Advertisement
-ಇವು ಚುನಾವಣ ರಾಜಕೀಯದಲ್ಲಿ 2 ದಶಕಗಳ ಅವಧಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮನದಾಳದ ಮಾತುಗಳು. “ಓಪನ್ ಮ್ಯಾಗಸಿನ್’ಗೆ ನೀಡಿರುವ ಸಂದರ್ಶನದಲ್ಲಿ ಮೋದಿ ತಮ್ಮ ರಾಜಕೀಯ ಪ್ರವೇಶದಿಂದ ಹಿಡಿದು ತಮ್ಮ ಸರಕಾರದ ನೀತಿಗಳು, ವಿಪಕ್ಷಗಳ ಟೀಕೆ, ಕೃಷಿ ಕಾಯ್ದೆಗೆ ವಿರೋಧ, ಕೊರೊನಾ ಸೋಂಕಿ ನವರೆಗೆ ಹಲವು ವಿಚಾರಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.
Related Articles
ಕೋವಿಡ್ ಸೋಂಕು ಮತ್ತು ಲಸಿಕೆ ವಿತರಣೆ ಕುರಿತು ಪ್ರಸ್ತಾವಿಸಿದ ಮೋದಿ, ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಸೋಂಕಿನ ವಿರುದ್ಧ ಪ್ರಬಲ ಹೋರಾಟ ನಡೆಸಿದೆ. ಅಲ್ಲದೆ ಲಸಿಕೆ ವಿತರಣೆಯಲ್ಲಿ ನಾವುಯಶಸ್ಸು ಸಾಧಿಸಲು ದೇಶದ ಸ್ವಾವಲಂಬನೆ ಮತ್ತು ತಂತ್ರಜ್ಞಾನವೇ ಕಾರಣ. ಹೀಗಿದ್ದರೂ ನಮ್ಮ ನಡುವೆಯೇ ಇರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶಕ್ಕೆ ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ ಎಂದು ಕಿಡಿ ಕಾರಿದ್ದಾರೆ.
Advertisement
ಪ್ರಮುಖ ಅಂಶಗಳು1. ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದ ನಾನು 20 ವರ್ಷಗಳ ಹಿಂದೆ ಪರಿಸ್ಥಿತಿಗೆ ಕಟ್ಟುಬಿದ್ದು ಸಂಪೂರ್ಣವಾಗಿ ಭಿನ್ನವಾದ ರಾಜಕೀಯ ಪ್ರಪಂಚಕ್ಕೆ ಕಾಲಿರಿಸಿದೆ.
2. ಕೃಷಿ ಕಾಯ್ದೆಗಳನ್ನು ವಿರೋಧಿಸುವವರಲ್ಲಿ ನೀವು ನೈಜ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ ಗಳನ್ನು ಕಾಣಬಹುದು.
3. ಆಶ್ವಾಸನೆ ನೀಡುವುದು, ಅದಕ್ಕಾಗಿ ವಾದಿಸುವುದು, ಕೊನೆಗೆ ನಾವದನ್ನು ಜಾರಿ ಮಾಡುವಾಗ ಅದನ್ನೇ ವಿರೋಧಿಸುವುದು ವಿಪಕ್ಷಗಳ ಕಾಯಕ.
4. ಹಿಂದೆ ಆಳಿದವರು “ಸರಕಾರ ನಡೆಸುವುದೇ ಚುನಾವಣೆ ಯಲ್ಲಿ ಪಕ್ಷವನ್ನು ಗೆಲ್ಲಿಸಲು’ ಎಂದು ನಂಬಿದ್ದರು. ಆದರೆ ನಾನು ಸರಕಾರ ನಡೆಸುವುದು ನನ್ನ ದೇಶವನ್ನು ಗೆಲ್ಲಿಸಲು.
05. ನಾನು ಟೀಕಾಕಾರರನ್ನು ಗೌರವಿಸುತ್ತೇನೆ. ಆದರೆ ಅಂಥವರ ಸಂಖ್ಯೆ ಕಡಿಮೆಯಿದೆ. ಪೂರ್ವಗ್ರಹದೊಂದಿಗೆ ಆರೋಪ ಮಾಡುವವರೇ ಹೆಚ್ಚಿದ್ದಾರೆ.
06. ಬಡವರ ಪರ, ಉದ್ದಿಮೆ ಪರ ನೀತಿಯು ಪರಸ್ಪರ ನಂಟು ಹೊಂದಿರುವಂಥದ್ದು. ನನ್ನ ಪ್ರಕಾರ ನೀತಿನಿರೂಪಣೆಯು ಜನಪರವಾಗಿದ್ದರೆ ಸಾಕು.
07. ಇಂದು ಕೋವಿಡ್ ವಿರುದ್ಧ ಲಸಿಕೆ ವಿತರಣೆಯಲ್ಲಿ ಭಾರತದ ಯಶಸ್ಸಿಗೆ ನಮ್ಮ ದೇಶವು ಆತ್ಮನಿರ್ಭರವಾಗಿ ಬೆಳೆದದ್ದೇ ಕಾರಣ.