Advertisement

Integrated ವೈದ್ಯರು ಆಯುರ್ವೇದ,ಅಲೋಪಥಿ ಚಿಕಿತ್ಸೆ ನೀಡಬಹುದು

01:34 AM Sep 01, 2024 | Team Udayavani |

ಬೆಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಪ್ರಾಕ್ಟೀಶನರ್ಸ್‌ ಬೋರ್ಡಿನ ಇಂಟಿಗ್ರೇಟೆಡ್‌ ಶೆಡ್ನೂಲಿನಲ್ಲಿ ನೋಂದಾಯಿತ ವೈದ್ಯ ರನ್ನು ಇಂಟಿಗ್ರೇಟೆಡ್‌ ವೈದ್ಯರೆಂದು ಪರಿಗಣಿಸಲಾಗುತ್ತಿದ್ದು, ಅವರು ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಗಳೆರಡರಲ್ಲೂ ಚಿಕಿತ್ಸೆ ನೀಡಬಹುದಾಗಿದೆ.
ಇಂತಹ ವೈದ್ಯರ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳನ್ನು ಜನರು ಗುರುತಿಸಲು ಸುಲಭವಾಗಲು ನಾಮಫ‌ಲಕವನ್ನು ಮೇಲ್ಭಾಗದಲ್ಲಿ ತಿಳಿ ಹಸುರು ಮತ್ತು ಕೆಳಭಾಗದಲ್ಲಿ ಆಕಾಶ ನೀಲಿ ಬಣ್ಣ (ಶೇ. 50ರ ಅನುಪಾತ)ದಲ್ಲಿ ಇರುವಂತೆ ರಚಿಸಿ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಕರ್ನಾಟಕ ಸ್ಟೇಟ್‌ ರಿಜಿಸ್ಟರ್ಡ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಪ್ರಾಕ್ಟೀಶನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಅರವಿಂದ್‌ ಪರಾಡ್ಕರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next