Advertisement

ಅಂತರ ಜಿಲ್ಲಾ ಬಸ್‌ ಪ್ರಯಾಣಿಕರ ಸಂಖ್ಯೆ ಇಳಿಮುಖ

07:37 AM May 23, 2020 | Suhan S |

ಹುಬ್ಬಳ್ಳಿ: ಶುಕ್ರವಾರ ಅಂತರ್‌ ಜಿಲ್ಲಾ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಗ್ರಾಮಾಂತರ ವಿಭಾಗದಿಂದ ಕಳೆದ ಮೂರು ದಿನಗಳಿಂತ ಕಡಿಮೆ ಸಂಖ್ಯೆಯಲ್ಲಿ ಬಸ್‌ ಸಂಚರಿಸಿವೆ. ಆದರೆ ಮಹಾನಗರ ವ್ಯಾಪ್ತಿಯಲ್ಲಿ ಜನರು ಬಸ್‌ ಸಂಚಾರದತ್ತ ಮುಖ ಮಾಡುತ್ತಿದ್ದಾರೆ.

Advertisement

ಬಸ್‌ ಆರಂಭವಾದಾಗಿನಿಂದ ನಿತ್ಯವೂ ಸಂಚರಿಸುವ ಬಸ್‌ಗಳಲ್ಲಿ ಸಂಖ್ಯೆ ಹೆಚ್ಚಳವಿತ್ತು. ಆದರೆ ಶುಕ್ರವಾರ ಪ್ರಯಾಣಿಕರಿಲ್ಲದ ಪರಿಣಾಮ ಕೇವಲ 71 ಬಸ್‌ಗಳು ಮಾತ್ರ ಸಂಚಾರ ಮಾಡಿವೆ. ಮೇ 19ರಿಂದ 21 ರವರೆಗೆ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಕಾರ್ಯಾಚರಣೆಗೊಂಡಿದ್ದು, ನಾಲ್ಕನೇ ದಿನ ಕೇವಲ 5 ಬಸ್‌ಗಳು ಮಾತ್ರ ತೆರಳಿವೆ. ಮೇ 21 ರಂದು ಬೆಂಗಳೂರು ಸೇರಿದಂತೆ ದೂರದ ಜಿಲ್ಲಾ ಕೇಂದ್ರಗಳಿಗೆ ತೆರಳಿದ್ದ ಬಸ್‌ಗಳ ಆಗಮನದಿಂದ ಸಾರಿಗೆ ಆದಾಯ ಕಳೆದ ಮೂರು ದಿನಗಳಿಗಿಂತ ಹೆಚ್ಚಾಗಿದ್ದು, 5.94ಲಕ್ಷ ರೂ. ಸಾರಿಗೆ ಆದಾಯ ಬಂದಿದೆ.

ನಾಲ್ಕನೇ ದಿನ ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ತೆರಳಬೇಕಿದ್ದ ಬಸ್‌ಗಳ ಪ್ರಮಾಣದಲ್ಲೂ ಕಡಿಮೆಯಾಗಿದೆ. ಬೆಳಗಾವಿ-6, ಮೈಸೂರು-1, ಶಿವಮೊಗ್ಗ-1, ಗದಗ-9, ವಿಜಯಪುರ-5, ಹಾವೇರಿ-4 ಸೇರಿದಂತೆ ಇನ್ನಿತರ ಕೆಲ ಜಿಲ್ಲೆಗಳಿಗೆ ಒಂದಂಕಿಯ ಬಸ್‌ಗಳು ಸಂಚರಿಸಿವೆ. ಇನ್ನೂ ಜಿಲ್ಲೆಯ ವಿವಿಧ ಭಾಗಗಳಿಗೆ 22 ಬಸ್‌ಗಳು ಸಂಚಾರಗೊಂಡಿವೆ. ವಾರದ ಕೊನೆಯಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಯಿದ್ದು, ರಂಜಾನ್‌ ಹಬ್ಬದ ನಂತರ ಬಸ್‌ ಸಂಚಾರ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿದೆ.

ನಗರ ಸಾರಿಗೆ ವಿಭಾಗ: ನಗರ ಸಾರಿಗೆ ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಸ್‌ಗಳ ಸಂಚಾರವೂ ಕೂಡ ಹೆಚ್ಚಾಗುತ್ತಿದೆ. ನಾಲ್ಕನೇ ದಿನ ನಗರ ಸಾರಿಗೆ ವಿಭಾಗದಿಂದ 95 ಬಸ್‌ಗಳನ್ನು ರಸ್ತೆಗಿಳಿಸಲಾಗಿದ್ದು, ನಗರ-26, ಉಪನಗರ-17, ಹುಬ್ಬಳ್ಳಿ-ಧಾರವಾಡ-52 ಬಸ್‌ಗಳು ಸಂಚರಿಸಿವೆ. ದಿನ ಕಳೆದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next