ತಿಪಟೂರು: ಹೈನುಗಾರಿಕೆ ರೈತರ ಬೆನ್ನೆಲುಬಾಗಿದ್ದು, ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಿಕೊಳ್ಳಿ ಎಂದು ರಾಜ್ಯ ಹಾಲು ಮಹಾಮಂಡಲದ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.
ತಾಲೂಕಿನ ಕರೀಕೆರೆ ಡೇರಿ, ತುಮಕೂರು ಹಾಲು ಒಕ್ಕೂಟದಿಂದ ರಾಸು ವಿಮೆ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ರೈತರು ಹೈನುಗಾರಿಕೆ ಮಾಡುವುದು ತುಂಬಾ ಕಷ್ಟವಾಗಿದೆ. ಜಾನುವಾರುಗಳಿಗೆ ಅನೇಕ ರೋಗಗಳು ಬರಲಿದ್ದು, ಒಂದು ವೇಳೆ ಮರಣಹೊಂದಿದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ರಾಸು ವಿಮಾ ಮೊತ್ತದಲ್ಲಿ ಒಕ್ಕೂಟದ ವಂತಿಕೆ ಶೇ.60, ತುಮೂಲ್ ಕಲ್ಯಾಣ ಟ್ರಸ್ಟ್‌ನಿಂದ ಶೇ.20, ಉತ್ಪಾದಕರುಕೇವಲ ಶೇ.20 ಹಣ ಪಾವತಿಸಬೇಕು. ಜಾನುವಾರುಗಳಿಂದ ಮನುಷ್ಯನು ಹಲವು ಪ್ರಯೋಜನ ಪಡೆದುಕೊಂಡು ರಾಸುಗಳು ಮರಣ ಹೊಂದಿದರೆ ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಮರಣ ಹೊಂದಿದ ರಾಸುಗಳಿಗೆ ಅಂತ್ಯ ಸಂಸ್ಕಾರ ಮಾಡಲು ಕರೀಕೆರೆ ಸಹಕಾರ ಸಂಘದಲ್ಲಿ ಪೋ›ತ್ಸಾಹ ಧನ ನೀಡಲಾಗುತ್ತದೆ. ಈ ಕಾರ್ಯವನ್ನು ನಮ್ಮ ತಾಲೂಕಿನ ಎಲ್ಲಾ ಸಂಘಗಳಲ್ಲಿಯೂ ಅನುಸರಿಸುವಂತೆ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ತುಮೂಲ್, ಕೆಎಂಎಫ್ನಿಂದರೈತರಿಗೆ ಉತ್ತಮ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ, ಉಪಾಧ್ಯಕ್ಷ ಶಿವನಂದ ಸ್ವಾಮಿ, ನಿರ್ದೇಶಕರಾದ ರಾಜ ಶೇಖರ್, ಲತಾ ಶಂಕರಪ್ಪ,ರಾಜಶೇಖರಪ್ಪ, ಲತೇಶ್, ಉಷಾ, ಮಾಜಿ ಅಧ್ಯಕ್ಷ ದಿನೇಶ್, ಮಂಜುನಾಥ್, ಪಶುವೈದ್ಯಾಧಿಕಾರಿ ಡಾ.ಪ್ರಭು, ಕಾರ್ಯದರ್ಶಿ ಸಿದ್ದರಾಮಯ್ಯ, ಹಾಲು ಪರೀಕ್ಷಕ ರವಿ ಗ್ರಾಮಸ್ಥರಿದ್ದರು.