Advertisement

ಮಾನಸಿಕ ಸದೃಢತೆಗೆ ಆಚರಣೆಗಳು ಪೂರಕ: ದಯಾನಂದ ಕತ್ತಲ್‌ಸಾರ್‌

12:46 PM Jul 22, 2018 | |

ಮಹಾನಗರ: ತುಳುವರು ಪ್ರಕೃತಿ ಆರಾಧಕರು. ದೈಹಿಕ ವ್ಯಾಧಿ ಉಂಟಾದಲ್ಲಿ ಪ್ರಕೃತಿಯಲ್ಲಿ ಸಾವಿರಾರು ಔಷಧ ಸಸ್ಯಗಳಿವೆ. ಅದೇ ರೀತಿಯಲ್ಲಿ ಮಾನಸಿಕವಾಗಿ ವ್ಯಕ್ತಿಯೊಬ್ಬನು ಸದೃಢವಾಗಿರಲು ಉತ್ತಮ ಆಚರಣೆಗಳಿವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್‌ ಅಭಿಪ್ರಾಯಪಟ್ಟರು.

Advertisement

ನಗರದ ಬೆಸೆಂಟ್‌ ಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಬೆಸೆಂಟ್‌ ಪದವಿಪೂರ್ವ ಕಾಲೇಜಿನಲ್ಲಿ ಜು. 21ರಂದು ಆಯೋಜಿಸಿದ್ದ ಅಂತರ್‌ ಕಾಲೇಜು ತುಳು ಪಾಡ್ದನ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವ್ಯಕ್ತ ಶಕ್ತಿಯೊಂದು ಪ್ರಕೃತಿಯಲ್ಲಿದೆ. ಅದು ಜಾತಿ ಭೇದ ಇಲ್ಲದೆ ಎಲ್ಲರಿಗೂ ಸಲ್ಲುವ ಶಕ್ತಿ ಎಂದರು.

ಪಾಡ್ದನಗಳನ್ನು ಹೇಗೆ, ಎಲ್ಲಿ ಮತ್ತು ಏಕೆ ಹಾಡಬಹುದೆಂದು ವಿವರಿಸಿ ರಾಗ ಮತ್ತು ಶಬ್ದಗಳ ಅಪಬ್ರಂಶವಾಗದೆ ಸಂದರ್ಭಕ್ಕೆ ತಕ್ಕಂತೆ ಸರಿಯಾದ ದಾಟಿಯಲ್ಲಿ ಹಾಡುವುದರಿಂದ ಜನಪದ ಸೊಗಡನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಹಳೆಯದರಲ್ಲಿ ಹೊಸತು ಕಾಣಿ
ಶೈಕ್ಷಣಿಕ ಸಲಹೆಗಾರ್ತಿ ಲಲಿತಾ ಜಿ. ಮಲ್ಯ ಅವರು, ಹಳೆಯದರಲ್ಲಿ ಹೊಸತನ್ನು ಕಾಣುವ ಮನೋಭಾವ ಬೆಳೆಯಬೇಕೆಂದು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಡಾ| ಅನ್ನಿಬೆಸೆಂಟ್‌ ಅವರ ಮಹಿಳಾ ಶಿಕ್ಷಣ ಬಗೆಗಿನ ಸಾಧನೆಗಳನ್ನು ವಿವರಿಸಿ ಮಾನವೀಯ ಕಳಕಳಿಗೆ ದೇಶಗಳ ಮೇರೆಗಳಿಲ್ಲ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕಾತ್ಯಾಯಿನಿ ಸೀತಾರಾಂ ಅವರು ಬೆಸೆಂಟ್‌ ಶಾಲೆಯ ಶತಮಾನೋತ್ಸವ ಕಟ್ಟಡದ ಬಗ್ಗೆ ವಿವರಿಸಿದರು. ಪಿಯುಸಿ ವಿದ್ಯಾರ್ಥಿಗಳಿಗಾಗಿ ಅಂತರ್‌ ಕಾಲೇಜು ಡಾ| ಅನ್ನಿಬೆಸೆಂಟ್‌ ರವರ ಪೆನ್ಸಿಲ್‌ ಸ್ಕೆಚ್‌ ಹಾಗೂ ತುಳು ಪಾಡªನ ಸ್ಪರ್ಧೆ ನಡೆಯಿತು. ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Advertisement

ಕಾಲೇಜಿನ ಪ್ರಾಂಶುಪಾಲರಾದ ಡಾ| ನಾಯಕ್‌ರೂಪ ಸಿಂಗ್‌ ಜಿ. ಸ್ವಾಗತಿಸಿದರು. ವಿಮೆನ್ಸ್‌ ನ್ಯಾಷನಲ್‌ ಎಜುಕೇಶನ್‌ ಸೊಸೈಟಿಯ ಉಪಾಧ್ಯಕ್ಷ ಮಣೇಲ್‌ ಅಣ್ಣಪ್ಪ ನಾಯಕ್‌, ಕಾರ್ಯದರ್ಶಿ ದೇವಾನಂದ ಪೈ, ಬೆಸೆಂಟ್‌ ಪದವಿಪೂರ್ವ ಕಾಲೇಜಿನ ಸಂಚಾಲಕ ಎಂ. ಸುರೇಶ್‌ ಎನ್‌. ಮಲ್ಯ, ಹಳೆ ವಿದ್ಯಾರ್ಥಿ ಓಂ ಪ್ರಕಾಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಕೃಪಾಕ್ಷಿ ವಂದಿಸಿದರು.

ಸಮ್ಮಾನ 
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಾಗೂ ನೈಸರ್ಗಿಕ ರೀತಿಯಲ್ಲಿ 250ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಸಾಂಪ್ರದಾಯಿಕ ಸೂಲಗಿತ್ತಿ ಹಾಗೂ ಪಾಡ್ದನ ಗಾಯಕಿ ಭವಾನಿ ಪೆರ್ಗಡೆ ಅವರನ್ನು ಸಮ್ಮಾನಿಸಲಾಯಿತು. ಭವಾನಿ ಪೆರ್ಗಡೆಯವರು ಪಾಡ್ದನಗಳನ್ನು ಹಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next