Advertisement
ಬಂಧಿತ ಇರ್ಫಾನ್ ಅಕೋ ಜನರಲ್ ಇನ್ಶೂರೆನ್ಸ್ ಕಂಪನಿಯ ಅಪ್ಲಿಕೇಶನ್‌ನಲ್ಲಿ ತನ್ನ ಮೊಬೈಲ್ ನಂಬರ್, ಇ-ಮೇಲ್ ಐಡಿ, ಆಧಾರ್ ಕಾರ್ಡ್ ನಂಬರ್ ನೀಡಿ ನೋಂದಣಿ ಮಾಡಿಕೊಂಡಿದ್ದ. 14 ಸಾವಿರ ರೂ. ಪಾವತಿಸಬೇಕಾದ ಇನ್ಶೂರೆನ್ಸ್ ಗೆ ಕ್ಲಾಸ್ ಆಫ್ ವೆಹಿಕಲ್ ಅನ್ನು ಬದಲಾಯಿಸಿ ತನ್ನ ಮನಸ್ಸಿಗೆ ತೋಚಿದ ಬೇರೆ, ಬೇರೆ ವ್ಯಕ್ತಿಗಳ ಹೆಸರು ಮತ್ತು ವಾಹ ನಗಳ ಮೇಕ್ ಮಾಡೆಲ್‌ಗಳನ್ನು ಟಿವಿಎಸ್, ಟಿವಿಎಸ್ 50, ಸ್ಕೂಟಿ, ಚಾಂಪ್, ಎಕ್ಸ್‌ಎಲ್ ಸೂಪರ್ ಎಂದು ನಮೂದಿಸಿ ಇನ್ಶೂರೆನ್ಸ್ ನವೀಕರಣ ಮಾಡುತ್ತಿದ್ದ. ನಂತರ 500 ರಿಂದ 700 ರೂ. ಅನ್ನು ಪಾವತಿಸಿ ಪ್ರತಿ ವಾಹನಕ್ಕೆ 300 ರೂ.ಗಳಷ್ಟು ಕಮಿಷನ್ ಪಡೆದು ಕೊಂಡು ವಂಚಿಸಿದ್ದ ಎಂಬುದು ಪೊಲೀಸ್ ತನಿಖೆ ಯಲ್ಲಿ ಪತ್ತೆಯಾಗಿದೆ.
Related Articles
Advertisement
ಸಾರ್ವಜನಿಕರೇ ಎಚ್ಚರ : ಆನ್‌ಲೈನ್ ಇನ್ಶೂರೆನ್ಸ್ ಅಪ್ಲಿಕೇಶನ್ ಮೂಲಕ ದೇಶಾದ್ಯಂತ 2ಲಕ್ಷಕ್ಕೂ ಹೆಚ್ಚಿನ ವಾಹನಗಳ ನಕಲಿ ಇನ್ಶೂರೆನ್ಸ್‌ಗಳನ್ನು ಮಾಡಿ ವಂಚಿಸಿರುವ ಸುಳಿವು ಸಿಕ್ಕಿದೆ. ಪೊಲೀಸರು ಇಂತಹ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದಿನ ದಿನ ಗಳಲ್ಲಿ ಸಾರ್ವಜನಿಕರು ಇನ್ಶೂರೆನ್ಸ್ ಏಜೆಂಟ್ ಗಳಿಂದ ತಮ್ಮ ವಾಹನಗಳಿಗೆ ಇನ್ಶೂರೆನ್ಸ್ ಮಾಡಿ ಸುವಾಗ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿ ದ್ದರೆ ವಾಹನಗಳಿಗೆ ಮಾಡಿದ ಇನ್ಶೂರೆನ್ಸ್ ಕ್ಲೈಮ್ ಮಾಡಿಕೊಳ್ಳುವ ವೇಳೆ ಪಶ್ಚಾತಾಪ ಪಡಬೇಕಾಗು ತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿಗೆ ದ್ವಿಚಕ್ರ ವಾಹನಗಳ ವಿಮೆ : ಆರೋಪಿ ಇರ್ಫಾನ್ ಧಾರವಾಡದಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ಆತ ಈ ಖಾಸಗಿ ವಿಮಾ ಕಂಪನಿ ಮೂಲಕ ನೂರಾರು ಕಾರುಗಳಿಗೆ ದ್ವಿಚಕ್ರವಾಹನದ ವಿಮೆ ಮಾಡಿಸಿ ದ್ವಿಚಕ್ರವಾಹನದ ಇನ್ಶೂರೆನ್ಸ್ ಪಾವತಿಸಿದ್ದ. ಇನ್ಶೂರೆನ್ಸ್ ಪಾವತಿ ಆದ ಕೂಡಲೇ ಆರ್‌ಟಿಓ ಆನ್‌ಲೈನ್ ದಾಖಲೆಯಲ್ಲಿ ಇನ್ಶೂರೆನ್ಸ್ ಅವಧಿಯ ದಿನಾಂಕ ಅಪಡೇಟ್ ಆಗುತ್ತದೆ. ಆದರೆ, ಯಾವ ಮೊತ್ತದ ಇನ್ಶೂರೆನ್ಸ್ ಎಂಬುದು ಪತ್ತೆಯಾಗುವುದಿಲ್ಲ. ಇದನ್ನೇ ಆರೋಪಿ ಬಂಡವಾಳ ಮಾಡಿಕೊಂಡು ಕಮರ್ಷಿಯಲ್ ಕಾರುಗಳಿಗೆ ಬೈಕ್ ಇನ್ಶೂರೆನ್ಸ್ ಪಾವತಿಸುತ್ತಿದ್ದ. ಅಕೋ ಜನರಲ್ ಇನ್ಶೂರೆನ್ಸ್ ವಿಮಾ ಕಂಪನಿಗೆ ಇದುವರೆಗೂ ಸುಮಾರು 2 ಕೋಟಿ ರೂ. ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇರ್ಫಾನ್ ಸಹೋದರ ಮನ್ಸೂರ್ ಕಾರ್ ಡೀಲರ್ ಆಗಿದ್ದಾನೆ. 2020ರಲ್ಲಿ ಕೋವಿಡ್ ವೇಳೆ ಚಾಲಕರಿಲ್ಲದೇ ಓಲಾ ಕಂಪನಿ ಎರಡೂವರೆ ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಆ ವೇಳೆ ಇನ್ಶೂರೆನ್ಸ್ ಮುಗಿದಿದ್ದ 140 ಕಾರುಗಳನ್ನು ಮನ್ಸೂರ್ ಖರೀದಿಸಿದ್ದ. ಈ ಕಾರುಗಳಿಗೆ ಇದೇ ಮಾದರಿಯಲ್ಲಿ ಆರೋಪಿ ಇರ್ಫಾನ್ ನಕಲಿ ಇನ್ಶೂರೆನ್ಸ್ ಮಾಡಿಸಿಕೊಟ್ಟಿದ