ಉಳ್ಳಾಲ: ಯೇನಪೊಯಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಘಟಕ ಯೇನಪೊಯ ಫೌಂಡೇಶನ್ ಹಾಗೂ ಯೇನಪೊಯ ವಿಶ್ವವಿದ್ಯಾನಿಲಯದ ಸಹಯೋಗ ದೊಂದಿಗೆ ಶೇ. 100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರತಿಭಾಪುರಸ್ಕಾರ ಪ್ರದಾನ ಕಾರ್ಯಕ್ರಮ ಶನಿವಾರ ಯೇನಪೊಯ ವಿ.ವಿ. ಕ್ಯಾಂಪಸ್‌ನಲ್ಲಿರುವ ಯೆಂಡ್ನೂರೆನ್ಸ್ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ನಾಸಿರ್ ಅಹ್ಮದ್ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಗೌರವಿಸುವ ಮೂಲಕ ಯೇನಪೊಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಉನ್ನತ ಶಿಕ್ಷಣಕ್ಕೆ
ರಾಜ್ಯ ಸರಕಾರವೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಲ್ಪ ಸಂಖ್ಯಾಕ ಅಭಿವೃದ್ಧಿ ನಿಗಮದಡಿ ವಿದೇಶದಲ್ಲಿ ಕಲಿಯುವ ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ 10 ಲಕ್ಷ ರೂ.ವನ್ನು ಈ ಬಾರಿ 20 ಲಕ್ಷರೂ.ಗೇರಿಸಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 367 ವಿದ್ಯಾರ್ಥಿ ಗಳಿಗೆ ಅನುದಾನ ಮಂಜೂರು ಮಾಡಿದೆ ಎಂದರು.
ಯೇನಪೊಯ ವಿ.ವಿ. ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಮಾತನಾಡಿ, ಯೇನಪೊಯ ಸಂಸ್ಥೆ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೈದ ಸಂಸ್ಥೆಗಳನ್ನು ಗುರುತಿ ಸುವ ಕೆಲಸ ಮಾಡುತ್ತಿದ್ದು, ಆ ಮೂಲಕಇತರ ಶೈಕ್ಷಣಿಕ ಸಂಸ್ಥೆಗಳು ಉತ್ತಮ ಸಾಧನೆ ತೋರಲು ಅವಕಾಶ ಮಾಡಿ ಕೊಟ್ಟಿದೆ. ಇದರೊಂದಿಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳಲ್ಲಿ ಕಲಿಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಉಚಿತ ಸೀಟು ನೀಡುವ ಕಾರ್ಯ ನಡೆಸುತ್ತಿದೆ ಎಂದರು. ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ 307 ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶೇ. 100 ಫಲಿತಾಂಶ ದಾಖಲಿಸಿದ 17 ಶೈಕ್ಷಣಿಕ ಸಂಸ್ಥೆಗಳನ್ನು ಗೌರವಿಸಲಾಯಿತು.
ಯೇನಪೊಯ ಫೌಂಡೇಶನ್ ಚೇರ್‌ವೆುನ್ ವೈ. ಮಹಮ್ಮದ್ ಕುಂಞಿಅಧ್ಯಕ್ಷತೆ ವಹಿಸಿದ್ದರು. ಯೇನಪೊಯ ವಿ.ವಿ. ಕುಲಪತಿ ಡಾ| ಕೆ. ವಿಜಯ್ ಕುಮಾರ್, ಡಾ| ಅಖ್ತರ್ ಹುಸೈನ್, ಖಾಲಿದ್ ಬಾವಾ, ಶಫಿ ಅಹ್ಮದ್, ಯೇನಪೊಯ ವಿ.ವಿ. ಕುಲಸಚಿವ ಡಾ| ಎಸ್.ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.ಟ್ರಸ್ಟಿ ಅಬ್ದುಲ್ಲ ಜಾವೇದ್ ಸ್ವಾಗತಿಸಿದರು. ರೋಶೆಲ್ ಟೆಲ್ಲಿಸ್ ಹಾಗೂ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರ್ವ ಹಿಸಿದರು. ಯೇನಪೊಯ ವಿ.ವಿ.ಯ ವೈ. ಮೊಯ್ದಿನ್ ಖುರ್ಷಿದ್ ಅವರು ವಂದಿಸಿದರು.