ಕೋವಿಡ್ 19 ವೈರಸ್ ರೋಗಿಗಳ ಆರೈಕೆ, ಶುಶ್ರೂಷೆಯಲ್ಲಿ ತೊಡಗಿರುವ ದೇಶದ ಲಕ್ಷಾಂತರ ವೈದ್ಯರು, ವೈದ್ಯಕೀಯ ಸಿಬಂದಿಗಾಗಿ ಕೇಂದ್ರ ಸರಕಾರ ಇತ್ತೀಚೆಗೆ ಪ್ರಕಟಿಸಿದ್ದ 50 ಲಕ್ಷ ರೂ. ಮೊತ್ತ ಜೀವ ವಿಮೆಯ ವಿವರಗಳನ್ನು ಸರ್ಕಾರಿ ಸ್ವಾಮ್ಯದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‌ನ ಅಡಿಯಲ್ಲೇ ಘೋಷಣೆಯಾಗಿರುವ ಈ ಜೀವವಿಮೆಯ ಅವಧಿ 90 ದಿನಗಳವರೆಗೆ ಇರಲಿದ್ದು, ಪ್ರತಿ ವಿಮೆಯ ಮೊತ್ತ 50 ಲಕ್ಷ ರೂ. ಆಗಿರಲಿದೆ.
ವಿಮಾ ಮೊತ್ತ ಎಷ್ಟು?: ಪ್ರತಿಯೊಬ್ಬರಿಗೂ 50 ಲಕ್ಷ ರೂ.
ರಿಸ್ಕ್ ಅಥವಾ ಕವರೇಜ್ ವಿವರ: ಆಕಸ್ಮಿಕ ಸಾವು (ಕೋವಿಡ್ 19 ವೈರಸ್ ಪರಿಣಾಮವೂ ಸೇರಿ)
ನಗದು ಪರಿಹಾರ ನೀಡಿಕೆ
ರಾಜ್ಯ, ಕೇಂದ್ರ ಸರಕಾರದ ಸಂಸ್ಥೆಯಿಂದ ಪ್ರಮಾಣ ಪತ್ರ ಸಲ್ಲಿಸಬೇಕು.
ಬಳಿಕ ವಿಮೆದಾರರಿಗೆ ಅಥವಾ ಸಂಬಂಧಿಗಳಿಗೆ ಹಣ ಹಸ್ತಾಂತರ.
ಕ್ಲೇಮ್ ಪ್ರಕ್ರಿಯೆ
– ಉಳಿದ ಕ್ಲೇಮುಗಳ ಮಾದರಿಯಲ್ಲಿ ನಿರ್ವಹಣೆ
– ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಇಲಾಖೆಯ ಸಂಸ್ಥೆಗಳು, ವಿಮಾ ಕಂಪನಿಗಳ ಮೂಲಕವೇ ಇತ್ಯರ್ಥ