Advertisement

ಬುದ್ಧಿಜೀವಿಗಳು ಇನ್ನೊಂದು ಧರ್ಮ ನಿಂದಿಸುವುದು ಬೇಡ

05:23 PM Jun 17, 2018 | Team Udayavani |

ಗದಗ: ಇಲ್ಲಿನ ಮಾರುತಿ ತರುಣ ಯುವಕ ಸಂಘ ಮತ್ತು ಗೀಸಾಡೆ ಸಮಾಜದಿಂದ ನಗರದ ಜನತಾ ಬಜಾರಿನಲ್ಲಿ ಶನಿವಾರ ಮಹಾರಾಣ ಪ್ರತಾಪಸಿಂಹ ಮಹಾರಾಜರ ಜಯಂತಿ ಆಚರಿಸಲಾಯಿತು. ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು
ಖಾನಪ್ಪನವರ ಮಾತನಾಡಿ, ರಾಜ್ಯದಲ್ಲಿ ನಡೆದ ಬುದ್ಧಿ ಜೀವಿಗಳ ಹತ್ಯೆಯನ್ನು ಶ್ರೀರಾಮ ಸೇನೆ ಅತ್ಯಂತ ಘೋರವಾಗಿ ಖಂಡಿಸುತ್ತದೆ. ಬುದ್ಧಿಜೀವಿಗಳು ತಮ್ಮ ವಿಚಿತ್ರ ವಿಚಾರಧಾರೆಗಳಿಂದ ಇನ್ನೊಂದು ಧರ್ಮವನ್ನು ನಿಂಧಿಸುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿರುವುದು ಖೇದಕರ. ಅಲ್ಲದೇ, ಬುದ್ಧಿಜೀವಿಗಳು ಅನ್ಯಕೋಮು ಹಾಗೂ ಮಠಾಧೀಶರ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡದಂತೆ ಸರಕಾರ ನಿಷೇಧಿಸಬೇಕು ಎಂದು ಸಲಹೆ ನೀಡಿದರು.

Advertisement

ಮಹಾರಾಣ ಪ್ರತಾಪ ಮಹಾರಾಜರು ಯಾವುದೇ ಸಮಾಜಕ್ಕೆ ಸೇರಿದವರಲ್ಲ. ದೇಶ ಭಕ್ತರು, ಮಹಾಂತರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ, ಎಲ್ಲ ಸಮುದಾಯಗಳಿಂದ ಗೌರವನಮನ ಸಲ್ಲಿಕೆಯಾಗಬೇಕು ಎಂದು ಮಾರುತಿ ತರುಣ ಯುವಕ ಸಂಘವನ್ನು ಶ್ಲಾಘಿಸಿದರು. ಗೀಸಾಡೆ ಸಮಾಜದ ಅಧ್ಯಕ್ಷ ಮಾರುತಿ ಸೋಳಂಕಿ, ಮಾರುತಿ ತರುಣ ಸಂಘದ ಅಧ್ಯಕ್ಷ ಅಜಯ ಸೋಳಂಕಿ, ಸುರೇಶ ಚೌಹಾಣ, ಗಣೇಶ ಸೋಳಂಕಿ, ಆರ್‌ಎಸ್‌ಎಸ್‌ ಪ್ರಮುಖರಾದ ರಾಘು ಹಬೀಬ್‌, ಮಾರುತಿ ದಹಿಂಡೆ, ನಾಗರಾಜ ಸೋಳಂಕಿ, ಶಿವಾಜಿ ಪವಾರ ಕ್ರಾಂತಿಸೇನಾ ಅಧ್ಯಕ್ಷ ಬಾಬು ಬಾಕಳೆ, ಭಗತ್‌ಸಿಂಗ್‌ ಅಭಿಮಾನಿಗಳ ಬಳಗದ ಅಧ್ಯಕ್ಷ ಶಿವಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next