Advertisement

ಬಡ್ಡಿ ದರ: ಆರ್‌ಬಿಐ ಸಮಿತಿಯಲ್ಲೇ ಭಿನ್ನಾಭಿಪ್ರಾಯ

07:10 AM Oct 21, 2017 | Team Udayavani |

ನವದೆಹಲಿ: ಕುಸಿದಿರುವ ಆರ್ಥಿಕತೆಯನ್ನು ಹಳಿಗೆ ತರಲು ಉತ್ತೇಜನಾ ಕ್ರಮಗಳನ್ನು ಘೋಷಿಸಬೇಕೇ, ಬೇಡವೇ ಎಂಬ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ಹಣಕಾಸು ನೀತಿ ನಿರೂಪಕರ ಸಮಿತಿಯಲ್ಲೇ ಭಿನ್ನಾಭಿಪ್ರಾಯ ಮೂಡಿತ್ತು.

Advertisement

ಇದೇ ತಿಂಗಳ 3 ಮತ್ತು 4 ರಂದು ನಡೆದ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿನ ಸಂಕ್ಷಿಪ್ತ ವರದಿಯಿಂದ ಈ ವಿಚಾರ ಬಹಿರಂಗವಾಗಿದೆ. ಹಣಕಾಸು ನೀತಿ ಪರಾಮರ್ಶೆ ಸಮಿತಿಯಲ್ಲಿರುವ 6 ಸದಸ್ಯರ ಪೈಕಿ ಐವರು ಪ್ರಸಕ್ತ ತಿಂಗಳು ಸಾಲದ ಮೇಲಿನ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿಡಲು ಒಲವು ತೋರಿಸಿದರೆ, ಒಬ್ಬ ಸದಸ್ಯನಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇನ್ನೊಂದೆಡೆ, ಆಗಸ್ಟ್‌ನಲ್ಲಿ ಬಡ್ಡಿ ದರವನ್ನು ಶೇ.0.25ರಷ್ಟು ಇಳಿಕೆ ಮಾಡಿದ್ದು ಬಹಳ ಕಡಿಮೆಯಾಯಿತು ಹಾಗೂ ವಿಳಂಬವಾಯಿತು ಎಂದು ಮತ್ತೂಬ್ಬ ಸದಸ್ಯ ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next