ಕ್ಷಣದಲ್ಲಿ ಪ್ರೇಮವಾಗಿ, ದಿನಗಳಲ್ಲೇ ಬ್ರೇಕಪ್ ಆಗಿರುವ, ಪ್ರೇಮಿಗಳು ಮನಸ್ಸು ಮುರಿದುಕೊಳ್ಳುವ, ಆರ್ಥಿಕವಾಗಿಯೂ ಮೋಸ ಹೋದ ಅನೇಕ ಪ್ರಕರಣಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬ ಯುವಕ ಲವ್‌ಬ್ರೇಕ್‌ಅಪ್‌ಗೆ ಇನ್ಶೂರೆನ್ಸ್ ಉಪಾಯ ಮಾಡಿದ್ದು, ಆತನ ಪ್ರೇಯಸಿ ವಂಚಿಸಿದ ಬಳಿಕ 25 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ.
ಹೌದು ಟ್ವಿಟರ್ ಬಳಕೆದಾರ ಪ್ರತೀಕ್ ನಾಯಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. “ನಾನು ನನ್ನ ಪ್ರೇಯಸಿ, ಪ್ರೀತಿ ಶುರುವಾದಾಗಿನಿಂದ ಜಂಟಿ ಖಾತೆಯೊಂದರಲ್ಲಿ ಮಾಸಿಕ ತಲಾ 500ರೂ.ಗಳನ್ನು ಜಮೆ ಮಾಡಿದ್ದೆವು. ನಮ್ಮಿಬ್ಬರಲ್ಲಿ ಯಾರು ಮೋಸ ಹೋಗುತ್ತೇವೋ ಅವರು ಸಂಪೂರ್ಣ ಹಣದ ಜತೆಗೆ ಹೋಗಬಹುದು ಎಂಬುದು ನಿಯಮವಾಗಿತ್ತು. ಅದರಂತೆ ನನ್ನ ಪ್ರೇಯಸಿ ನನಗೆ ವಂಚಿಸಿ ಹೋಗಿದ್ದಾಳೆ.ನನಗೀಗ 25 ಸಾವಿರ ರೂ. ದೊರೆತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಜಾಲತಾಣದಲ್ಲಿ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಕೆಲವರು ಪ್ರೀತಿ ಹೋದಾಗ ಹಣವಾದರೂ ಉಳಿಯಲಿ ಎಂದರೆ, ಮತ್ತೂ ಕೆಲವರು ಇದೊಂದು ಸಕ್ಸಸ್‌ಫುಲ್ ಬಿಸಿನೆಸ್ ಪ್ಲ್ರಾನ್ ಎಂದು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.