ಅಂಕೋಲಾ: ಬಡ್ಡಿ ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ.
ಅಶೋಕ ಗೊಂಗಾ ಗಾಂವಕರ (44) ಮೃತಪಟ್ಟ ವ್ಯಕ್ತಿ,
ಲಕ್ಷ್ಮೇಶ್ವರದ ರಾಜು ನಾಯಕ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ರಾಜು ನಾಯಕ ಮರಣದ ನಂತರ ಈತನ ಪತ್ನಿ ಮಂಜುಳಾ ರಾಮ ನಾಯಕ ಮತ್ತು ನಾಗರಾಜ ಅಂಕೋಲೆಕರ ಇವರು ಸಾಲ ವಸೂಲಾತಿಗಾಗಿ ಪೀಡಿಸುತ್ತಿದ್ದರು.
ಶುಕ್ರವಾರ ಸಂಜೆಯೂ ಮೃತನ ಮನೆಗೆ ಬಂದು ಬಡ್ಡಿ ಹಣವನ್ನು ಕೊಡದಿದ್ದರೆ ಅಂಕೋಲಾದಲ್ಲಿ ಓಡಾಡಲು ಬಿಡಿವದಿಲ್ಲ ಎಂಬಿತ್ಯಾದಿಯಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಅಶೋಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮೃತ ಅಶೋಕನ ಪತ್ನಿ ಉಷಾ ಅಶೋಕ ಗಾಂವಕರ ದೂರು ನೀಡಿದ್ದಾರೆ. ಪಿ.ಎಸ್.ಐ ಪ್ರೇಮನಗೌಡ ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.