Advertisement

ಡಿಸಿಸಿ ಬ್ಯಾಂಕ್‌ನಿಂದ ಬಡವರಿಗೆ ಬಡ್ಡಿ ರಹಿತ ಸಾಲ: ಶಾಸಕಿ

05:13 PM Nov 08, 2020 | Suhan S |

ಬೇತಮಂಗಲ: ಕೋವಿಡ್ ಸೋಂಕಿನಿಂದ ಪ್ರತಿಯೊಬ್ಬ ಬಡವನಿಗೂ ಆರ್ಥಿಕವಾಗಿ ಸಂಕಷ್ಟ ಎದುರಾಗಿದ್ದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಡಿಸಿಸಿ ಬ್ಯಾಂಕ್‌ ಬಡ್ಡಿ ರಹಿತ ‌ ಸಾಲ ನೀಡುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

Advertisement

ಪ‌ಟ್ಟಣ ‌ ಬಳಿಯ ವೆಂಗಸಂದ್ರ, ಅನ್ನಸಾಗ‌ರ, ವೆಂಕ‌ಟಾಪುರ, ಪಂತನಹಳ್ಳಿ, ಜೀಡಮಾಕನಹಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ಪ್ರತಿಯೊಬ್ಬ ಮಹಿಳೆ ಮತ್ತು ರೈತರಿಗೆ ರೈತರಿಗೆ ನೆರವಾಗುತ್ತಿದೆ. ಶೀಘ್ರದಲ್ಲೇ ವಾರಕ್ಕೊಂದು ಸಭೆ ನಡೆಸಿ ಯಾವ ಹಂತದಲ್ಲಿ ಸಾಲ ವಿತರಣೆ ಮಾಡಬೇಕೆಂಬುದನ್ನು ಚ‌ರ್ಚಿಸಿ ಮತ್ತಷ್ಟು ಶಕ್ತಿ ತುಂಬುತ್ತೇನೆ ಎಂದರು.

ಈಗಾಗಲೇ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಬಡ್ಡಿ ರಹಿತ ‌ ಸಾಲ ನೀಡಿ ಆರ್ಥಿಕವಾಗಿ ಬಲರನ್ನಾಗಿಸಿದ್ದೇವೆ. ಅದೇ ರೀತಿಯಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬ್ಯಾಂಕ್‌ ಮಹಿಳೆಯರ ಶ‌ಕ್ತಿಯಾಗಿದ್ದು, ಉಳಿಸಿ ಬೆಳೆಸಬೇಕೆಂದು ಕರೆ ನೀಡಿದ್ದು.ಗ್ರಾಮಸ್ಥರಿಂದ ‌ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ವಿದ್ಯುತ್‌ ದ್ವೀಪಗಳ ‌ ನಿರ್ವಹಣೆ ಸೇರಿದಂತೆ ಹಲವು ಸೌಕರ್ಯಗಳ ‌ ಬಗ್ಗೆ ಸಾರ್ವಜನಿಕರಿಂದ ‌ ಮನವಿ ಬಂದವು. ಶಾಸಕರು ತ‌ಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ನೀಗಿಸಲು ಸೂಚಿಸಿದರು.

ವೃದ್ಧಾಪ್ಯ ಮತ್ತು ವಿಧವಾ ವೇತನ ಸ‌ಮರ್ಪಕ ‌ವಾಗಿ ಬರುತ್ತಿಲ್ಲವೆಂಬ ದೂರುಗಳು ಕೇಳಿ ಬಂದ‌ವು. ಈ ಬಗ್ಗೆ ಸರ್ಕಾರದ ಗಮನ ‌ ಸೆಳೆಯುವ‌ ಬಗ್ಗೆ ಭರವಸೆ ನೀಡಿದರು.

Advertisement

ಅಂಗವಿಕಲನ ಮನವಿ: 2 ಕಾಲುಗಳಿಲ್ಲ ಮದ್ಯ ವ‌ಯಸ್ಸಿನ ಯುವಕನೊಬ್ಬ ದ್ವಿಚಕ್ರ ವಾಹನವನ್ನು ತಮ್ಮ ಅನುದಾನದಲ್ಲಿ ನೀಡುವಂತೆ ಶಾಸಕಿಗೆ ಮನವಿ ಮಾಡಿದ್ದು,2 ತಿಂಗಳಿನೊಳಗೆ ಕೊಡಿಸುವ ‌ ಭರವಸೆ ಕೊಟ್ಟರು.

ಜಿಪಂ ಮಾಜಿ ಸದಸ್ಯ ವಿಜಯ್‌ ಶಂಕರ್‌, ಬೇತಮಂಗಲ ಸೊಸೈಟಿ ಅಧ್ಯಕ್ಷ ಶಂಕ ‌ರ್‌, ಮಾಜಿ ಅಧ್ಯಕ್ಷ  ‌ಪ್ರಸನ್ನ, ನಿರ್ದೇಶಕ ಸುರೇಂದ್ರ ಗೌಡ, ಒಬಿಸಿ ಮುನಿಸ್ವಾಮಿ, ವೆಂಗಸಂದ್ರ ಮಂಜುನಾಥ್‌, ಚ‌ಲಪತಿ, ಮುಖಂಡರಾದ ಶ್ರೀಧರ ರೆಡ್ಡಿ, ಕೃಷ್ಣಮೂರ್ತಿ, ಬುಜ್ಜಿ ಪ್ರಸನ್ನನಾಯ್ಡು, ಗೋಪೇನಹಳ್ಳಿ ಮುರಳಿ ಹಾಗೂ ಅನೇಕ ಮುಖಂಡರು ಉ‌ಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next