Advertisement

ಭವಿಷ್ಯ ನಿಧಿ ಖಾತೆದಾರರಿಗೆ ಸಿಹಿ ಸುದ್ದಿ :5 ಲಕ್ಷ ರೂ.ವರೆಗಿನ ಬಡ್ಡಿ ಆದಾಯ ಟ್ಯಾಕ್ಸ್‌ ಫ್ರೀ

10:11 PM Mar 23, 2021 | Team Udayavani |

ನವದೆಹಲಿ: ಉದ್ಯೋಗಿಯ ಭವಿಷ್ಯ ನಿಧಿಯ ದೇಣಿಗೆಗೆ ಅನುಸಾರವಾಗಿ ಆತ ವಾರ್ಷಿಕವಾಗಿ ಪಡೆಯುವ 5 ಲಕ್ಷ ರೂ.ವರೆಗಿನ ಬಡ್ಡಿಯ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಮಂಗಳವಾರ ನಡೆದ, “2021ರ ಹಣಕಾಸು ಮಸೂದೆ’ ಮೇಲಿನ ಚರ್ಚೆಯ ವೇಳೆ ಉತ್ತರಿಸಿದ ಅವರು, “”ಫೆ. 1ರಂದು ಮಂಡಿಸಲಾಗಿದ್ದ ಬಜೆಟ್‌ನಲ್ಲಿ 2.5 ಲಕ್ಷಕ್ಕೂ ಮೀರಿದ ಪಿಎಫ್ ಬಡ್ಡಿ ಆದಾಯದ ಮೇಲೆ ತೆರಿಗೆ ಹಾಕುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈಗ, ಆ ಮಿತಿಯನ್ನು ಈಗ 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ” ಎಂದು ವಿವರಿಸಿದರಲ್ಲದೆ, “”ಯಾವ ಉದ್ಯೋಗಿಗಳ ಭವಿಷ್ಯ ನಿಧಿಯ ಪಿಂಚಣಿ ಖಾತೆಗೆ ಉದ್ಯೋಗದಾತರಿಂದ ಯಾವುದೇ ದೇಣಿಗೆ ಇಲ್ಲದಿಲ್ಲವೋ ಅಂಥವರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಚರ್ಚೆಯ ನಂತರ, ಲೋಕಸಭೆಯು ಮಸೂದೆಗೆ ಧ್ವನಿಮತದ ಅಂಗೀಕಾರ ನೀಡಿದೆ.

15 ಲಕ್ಷ ಸೈಬರ್‌ ಅಪರಾಧ!
ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ 15.5 ಲಕ್ಷ ಸೈಬರ್‌ ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಕಿಶನ್‌ ರೆಡ್ಡಿ, ಲೋಕಸಭೆಗೆ ತಿಳಿಸಿದ್ದಾರೆ. 2019ರಲ್ಲಿ 3,94,499 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 11,58,208 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಜಯ

“ಭಗತ್‌, ರಾಜಗುರು ಹೆಸರಲ್ಲಿ ಯೋಜನೆ ಬರಲಿ’
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬಲಿದಾನಗೈದ ಭಗತ್‌ ಸಿಂಗ್‌, ಸುಖ್‌ದೇವ್‌ ಹಾಗೂ ರಾಜಗುರು ಅವರ ಹೆಸರಿನಲ್ಲಿ ಕೇಂದ್ರದಿಂದ ಯೋಜನೆಗಳು ಜಾರಿಗೊಳ್ಳಬೇಕು ಎಂದು ಕಾಂಗ್ರೆಸ್‌ ಸಂಸದ ರವಣೀತ್‌ ಸಿಂಗ್‌ ಬಿಟ್ಟೂ ಆಗ್ರಹಿಸಿದ್ದಾರೆ. ಹುತಾತ್ಮ ದಿನವಾದ ಮಾ. 23ರಂದೇ ಬಿಟ್ಟೂ ಈ ಪ್ರಸ್ತಾಪ ಮಾಡಿದ್ದು ವಿಶೇಷವಾಗಿತ್ತು. “”ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಸಂದಿದ್ದರೂ, ಭಗತ್‌ ಸಿಂಗ್‌, ರಾಜಗುರು ಹಾಗೂ ಸುಖ್‌ದೇವ್‌ ಹೆಸರಿನಲ್ಲಿ ಒಂದೇ ಒಂದು ಯೋಜನೆಯೂ ಇಲ್ಲ” ಎಂದು ವಿಷಾದಿಸಿದ್ದಾರೆ.

Advertisement

ದೆಹಲಿ ಕಾಯ್ದೆಗೆ ಖರ್ಗೆ ಆಕ್ಷೇಪ
ದೆಹಲಿ ಸರ್ಕಾರವನ್ನು ಕೇಂದ್ರ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ದ ಗವರ್ನಮೆಂಟ್‌ ಆಫ್ ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ ಆಫ್ ಡೆಲ್ಲಿ ಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದಿದೆ ಎಂದು ಕಾಂಗ್ರೆಸ್‌ ಸಂಸದ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಈ ವಿಧೇಯಕ ಅಪಾಯಕಾರಿಯಾಗಿದ್ದು ಅದರಿಂದ ಪ್ರಜಾಪ್ರಭುತ್ವದ ಮೂಲ ಉದ್ದೇಶಗಳೇ ನಾಶವಾಗುತ್ತವೆ ಎಂದಿದ್ದಾರೆ.

ಆ್ಯಸಿಡ್‌ ದಾಳಿಯ ಬೆದರಿಕೆ: ಸಂಸದೆ
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದರೆ ಮೇಲೆ ಆ್ಯಸಿಡ್‌ ದಾಳಿ ನಡೆಸುವುದಾಗಿ ಶಿವಸೇನೆಯ ಲೆಟರ್‌ಹೆಡ್‌ಗಳಲ್ಲಿ ಹಾಗೂ ದೂರವಾಣಿ ಕರೆಗಳ ಮೂಲಕ ತಮಗೆ ಬೆದರಿಕೆ ಬರುತ್ತಿರುವುದಾಗಿ ಮಹಾರಾಷ್ಟ್ರದ ಅಮರಾವತಿ ಸಂಸದೆ ನವನೀತ್‌ ಕೌರ್‌ ರಾಣಾ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಇತ್ತೀಚೆಗೆ, ಸಂಸತ್ತಿನ ಪಡಸಾಲೆಯಲ್ಲೇ ತಮ್ಮ ವಿರುದ್ಧ ನಿಂದಿಸಿರುವ ಶಿವಸೇನೆ ಸಂಸದ ಅರವಿಂದ್‌ ಸಾವಂತ್‌, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕಿಸುವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next