Advertisement

ಗದಗ: ಸ್ವರಾಜ್ಯ ಸಮ್ಮೇಳನದಿಂದ ಬೌದ್ಧಿಕ ಚಿಂತನೆ ಆರಂಭ

03:40 PM Mar 04, 2023 | Team Udayavani |

ಗದಗ: ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ದೇಶಗಳ ತಜ್ಞರು, ವಿವಿಧ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸ್ವರಾಜ್ಯ ಪರಿಕಲ್ಪನೆಗೆ ಸಂಬಂಧಿಸಿದಂತೆ ತಮ್ಮದೇ ಆದ ಹೊಸ ಕಲ್ಪನೆಗಳನ್ನು ಮಂಡಿಸಿದ್ದಾರೆ ಎಂದು ಗ್ರಾವಿವಿ ಕುಲಪತಿ ಪ್ರೊ|ವಿಷ್ಣುಕಾಂತ ಚಟಪಲ್ಲಿ ಹೇಳಿದರು.

Advertisement

ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶ-ವಿದೇಶಗಳ ತಜ್ಞರು ಹಾಗೂ ವಿವಿಧ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳು ಮಂಡಿಸಿದ ಅಂಶಗಳಲ್ಲಿ ಉತ್ಕೃಷ್ಟವಾದವುಗಳನ್ನು ಪರಿಗಣಿಸಿ, ಸ್ವರಾಜ್ಯ ನಿರ್ಣಯ ಮಂಡಿಸಲಾಗಿದೆ. ಈ ನಿರ್ಣಯಗಳ ಆಧಾರದಲ್ಲಿ ನೀತಿ ರಚನೆ ಮಾಡಿ, ಅನುಷ್ಠಾನಗೊಳಿಸಿ ಸ್ವರಾಜ್ಯವನ್ನು ಸದೃಢಗೊಳಿಸಬೇಕಿದೆ ಎಂದು ಹೇಳಿದರು.

ಸ್ವರಾಜ್ಯ-ಸ್ಥಳೀಯ ಆಡಳಿತದ ಸ್ವಯಂ ಮಾದರಿಗಳು, ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಸ್ವರಾಜ್ಯದ ಆಲೋಚನೆಗಳ ಬಗೆಗಿನ ಅಂತ್ಯವಲ್ಲ. ಇದು ಸ್ವರಾಜ್ಯಕ್ಕೆ ಸಂಬಂಧಿಸಿದ ಬೌದ್ಧಿಕ ಚಿಂತನೆಗಳ ಆರಂಭ ಎಂದು ಚಟಪಲ್ಲಿ ಹೇಳಿದರು.

ಪ್ರಜ್ಞಾ ಪ್ರವಾಹದ ಅಖೀಲ ಭಾರತೀಯ ಸಂಯೋಜಕ ನಂದಕುಮಾರ ಮಾತನಾಡಿ, ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಗಮಿಸಿದ್ದ ವಿವಿಧ ದೇಶಗಳ ಪ್ರತಿನಿಧಿಗಳು ಬಹಳ ಶಿಸ್ತು ಹಾಗೂ ಶ್ರದ್ಧೆಯಿಂದ ಪಾಲ್ಗೊಂಡಿದ್ದು ಶ್ಲಾಘನೀಯ. ಪರ್ಯಾಯ ಗೋಷ್ಠಿಗಳು ಕೂಡ ಅಷ್ಟೇ ಪರಿಣಾಮಕಾರಿಯಾಗಿ ನಡೆದವು.

Advertisement

ಎಲ್ಲಕ್ಕಿಂತ ಮಿಗಿಲಾಗಿ, ಪ್ರತಿಯೊಂದು ವಿಚಾರ ಸಂಕಿರಣ, ವಿಷಯ ಮಂಡನೆ ವೇಳೆ ಅವರೆಲ್ಲರೂ ಹಿರಿಯರು, ಕಿರಿಯರ ಜತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತು ಎಂದು ಹೇಳಿದರು.

ಅಂತಾರಾಷ್ಟ್ರೀಯ ಸಮ್ಮೇಳವನ್ನು ಅಚ್ಚುಕಟ್ಟಾಗಿ ನಡೆಸಿದ ಕೀರ್ತಿ ವಿಶ್ವವಿದ್ಯಾಲಯಕ್ಕೆ ಸಲ್ಲಬೇಕು. ನಾಯಕನಂತಿರುವ ವಿಷ್ಣುಕಾಂತ ಚಟಪಲ್ಲಿ ಅವರ ದೂರದೃಷ್ಟಿತ್ವದಿಂದ ಇದು ಸಾಧ್ಯವಾಗಿದೆ. ಸಮ್ಮೇಳನ ಯಶಸ್ವಿಯಾಗಿದೆ. ನಿರ್ಣಯಗಳೂ ಮಂಡನೆಯಾಗಿವೆ. ಈಗ ಅವುಗಳನ್ನು ಅನುಸರಿಸಿ, ಅಳವಡಿಸಿಕೊಂಡು ಸ್ವರಾಜ್ಯ ಕಟ್ಟಬೇಕಿದೆ. ಪ್ರತಿಯೊಬ್ಬರೂ ಇದನ್ನು ಗುರಿಯಾಗಿಸಿಕೊಳ್ಳಬೇಕೆಂದು ಹೇಳಿದರು.

ಪ್ರೊ|ಕಿರಣ್‌ ಅವರು ವಿಶ್ವವಿದ್ಯಾಲಯದ ಜತೆಗಿನ ಪಾಲುದಾರಿಕೆಯ ದ್ಯೋತಕವಾಗಿ ಸಿ-20 (ಸಿವಿಲ್‌ ಸೊಸೈಟಿ 20) ಧ್ವಜವನ್ನು ಪ್ರೊ|ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರಿಗೆ ಹಸ್ತಾಂತರಿಸಿದರು. ಪ್ರಾಚಿ ಫೌಂಡೇಶನ್‌ ಅಧ್ಯಕ್ಷ ಶ್ರೀನಿವಾಸ ಭಗವತಲು ಮಾತನಾಡಿ, ಮೂರು ದಿನಗಳ ಸಮ್ಮೇಳನದಲ್ಲಿ 14 ದೇಶಗಳ 52 ಪ್ರತಿನಿ ಗಳು ಭಾಗವಹಿಸಿದ್ದರು. ದೇಶದ ವಿವಿಧ ರಾಜ್ಯಗಳಿಂದ 220 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ನಾಲ್ಕು ಮಂದಿ ಪದ್ಮಶ್ರೀ ಪುರಸ್ಕೃತರು, ಹಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next