Advertisement
“ಓಣತ್ತಿನ್ ಒರು ಮುರ ಪಚ್ಚಕ್ಕರಿ (ಓಣಂ ಹಬ್ಬಕ್ಕೆ ಒಂದಷ್ಟು ಜೈವಿಕ ತರಕಾರಿ)’ ಎಂಬ ಯೋಜನೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಓಣಂ ಹಬ್ಬಕ್ಕಾಗಿ ವಿಷರಹಿತ ತರಕಾರಿ ಬೆಳೆಯುವ ಉದ್ದೇಶದಿಂದ ಹಿತ್ತಿಲಲ್ಲೇ ನೆಟ್ಟು ಬೆಳೆಸುವ ಈ ಯೋಜನೆಗಾಗಿ 2,35,000 ತರಕಾರಿ ಬೀಜಗಳನ್ನು ಶಾಲೆಯ ಮಕ್ಕಳಿಗೆ, ಕೃಷಿಕರಿಗೆ ಮತ್ತು ಸ್ವಯಂಸೇವಾ ಸಂಘಟನೆಗಳಿಗೆ ಜಿಲ್ಲೆಯಲ್ಲಿ ವಿತರಿಸಲಾಗಿದೆ. ಇದಲ್ಲದೆ 7 ಲಕ್ಷ ತರಕಾರಿ ಸಸಿಗಳನ್ನು ಜಿಲ್ಲೆಯಲ್ಲಿ ಉಚಿತವಾಗಿ ವಿತರಣೆ ನಡೆಸಲಾಗಿದೆ. ವಾಣಿಜ್ಯೀ ಕರಣದ ಹಿನ್ನೆಲೆಯಲ್ಲಿ ತರಕಾರಿ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ 5 ಹೆಕ್ಟೇರ್ ಕ್ಲಸ್ಟರ್‌ಗಳನ್ನು ಕೃಷಿ ಭವನ ಮಟ್ಟದಲ್ಲಿ ರಚಿಸಲಾಗಿದೆ. ಕ್ಲಸ್ಟರ್ ಒಂದಕ್ಕೆ 75 ಸಾವಿರ ರೂ. ಆರ್ಥಿಕ ಸಹಾಯ ಒದಗಿಸಲಾಗುವುದು. ಜಿಲ್ಲೆಯಲ್ಲಿ ಈ ವರ್ಷ ಇಂಥ 75 ಕ್ಲಸ್ಟರ್‌ಗಳಿಗೆ ಆರ್ಥಿಕ ಸಹಾಯ ಲಭಿಸಲಿದೆ.
Related Articles
Advertisement
ತರಕಾರಿಗಳು ಹಾನಿಯಾಗದಂತೆ ಸುರಕ್ಷಿತವಾಗಿ ಇರಿಸುವ ವಿಧಾನವೇ ಕೂಲ್ ಚೇಂಬರ್. ಹೊರಗಡೆಯ ತಾಪಮಾನಕ್ಕಿಂತ 10-15 ಡಿಗ್ರಿ ಸೆಲಿÏಯಸ್ ಕಡಿಮೆ ತಾಪಮಾನ ಉಳಿಸಿಕೊಂಡು ಇದು ಒಂದು ವಾರದ ವರೆಗೂ ತರಕಾರಿ ಹಾಳಾಗದಂತೆ ಇರಿಸುತ್ತದೆ. ಇಂತಹ 38 ಯೂನಿಟ್‌ಗಳನ್ನು ಇರಿಸಲು ಉದ್ದೇಶಿಸಲಾಗಿದೆ.
ಆಯಾ ಪಂಚಾಯತ್‌ಗಳು ತಮಗೆ ಬೇಕಾದ ತರಕಾರಿ ಸಸಿಗಳನ್ನು ತಮ್ಮಲ್ಲೇ ಉತ್ಪಾದಿಸುವ ಕಿರು ತರಕಾರಿ ನರ್ಸರಿಗಳ ಸ್ಥಾಪನೆಗಾಗಿ 1.25 ಲಕ್ಷ ರೂ. ಮಂಜೂರು ಮಾಡಲಾಗುದೆ. 50 ಚ. ಮೀಟರ್ ಯೂನಿಟ್‌ಗೆ 70 ಸಾವಿರ ರೂ. ಸಬ್ಸಿಡಿ ಮಂಜೂರು ಮಾಡಲಾಗಿದೆ. ಶಾಲೆಗಳ ಸಹಿತ ಕಡೆಗಳಲ್ಲಿ 10 ಸೆಂಟ್ಸ್ ಗಿಂತ ಕಡಿಮೆಯಲ್ಲದ ಜಾಗದಲ್ಲಿ ತರಕಾರಿ ಕೃಷಿ ನಡೆಸಲು 5 ಸಾವಿರ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ 100 ಸಂಸ್ಥೆಗಳಿಗೆ ಈ ರೀತಿ ಆರ್ಥಿಕ ಸಹಾಯ ವಿತರಣೆ ಮಾಡಲಾಗು ವುದು. ಇದಲ್ಲದೆ ಸರಕಾರಿ, ಖಾಸಗಿ ಸಂಸ್ಥೆàಗಳ 25 ಸೆಂಟ್ಸ್‌ಗಿಂತ ಕಡಿಮೆಯಲ್ಲದ ತರಕಾರಿ ಕೃಷಿ ನಡೆಸಲು ಮೂಲಭೂತ ಸೌಲಭ್ಯ ಏರ್ಪಡಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂ. ವರೆಗೆ ಆರ್ಥಿಕ ಸಹಾಯ ನೀಡಲಾಗುವುದು. ಜಿಲ್ಲೆಗೆ ಈ ಘಟಕಕ್ಕೆ 8 ಲಕ್ಷ ರೂ. ಮಂಜೂರು ಮಾಡಲಾಗಿದೆ.
ವಾಣಿಜ್ಯ ಸಂಸ್ಥೆಗಳಲ್ಲಿ ತರಕಾರಿ ಕೃಷಿ ನಡೆಸುವ ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಪಂಪ್ ಸೆಟ್ ಖರಿದಿಗೆ ಶೇ.50 ಸಬ್ಸಿಡಿ ಸಹಿತ ಗರಿಷ್ಠ 10 ಸಾವಿರ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ 125 ಪಂಪ್ ಸೆಟ್ ಖರೀದಿಗೆ ಈ ರೀತಿಯ ಸಬ್ಸಿಡಿ ನೀಡಲಾಗುವುದು.
ರೋಗಬಾಧೆಗೆ ಜೈವಿಕ ಕೀಟನಾಶಕ ಸಿಂಪಡಣೆ ನಡೆಸುವ ನಿಟ್ಟಿನಲ್ಲಿ 160 ಸ್ಪ್ರೆàಯರ್‌ಗಳು 1500 ರೂ. ಸಬ್ಸಿಡಿ ರೂಪದಲ್ಲಿ ವಿತರಣೆ ನಡೆಸಲಾಗುವುದು. ನೂತನ ತಾಂತ್ರಿಕ ವಿದ್ಯೆ ಕೃಷಿ ತಾಣಗಳಲ್ಲಿ ಬಳಸುವ ನಿಟ್ಟಿನಲ್ಲಿ ಪ್ರೊಜೆಕ್ಟ್ ಹಿನ್ನೆಲೆಯಲ್ಲಿ 3 ಲಕ್ಷ ರೂ. ವರೆಗೆ ಮಂಜೂರು ಮಾಡಲಾಗುವುದು.