಮೊದಲಾದವರು ಉಪಸ್ಥಿತರಿದ್ದರು, ಡಾ| ಜೋತ್ಸಾ ಅರುಣ್ ನಿರೂಪಿಸಿದರು.