Advertisement

ಪತಿ ಸಾವಿನ ಬಗ್ಗೆ ಸುಳ್ಳು ದಾಖಲೆ ನೀಡಿ 3 ಕೋಟಿ ವಿಮೆ ಪಡೆದ ಪತ್ನಿ

11:48 AM Feb 10, 2022 | Team Udayavani |

ಬೆಂಗಳೂರು: ವಿಮಾ ಕಂಪನಿಯ ಮೂರು ಕೋಟಿ ರೂ.ಗಾಗಿ ಪತ್ನಿಯೊಬ್ಬರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ದಾಖಲೆ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಖಾಸಗಿ ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್‌.ಗಣಪತಿ ಎಂಬುವರು ನೀಡಿದ ದೂರಿನ ಮೇರೆಗೆ ಕೋರಮಂಗಲಠಾಣೆ ಪೊಲೀಸರು, ವಿಟ್ಟಸಂದ್ರ ನಿವಾಸಿ ಸುಪ್ರಿಯಾ ಲಕಾಕುಲಾ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆಂಧ್ರಪ್ರದೇಶ ಮೂಲದ ಕೃಷ್ಣಪ್ರಸಾದ್‌ ಗಾರಲಪಟ್ಟಿ (31) ಎಂಬುವರು ನಗರದ ವಿಟ್ಟಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು.

ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಕೃಷ್ಣಪ್ರಸಾದ್‌ ಆನ್‌ಲೈನ್‌ನಲ್ಲಿ ವಿಮಾ ಕಂಪನಿಯನ್ನು ಸಂಪರ್ಕಿಸಿ, ಕಳೆದ 2021ರ ಮಾರ್ಚ್‌ 3ರಂದು ಮಹಾ ರಕ್ಷ ಸುಪ್ರೀಂ ಪಾಲಿಸಿಗೆ ಅರ್ಜಿ ಸಲ್ಲಿಸಿ ಫೋಟೋ, ಪಾನ್‌, ಆಧಾರ್‌, ಮೂರು ತಿಂಗಳ ವೇತನ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಮರು ದಿನ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ್ದರು.

ಆನ್‌ಲೈನ್‌ ಮೂಲಕವೇ ಕೃಷ್ಣಪ್ರದಾಸ್‌ ಅವರ ದಾಖಲೆ ಪರಿಶೀಲನೆ ನಡೆಸಿದ ವಿಮಾಕಂಪನಿ, 2021ರ ಮಾರ್ಚ್‌ 5ರಂದು ಕೃಷ್ಣಪ್ರಸಾದ್‌ಗೆ ಪಾಲಿಸಿ ನೀಡಿತ್ತು. ಅದರಂತೆ ವಾರ್ಷಿಕ ಪ್ರೀಮಿಯಂ 51,777 ರೂ. ಆಗಿದ್ದು, ಪಾಲಿಸಿ ಮೊತ್ತ ಮೂರು ಕೋಟಿ ರೂ. ಆಗಿತ್ತು. ಈ ಪಾಲಿಸಿ ಅವಧಿ 28 ವರ್ಷ ಆಗಿದ್ದರೂ 12 ವರ್ಷ ಮಾತ್ರ ವಿಮೆ ಕಂತು ಪಾವತಿಸಬೇಕಿತ್ತು. ಕೃಷ್ಣಪ್ರಸಾದ್‌ ಅವರು ಈ ಪಾಲಿಸಿಗೆ ಪತ್ನಿ ಸುಪ್ರಿಯಾ ಅವರನ್ನೇ ನಾಮಿನಿ ಮಾಡಿದ್ದರು. ದುರಂತವೆಂದರೆ, ಈ ಪಾಲಿಸಿ ಮಾಡಿಸಿ 2 ತಿಂಗಳು 9 ದಿನಕ್ಕೆ (2021ರ ಮೇ 14) ಕೃಷ್ಣಪ್ರಸಾದ್‌ ಮೃತಪಟ್ಟಿದ್ದರು.

ಕಳೆದ 2021ರ ಜುಲೈ 19ರಂದು ಕೃಷ್ಣಪ್ರಸಾದ್‌ ಪತ್ನಿ ಸುಪ್ರಿಯಾ ವಿಮಾ ಕಂಪನಿ ಕಚೇರಿಗೆ ಬಂದು ನನ್ನ ಪತಿ ಹೃದಯಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಸಲ್ಲಿಸಿದ್ದರು. ಅದರಂತೆ ದಾಖಲೆ ಪರಿಶೀಲಿಸಿದ್ದ ವಿಮೆ ಕಂಪನಿ ಅಧಿಕಾರಿಗಳು, ನಾಮಿನಿಯಾಗಿದ್ದ ಸುಪ್ರಿಯಾ ಅವರ ಬ್ಯಾಂಕ್‌ ಖಾತೆಗೆ 3.2 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು.

Advertisement

ನಂತರ 2021ರ ಡಿ.24ರಂದು ರವಿ ಎಂಬವರು ವಿಮಾ ಕಂಪನಿ ಸಂಪರ್ಕಿಸಿ, ಪತ್ರವೊಂದನ್ನು ನೀಡಿದ್ದರು. ಅದರಲ್ಲಿ ಕೃಷ್ಣ ಪ್ರಸಾದ್‌ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಕ್ಯಾನ್ಸರ್‌ ಕಾಯಿಲೆಯಿಂದ ಮೃತ ಪಟ್ಟಿದ್ದಾರೆ. ಆದರೆ, ಕ್ಯಾನ್ಸರ್‌ ಕಾಯಿಲೆ ಬಗ್ಗೆ ಮುಚ್ಚಿಟ್ಟು ಪಾಲಿಸಿ ಮಾಡಿಸಿದ್ದಾರೆ. ಇದೀಗ ಅವರ ಪತ್ನಿ ಸುಪ್ರಿಯಾ ನಕಲಿ ದಾಖಲೆ ಸಲ್ಲಿಸಿ ವಿಮಾ ಹಣ ಪಡೆದಿದ್ದಾರೆ ಎಂದು ತಿಳಿಸಿದ್ದರು. ಜತೆಗೆ ಕೃಷ್ಣಪ್ರಸಾದ್‌ ಚಿಕಿತ್ಸೆ ಪಡೆದಿದ್ದ ಖಾಸಗಿಆಸ್ಪತ್ರೆಯ ದಾಖಲೆಗಳನ್ನು ನೀಡಿದ್ದರು. ಈಸಂಬಂಧ ಪರಿಶೀಲಿಸಿದ ವಿಮಾ ಕಂಪನಿಸುಪ್ರಿಯಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next