ಉಡುಪಿ: ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಡೀಲರ್‌ಗಳಿಗೆ ಆಮ್ ಆದ್ಮಿ ವಿಮಾ ಯೋಜನೆ ಜಾರಿಗೆ ತಂದಿದ್ದು, ವಿಮಾ ಮೊತ್ತವನ್ನು ಒಕ್ಕೂಟ ಭರಿಸುತ್ತದೆ. ಕೆಲವೇ ಡೀಲರ್‌ಗಳು ಇದರ ಸದುಪಯೋಗ ಪಡೆದುಕೊಂಡಿ¨ªಾರೆ. ವಿಮಾ ಸೌಲಭ್ಯದಿಂದ ಸಾಕಷ್ಟು ಪ್ರಯೋಜನವಿರುವುದರಿಂದ ನಿರ್ಲಕ್ಷಿಸದೆ ಗುರುತಿನ ಚೀಟಿ ದಾಖಲೆ ನೀಡಿ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮನವಿ ಮಾಡಿದರು.
ಶುಕ್ರವಾರ ಕಿದಿಯೂರು ಹೊಟೇಲ್‌ನ ಮಹಾಜನ ಸಭಾಂಗಣದಲ್ಲಿ ನಡೆದ ಒಕ್ಕೂಟದ ಡೀಲರ್‌ಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಿಲ್ಕೊ ಸಾಫ್ಟ್ ಆ್ಯಪ್ : ಒಕ್ಕೂಟ 1.50 ಕೋ. ರೂ. ವೆಚ್ಚದಲ್ಲಿ ಮಿಲ್ಕೊ ಸಾಫ್ಟ್ ಆ್ಯಪ್ ತಯಾರಿಸಿದೆ. ಡೀಲರ್‌ಗಳಿಗೆ ಇಂಡೆಂಟ್ ಹಾಕಲು ಇದು ಸಹಕಾರಿ. ಸಮಯದ ಉಳಿತಾಯ ಆಗುತ್ತದೆ. ಕೆಲವು ಡೀಲರ್‌ಗಳು ಮಾತ್ರ ಆ್ಯಪ್ ಬಳಸುತ್ತಿದ್ದು, ಎಲ್ಲ ಡೀಲರ್‌ಗಳು ಆ್ಯಪ್ ಅಳವಡಿಸಿಕೊಳ್ಳಬೇಕು ಎಂದು ಅಧ್ಯಕ್ಷರು ವಿನಂತಿಸಿದರು. ಆ್ಯಪ್ ಅಳವಡಿಸಿಕೊಂಡವರಿಗೆ 500 ರೂ. ಗಳಿಂದ 4,000 ರೂ. ವರೆಗೆ ಒಟ್ಟು ಇದುವರೆಗೆ 2.50 ಲ. ರೂ. ನಗದು ಪ್ರೋತ್ಸಾಹಧನ ಬಹು ಮಾನ ನೀಡಲಾಗಿದೆ. ಪ್ರಸ್ತುತ ಇದನ್ನು ನಿಲ್ಲಿಸಿದ್ದು, ಮಾರ್ಚ್ ಒಳಗೆ ಎಲ್ಲ ಡೀಲರ್‌ಗಳು ಆ್ಯಪ್ ಬಳಸಿಕೊಳ್ಳಿ ಎಂದರು.
ವಾಹನಗಳಿಗೆ ಜಿಪಿಎಸ್
ನಂದಿನಿ ಹಾಲು ಪೂರೈಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಇದರಿಂದ ಡೀಲರ್‌ಗಳಿಗೆ ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಹೋಗುವುದನ್ನು ಜಿಪಿಎಸ್ ತಂತ್ರ ಜ್ಞಾನ ಮೂಲಕ ತಿಳಿಯಬಹುದು ಎಂದರು.
ಸಿಎ ವಿಶ್ವೇಶ್ ಎ.ಎಸ್.ಟಿ. ತೆರಿಗೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಆಡಳಿತ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ನಿರ್ದೇಶಕ ರಾದ ಅಶೋಕ್‌ಕುಮಾರ್ ಶೆಟ್ಟಿ, ಜಾನಕಿ ಹಂದೆ, ವ್ಯವಸ್ಥಾಪಕರಾದ ಹೇಮಶೇಖರಪ್ಪ, ಶಿವಶಂಕರ ಸ್ವಾಮಿ, ಉಪ ವ್ಯವಸ್ಥಾಪಕರಾದ ಲಕ್ಕಪ್ಪ, ಮುನಿರತ್ನಮ್ಮ ಉಪಸ್ಥಿತರಿದ್ದರು.