Advertisement

ಅಧಿಕಾರಿಗಳ ನಿರ್ಲಕ್ಷ್ಯ : ಕುಂದಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

10:22 PM Jun 12, 2021 | Team Udayavani |

ಶಿಡ್ಲಘಟ್ಟ: ಗ್ರಾಮ ಪಂಚಾಯಿತಿಗಳ ಮುಂದೆ ರಾಷ್ಟ್ರಧ್ವಜರೋಹಣ ಮತ್ತು ಆರೋಹಣ ಮಾಡಬೇಕೆಂದು ನಿಯಮಗಳಿದ್ದರು ಸಹ ತಾಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಯಿಂದ ರಾಷ್ಟ್ರಧ್ವಜ ನೆನೆದರು ಅದನ್ನು ಕೆಳಗಿಳಿಸದೆ ಅಪಮಾನ ಮಾಡಿರುವ ಘಟನೆ ನಡೆದಿದೆ.

Advertisement

ರಾಷ್ಟ್ರಧ್ವಜರೋಹಣಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸಿದರು ಸಹ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರದಂದು ಸುರಿದ ಮಳೆಗೆ ರಾಷ್ಟ್ರಧ್ವಜ ನೆನೆದರು ಸಹ ಅದನ್ನು ಕೆಳಿಗಿಳಿಸದೆ ನಿರ್ಲಕ್ಷ್ಯವಹಿಸಿ ಅಪಮಾನಗೊಳಿಸಿದ್ದಾರೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳ ಕೇಂದ್ರಗಳ ಮುಂದೆ ಬೆಳಿಗ್ಗೆ ರಾಷ್ಟ್ರಧ್ವಜರೋಹಣ ಮಾಡಿ ನಂತರ ಸಂಜೆ ಇಳಿಸಲು ಆದೇಶ ಹೊರಡಿಸಿತ್ತು ಆದರೇ ರಾಷ್ಟ್ರಧ್ವಜವನ್ನು ಇಳಿಸುವ ವಿಚಾರದಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದೆ.

ಎರಡನೇ ಶನಿವಾರದಂದು ಗ್ರಾಮ ಪಂಚಾಯಿತಿಯಲ್ಲಿ ಮಳೆ ಬಂದಾಗ ಯಾರು ಇದ್ದರು ಇರಲಿಲ್ಲವೋ ಗೊತ್ತಿಲ್ಲ ಆದರೇ ಮಳೆ ಬೀಳುತ್ತಿದ್ದರು ಸಹ ರಾಷ್ಟ್ರಧ್ವಜವನ್ನು ಕೆಳಿಗಿಳಿಸದೆ ಅಪಮಾನಗೊಳಿಸಲಾಗಿದೆ ಕೂಡಲೇ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕೆಂದು ರಾಷ್ಟ್ರಪ್ರೇಮಿಗಳು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರಾಷ್ಟ್ರಧ್ವಜವನ್ನು ಮಳೆ ಬಂದ ತಕ್ಷಣ ಗ್ರಾಮ ಪಂಚಾಯಿತಿ ಸಿಬ್ಬಂದಿ ಇಳಿಸಿದ್ದಾರೆ ಆದರೂ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸುತ್ತೇನೆ.        ಚಂದ್ರಕಾಂತ್ ಇಓ ತಾಪಂ ಶಿಡ್ಲಘಟ್ಟ.

Advertisement

Udayavani is now on Telegram. Click here to join our channel and stay updated with the latest news.

Next