Advertisement

ನಿಷೇಧಿತ ಡ್ರಗ್ಸ್‌ ಸೇವನೆ: ಇಂಗ್ಲೆಂಡ್‌ ತಂಡದಿಂದ ಹೇಲ್ಸ್‌ಗೆ ಗೇಟ್‌ಪಾಸ್‌

10:53 AM May 01, 2019 | Team Udayavani |

ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೆ ಇನ್ನೊಂದೇ ತಿಂಗಳು ಬಾಕಿ ಇದೆ ಎನ್ನುವಷ್ಟರಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

Advertisement

ಇಂಗ್ಲೆಂಡ್‌ ಆರಂಭಕಾರ ಅಲೆಕ್ಸ್‌ ಹೇಲ್ಸ್‌ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಇಂಗ್ಲೆಂಡ್‌ ತಂಡದಿಂದ ಗೇಟ್‌ಪಾಸ್‌ ಪಡೆದಿದ್ದಾರೆ. ಹೀಗಾಗಿ ಮುಂಬರುವ ಐರ್ಲೆಂಡ್‌ ಟಿ20, ಪಾಕಿಸ್ಥಾನ ವಿರುದ್ಧದ ಸರಣಿ ಹಾಗೂ ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹೇಲ್ಸ್‌ ಆಟ ಕಾಣಸಿಗದು!

ಹೇಲ್ಸ್‌ ಪ್ರಕರಣವನ್ನು “ಗಾರ್ಡಿಯನ್‌’ ಪತ್ರಿಕೆ ಮೊದಲು ವರದಿ ಮಾಡಿತ್ತು. ರವಿವಾರ ರಾತ್ರಿಯ ಬೆಳವಣಿಗೆಯಲ್ಲಿ ಹೇಲ್ಸ್‌ ಅವರನ್ನು ಇಂಗ್ಲೆಂಡ್‌ ತಂಡದಿಂದ ಕೈಬಿಡುವ ನಿರ್ಧಾರ ಪ್ರಕಟಿಸಿತು.

ತಂಡದ ಹಿತದೃಷ್ಟಿಯಿಂದ ಈ ಕಠಿನ ನಿರ್ಧಾರಕ್ಕೆ ಬರಬೇಕಾಯಿತು ಎಂದು ಇಸಿಬಿ ವ್ಯವಸ್ಥಾಪಕ ನಿರ್ದೇಶಕ ಆ್ಯಶ್ಲೇ ಜೈಲ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next