Advertisement

ಕಾಲೇಜುಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸುವಂತೆ ಸೂಚನೆ

10:06 PM Nov 09, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ರಕ್ತದ ಕೊರತೆ ಕಂಡು ಬಾರದಂತೆ ಮುಂಜಾಗ್ರತೆ ವಹಿಸಬೇಕಿರುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳು ಸರ್ಕಾರಿ ರಕ್ತಕೇಂದ್ರಗಳ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

Advertisement

ಜಿಲ್ಲೆಗಳಲ್ಲಿರುವ ರಕ್ತ ಕೇಂದ್ರಗಳು ನೋಡಲ್‌ ರಕ್ತಕೇಂದ್ರಗಳಾಗಿದ್ದು, ಜಿಲ್ಲೆಯ ಎಲ್ಲಾ ರಕ್ತ ಶೇಖರಣಾ ಘಟಕಗಳಿಗೆ ರಕ್ತವನ್ನು ಪೂರೈಸ ಬೇಕಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ, ಸರ್ಕಾರೇತರ, ವೈದ್ಯಕೀಯ ಮತ್ತು ಖಾಸಗಿ ಆಸ್ಪತ್ರೆಯ ರಕ್ತಕೇಂದ್ರಗಳು ಸಂಪೂರ್ಣವಾಗಿ ರಕ್ತದಾನದಿಂದಲೇ ರಕ್ತವನ್ನು ಸಂಗ್ರಹಿಸಬೇಕಿದೆ.

ಇದನ್ನೂ ಓದಿ:ಹೆಚ್ಚಿಸಿದ ತೈಲ ಬೆಲೆಯ ಪಾಲು ರಾಜ್ಯಗಳಿಗೂ ಬರಲಿ

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಕೇವಲ ದಾನಿಗಳಿಂದಲೇ ಪಡೆಯಬೇಕಿರುವುದರಿಂದ ಯುವ ಜನರಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿ ರಕ್ತದಾನಿಗಳನ್ನು ಪ್ರೋತ್ಸಾಹಿಸಿ, ಪ್ರೇರೇಪಿಸುವ ಜೊತೆಗೆ ರಕ್ತದಾನದ ಮಹತ್ವ ತಿಳಿಸುವ ಮೂಲಕ ಅರಿವು ಮೂಡಿಸಬೇಕಿದೆ. ಈ ಮೂಲಕ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರಗಳನ್ನು ನಡೆಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next