ಚೆನ್ನೈ: ಪ್ರತೀ ವರ್ಷ ನ.1ರಂದು ನಡೆಯುವ ತಮಿಳುನಾಡು ರಾಜ್ಯೋತ್ಸವದ ದಿನಾಂಕವನ್ನು ಬದಲಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ. ಇನ್ನು ಮುಂದೆ ನ.1ರ ಬದಲು ಜುಲೈ 18ರಂದು ರಾಜ್ಯೋತ್ಸವ ನಡೆಸಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.
1956ರ ನ.1ರಂದು ಭಾಷಾವಾರು ಪ್ರಾಂತ್ಯಗಳ ಪುನರ್‌ವಿಂಗಡಣೆಯ ಅಧಿಕೃತ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರ, ಕೇರಳ ತಮ್ಮ ರಾಜ್ಯೋತ್ಸವಗಳನ್ನು ಆಚರಿಸುತ್ತವೆ.
ಹಾಗಾಗಿ ಹಿಂದಿದ್ದ ಎಐಎಡಿಎಂಕೆ ಸರಕಾರ, 2019ರಲ್ಲಿ ನ.1ರಂದೇ ತಮಿಳುನಾಡು ರಾಜ್ಯೋತ್ಸವ ಆಚರಿಸುವಂತೆ ಆದೇಶ ಹೊರಡಿಸಿತ್ತು. ಆದರೆ ತಮಿಳು ಭಾಷಿಗರಿರುವ ನಾಡಿಗೆ ತಮಿಳುನಾಡು ಎಂದು ನಾಮಕರಣ ಮಾಡಿದ್ದು 1956ರ ಜು.18ರಂದು. ಹಾಗಾಗಿ ನಮ್ಮ ರಾಜ್ಯೋತ್ಸವವನ್ನು ಅಂದು ಮಾಡಿದರೆ ಹೆಚ್ಚು ಸೂಕ್ತ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ:80 ಸಾವಿರ ಫಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್