Advertisement

Insult Flag: ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡಲ್ಲ: ಭಾರತದ ಹಲವು ಆಸ್ಪತ್ರೆಗಳ ನಿರ್ಧಾರ

03:40 AM Dec 01, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶದ ಕಾಲೇಜು ಆವರಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸಿದ ಬೆನ್ನಲ್ಲೇ ಆ ದೇಶದ ಪ್ರಜೆಗಳಿಗೆ ಚಿಕಿತ್ಸೆ ನೀಡದಿರಲು ಕೋಲ್ಕತಾ, ತ್ರಿಪುರಾದ ಕೆಲವು ಆಸ್ಪತ್ರೆಗಳು ನಿರ್ಧರಿಸಿವೆ. ಇದೇ ನೀತಿಯನ್ನು ಅನುಸರಿಸುವಂತೆ ಇತರ ಆಸ್ಪತ್ರೆಗಳಿಗೂ ಆಗ್ರಹಿಸಿವೆ.

Advertisement

ಕೋಲ್ಕತಾದ ಮಾಣಿಕ್‌ ತಲಾದಲ್ಲಿರುವ ಜೆಎನ್‌ ರಾಯ್‌ ಆಸ್ಪತ್ರೆ ಮೊದಲು ಈ ನಿರ್ಧಾರ ಘೋಷಿಸಿತು. ಈ ಬಗ್ಗೆ ಆಸ್ಪತ್ರೆ ಅಧಿಕಾರಿ ಸುಭ್ರಾಂಶು ಭಕ್ತ್‌  ಮಾಹಿತಿ ನೀಡಿ, “ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ಎಸಗಲಾಗುತ್ತಿದೆ. ಅದಕ್ಕೆ ನಾವು ಸಾಕ್ಷಿಯಾಗುವ ಪರಿಸ್ಥಿತಿ ಎದುರಾಗಿದೆ.

ಇದನ್ನು ಖಂಡಿಸಿ ನಮ್ಮ ಆಸ್ಪತ್ರೆಯಲ್ಲಿ ಬಾಂಗ್ಲಾದ ಪ್ರಜೆ ಗಳಿಗೆ ಚಿಕಿತ್ಸೆ ನೀಡದಿರಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. ಇದೇ ತೀರ್ಮಾನವನ್ನು ತ್ರಿಪುರಾದ ಅಗರ್ತಲಾದಲ್ಲಿರುವ ಐಎಲ್‌ಎಸ್‌ ಆಸ್ಪತ್ರೆ, ಅಖೌರಾದಲ್ಲಿರುವ ಚೆಕ್‌ ಪೋಸ್ಟ್‌, ಐಎಲ್‌ಎಸ್‌ ಆಸ್ಪತ್ರೆಯಲ್ಲಿ ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡದಿರಲು ನಿರ್ಧರಿಸಿದೆ.

ವಿವಿಗಳಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ
ಬಾಂಗ್ಲಾದೇಶ ಯೂನಿವರ್ಸಿಟಿ ಆಫ್ ಎಂಜಿನಿಯರಿಂಗ್‌ ಟೆಕ್ನಾಲಜಿ, ಢಾಕಾ ಯೂನಿವರ್ಸಿಟಿ, ನೊಖಾಲಿ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ವಿವಿಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನೆಲದ ಮೇಲೆ ಹಾಸಿ, ಅದರ ಮೇಲೆಯೇ ವಿದ್ಯಾರ್ಥಿಗಳು ಓಡಾಡುತ್ತಿದ್ದುದು ವರದಿಯಾಗಿತ್ತು. ಈ ಫೋಟೋಗಳು ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು.

ಚಿನ್ಮಾಯ್‌ ದಾಸ್‌ ಬಿಡುಗಡೆಗೆ ಆರೆಸ್ಸೆಸ್‌ ಆಗ್ರಹ
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟಿ, ಹಿಂದೂ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆರೆಸ್ಸೆಸ್‌ ಆಗ್ರಹಿಸಿದೆ.

Advertisement

ಈ ಬಗ್ಗೆ ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಬಾಂಗ್ಲಾದ ಹಿಂದೂಗಳು ಸ್ವಯಂ ರಕ್ಷಣೆಗಾಗಿ ಕಾನೂನಾತ್ಮಕವಾಗಿ ಧ್ವನಿ ಎತ್ತಿದರು. ಅದನ್ನು ಹತ್ತಿಕ್ಕಲೆಂದೇ ಹೊಸ ಸಂಚು ರೂಪಿಸಿ, ದೌರ್ಜನ್ಯ ಎಸಗಲಾಗುತ್ತಿದೆ. ದೌರ್ಜನ್ಯ ತಡೆಗಟ್ಟಬೇಕಿದ್ದ ಯೂನುಸ್‌ ನೇತೃತ್ವದ ಮಧ್ಯಾಂತರ ಸರಕಾರ ಮೂಕ ಪ್ರೇಕ್ಷಕನಾಗಿದೆ. ಕೃಷ್ಣದಾಸ್‌ರನ್ನು ಬಿಡುಗಡೆಗೊಳಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next