Advertisement

“ಮಹಿಳೆಯರನ್ನು ಅವಮಾನಿಸುವುದು ಸಹಿಸಲಾಗದು’

10:03 PM Dec 29, 2020 | Team Udayavani |

ಕಾಸರಗೋಡು: ಇತ್ತೀಚಿನ ದಿನಗಳಲ್ಲಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಅವಮಾನಿಸುವ ಕೃತ್ಯಗಳು ಅತ್ಯಧಿಕಗೊಳ್ಳುತ್ತಿದೆ. ಅಪಮಾನವನ್ನು ಯಾವ ಕಾರಣಕ್ಕೂ ಸಹಿಸಲಾಗದು ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಷಾಹಿದಾ ಕಮಾಲ್‌ ಅವರು ಹೇಳಿದರು.

Advertisement

ಕಾಸರಗೊಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್‌ ಅನಂತರ ಅವರು ಮಾತನಾಡಿದರು. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣ, ಸೈಬರ್‌ ಕಾನೂನು ಪ್ರಬಲಗೊಳಿಸಬೇಕಾದುದು ಇಂದು ಅನಿವಾರ್ಯವಾಗಿದೆ. ಸಾಮಾಜಿಕ ಜಾಲ ತಾಣಗಳ ಮೂಲಕ ಮಹಿಳೆಯರನ್ನು ಸಮಾಜದ ಮುಂದೆ ಕೀಳುಮಟ್ಟದಲ್ಲಿ ಚಿತ್ರಿಸುವ ಮೂಲಕ ಅವರನ್ನು ಮಾನಸಿ ಕವಾಗಿ ಬೇಟೆಯಾಡುವ ಮನೋ ಭಾವ ಇಂಥಾ ಕೃತ್ಯಗಳಿಗೆ ಕಾರಣ ಎಂದವರು ತಿಳಿಸಿದರು.

ಲಾಕ್‌ಡೌನ್‌ಗಿಂತ ಹಿಂದೆ ಲಭಿಸಿದ್ದ ದೂರಗಳೇ ಅಧಿಕವಾಗಿದ್ದುವು. ಲಾಕ್‌ಡೌನ್‌ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪರಿಶೀಲನೆಗೆ ಅರ್ಹವಾದ ಯಾವುದೇ ದೂರುಗಳು ಲಭಿಸಿಲ್ಲ ಎಂದು ಮಹಿಳಾ ಆಯೋಗದ ಸದಸ್ಯರಾದ ಇ.ಎಂ. ರಾಧಾ, ಷಾಹಿಮಾ ಕಮಾಲ್‌ ತಿಳಿಸಿದರು. ಲಾಕ್‌ ಡೌನ್‌ ಅವಧಿಯಲ್ಲಿ ಲಭಿಸಿದ್ದ ಕೆಲವು ದೂರುಗಳನ್ನು ಆಯಾ ಪೊಲೀಸ್‌ ಠಾಣೆಗಳ ಹೌಸ್‌ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರು ವುದಾಗಿ ಮಹಿಳಾ ಆಯೋಗ ತಿಳಿಸಿದೆ.

ಅದಾಲತ್‌ನಲ್ಲಿ ಪರಿಶೀಲಿಸಲಾದ ದೂರುಗಳಲ್ಲಿ ಬಹುತೇಕ ಕುಟುಂಬ ಕಲಹ, ನೌಕರಿ ಸಂಸ್ಥೆಗಳಲ್ಲಿನ ಸಮಸ್ಯೆ, ಆರ್ಥಿಕ ಸಮಸ್ಯೆ ಇತ್ಯಾದಿಗಳಿಗೆ ಸಂಬಂಧಿಸಿದ್ದುವು. ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಓರ್ವ ವಿರುದ್ಧ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಡೆಸಿದ್ದ ಸೈಬರ್‌ ದೌರ್ಜನ್ಯ ಸಂಬಂಧ ಲಭಿಸಿರುವ ದೂರನ್ನು ಮುಂದಿನ ಅದಾಲತ್‌ನಲ್ಲಿ ಪರಿಶೀಲಿಸಲಾಗುವುದು ಎಂದು ಆಯೋಗದ ಸದಸ್ಯರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ನೇತೃತ್ವದಲ್ಲಿ ನಡೆಯಿತು. ಕಾಸರಗೋಡು ಮಹಿಳಾ ಘಟಕದ ಎಸ್‌. ಐ. ಸಿ. ಭಾನುಮತಿ, ನ್ಯಾಯವಾದಿಗಳಾದ ಎ.ಪಿ. ಉಷಾ, ರೇಣುಕಾದೇವಿ, ಸೀನಿಯರ್‌ ಸಿ.ಪಿ.ಒ.ಪಿ. ಶೀಲಾ, ಸಿ.ಪಿ.ಒ. ಜಯಶ್ರೀ, ಸದಸ್ಯೆ ರಮ್ಯಾ ಚಟುವಟಿಕೆ ನಡೆಸಿದರು.

Advertisement

37 ದೂರುಗಳ ಪರಿಶೀಲನೆ: 12 ಕೇಸುಗಳಲ್ಲಿ ತೀರ್ಪು
ಸೋಮವಾರ ನಡೆದ ಮಹಿಳಾ ಆಯೋಗದ ಅದಾಲತ್‌ನಲ್ಲಿ 37 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 12 ದೂರುಗಳಿಗೆ ತೀರ್ಪು ನೀಡಲಾಗಿದೆ. 4 ದೂರುಗಳಲ್ಲಿ ವಿವಿಧ ಇಲಾಖೆಗಳ ವರದಿ ಆಗ್ರಹಿಸಲಾಗಿದ್ದು, ಮುಂದಿನ ಅದಾಲತ್‌ನಲ್ಲಿ ಪರಿಶೀಲಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next