Advertisement

ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ :ಕೇಂದ್ರ ಸರಕಾರದ ಯೋಜನೆಗೆ ರಾಜ್ಯದಲ್ಲಿ ವೇಗ

12:09 AM Nov 04, 2020 | sudhir |

ಬೆಂಗಳೂರು: ಕೋವಿಡ್‌-19 ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಶಕ್ತೀಕರಣಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ “ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆ’ ರಾಜ್ಯದಲ್ಲಿ ವೇಗ ಪಡೆದುಕೊಳ್ಳುತ್ತಿದೆ.

Advertisement

ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಅರ್ಹರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.

ಖುದ್ದು ಪ್ರಧಾನಮಂತ್ರಿ ಸಚಿವಾಲಯ ಇತ್ತೀಚೆಗೆ ಎಲ್ಲ ರಾಜ್ಯಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಯೋಜನೆಯ ಪ್ರಗತಿ ಪರಿಶೀ ಲನೆ ನಡೆಸಿದೆ. ಅದಕ್ಕೆ ಪೂರಕವಾಗಿ ಕಳೆದ ವಾರ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಕೂಡ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದು, ಸ್ವೀಕೃತಗೊಂಡಿರುವ ಅರ್ಜಿಗಳಲ್ಲಿ ಶೇ.50ರಷ್ಟನ್ನು ನ.15ರೊಳಗೆ ವಿಲೇವಾರಿ ಮಾಡ ಬೇಕು ಎಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ “ಪ್ರಧಾನಮಂತ್ರಿ ಬೀದಿ ವ್ಯಾಪಾರಿ ಗಳ ಆತ್ಮ ನಿರ್ಭರ ನಿಧಿ’ (ಪಿಎಂ ಎಸ್‌ವಿಎ ನಿಧಿ) ಹೆಸರಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರು ಸಾಲ ಯೋಜನೆ ಜಾರಿಗೆ ತಂದಿದೆ. 10 ಸಾ.ರೂ. ಸಾಲ ನೀಡಲಾಗುವುದು ಹಾಗೂ ಅದನ್ನು 12 ಮಾಸಿಕ ಕಂತುಗಳಲ್ಲಿ  ಬಡ್ಡಿರಹಿತವಾಗಿ ಮರುಪಾವತಿಸಬೇಕಾಗಿದೆ.

ಗುರಿ ಮಿತಿ ಹೆಚ್ಚಳ
ರಾಷ್ಟ್ರ ಮಟ್ಟದಲ್ಲಿ 50 ಲಕ್ಷ ಮಂದಿಗೆ ಯೋಜನೆಯನ್ನು ತಲುಪಿಸುವ ಗುರಿ ಹೊಂದಲಾ ಗಿದೆ. ಅದರಂತೆ ರಾಜ್ಯದಲ್ಲಿ ಅಂದಾಜು 1.20 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆಯನ್ನು ವಿಸ್ತರಿಸುವ ಗುರಿ ಇದ್ದು, ಇತ್ತೀಚೆಗಿನ ವರದಿಯಂತೆ ಒಟ್ಟು ನಗರ ಜನಸಂಖ್ಯೆಯ ಶೇ.1ರಂತೆ 2.43 ಲಕ್ಷ ಹೊಸದಾಗಿ ಗುರಿ ನಿಗದಿಪಡಿಸಲಾಗಿದೆ.

Advertisement

ದ.ಕ. ದಲ್ಲಿ 313 ಅರ್ಜಿ
“ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆಯಲು ದ.ಕ.ದಲ್ಲಿ 313 ಮಂದಿ ಬೀದಿಬದಿ ವ್ಯಾಪಾರಿಗಳು ಅರ್ಜಿ ಸಲ್ಲಿ ಸಿದ್ದು, ಈ ಪೈಕಿ 207 ಮಂದಿಗೆ ತಲಾ 10 ಸಾ. ರೂ. ಸಾಲ ಮಂಜೂರಾಗಿದೆ. ಜಿಲ್ಲೆಯಲ್ಲಿ 1,200 ಮಂದಿ ವ್ಯಾಪಾರಿಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ.

ಉಡುಪಿಯಲ್ಲಿ 109 ಅರ್ಜಿ
ಉಡುಪಿ ಜಿಲ್ಲೆಯಲ್ಲಿ 109 ಮಂದಿ ಅರ್ಜಿ ಸಲ್ಲಿಸಿದ್ದು, 32 ಮಂದಿಗೆ ಸಾಲ ಮಂಜೂರಾಗಿದೆ. 60 ಮಂದಿಯ ಅರ್ಜಿ ಪರಿಶೀಲನೆ ಹಂತದಲ್ಲಿದ್ದು, ಇನ್ನುಳಿದವರ ಅರ್ಜಿಗಳಿಗೆ ದಾಖಲಾತಿ ಬರಲಿಕ್ಕಿದೆ
ಎಂದು ಉಡುಪಿ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ರುದ್ರೇಶ್‌ ತಿಳಿಸಿದ್ದಾರೆ.

ಯೋಜನೆ ಪ್ರಗತಿ
– ಗುರುತಿಸಿದ ವ್ಯಾಪಾರಿಗಳು: 1,18,965
– ಪಿಎಂ ಎಸ್‌ವಿಎ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಿದ್ದು: 95,291
– ಅರ್ಜಿ ಸ್ವೀಕರಿಸಿದ್ದು: 63,810
– ಬ್ಯಾಂಕುಗಳಲ್ಲಿ ಉಳಿದ ಅರ್ಜಿ: 34,969
– ಸಾಲ ಮಂಜೂರು: 19,887
– ಹಣ ಬಿಡುಗಡೆ: 5,489 ಮಂದಿಗೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯವಾಗಿ ರುತ್ತದೆ. ಅರ್ಜಿದಾರರು ನೋಂದಣಿಯಾದ ಬಳಿಕ ಸರ್ವೆ ರಿಜಿಸ್ಟರ್‌ ನಂಬರ್‌ ನೀಡ ಲಾಗುತ್ತದೆ. ಬಳಿಕ ಬ್ಯಾಂಕ್‌ ಮುಖಾಂತರ ಅರ್ಹ ಫ‌ಲಾನುಭವಿಗಳಿಗೆ ಸಾಲ ನೀಡ ಲಾಗುತ್ತದೆ. ಬೇರೆ ಬ್ಯಾಂಕುಗಳ ಸುಸ್ತಿದಾರ ರನ್ನು ಪರಿಗಣಿಸಲಾಗುವುದಿಲ್ಲ. ಬೀದಿ ಬದಿ ವ್ಯಾಪಾರ ನಡೆಸಲು ಖಾಯಂ ಆಗಿ ಗುರು ತಿಸಲ್ಪಟ್ಟ ಸ್ಥಳದಲ್ಲಿ ವಹಿವಾಟು ನಡೆಸು ತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.

ಅರ್ಹತಾ ಮಾನದಂಡಗಳು
2020ರ ಮಾ.24ರೊಳಗೆ ನಗರ ಪ್ರದೇಶದಲ್ಲಿ ಬೀದಿ ವ್ಯಾಪಾರ ಮಾಡು ತ್ತಿರುವ 65 ವರ್ಷದೊಳಗಿನವರು ಈ ಯೋಜನೆಗೆ ಅರ್ಹರು. ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿ ಇಲ್ಲದವರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಶಿಫಾರಸು ಪತ್ರ ನೀಡಲಾಗುತ್ತದೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next